ಅರಸಿನಮಕ್ಕಿ:ಅಡ್ಕಾಡಿ ಸಹೋದರ ಧರ್ಮರಾಜ್ ನಾಮಪತ್ರ ಸಲ್ಲಿಕೆ

ಅರಸಿನಮಕ್ಕಿ: ಗ್ರಾ.ಪಂ ಉಪಾಧ್ಯಕ್ಷರಾಗಿದ್ದ ಜಗನ್ನಾಥ ಗೌಡ ಅಡ್ಕಾಡಿ ಅವರ ಅಕಾಲಿಕ ನಿಧನದಿಂದ ಖಾಲಿ ಇರುವ 2ನೇ ವಾರ್ಡಿನ ಒಂದು ಸ್ಥಾನಕ್ಕೆ ನ.12ರಂದು ಚುನಾವಣೆ ನಿಗದಿಗೊಳಿಸಲಾಗಿದ್ದು, ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾದ ಇಂದು (ಅ.31) ರಂದು ಜಗನ್ನಾಥ ಗೌಡ ಅಡ್ಕಾಡಿಯವರ ಸಹೋದರ ಧರ್ಮರಾಜ್ ನಾಮಪತ್ರ ಸಲ್ಲಿಸಿದರು.
ಈ ಸಂದರ್ಭದಲ್ಲಿ ತಾಲೂಕು ಜೆ.ಡಿ.ಎಸ್ ಮಹಿಳಾ ಘಟಕದ ಅಧ್ಯಕ್ಷೆ ಸಿಂಧೂದೇವಿ, ಸಂಘಟನಾ ಕಾರ್ಯದರ್ಶಿ ಪ್ರಕಾಶ್ ಹೆಬ್ಬಾರ್, ಅರಸಿನಮಕ್ಕಿ ಗ್ರಾ.ಪಂ ಅಧ್ಯಕ್ಷೆ ಶಶಿಕಲಾ ಹರಿಪ್ರಸಾದ್, ಜೆಡಿಎಸ್ ಪಕ್ಷದ ಪ್ರ. ಕಾರ್ಯದರ್ಶಿ ರಾಮ ಆಚಾರಿ, ಯುವ ಜನತಾ ದಳ ಅಧ್ಯಕ್ಷ ಸೂರಜ್ ವಳಂಬ್ರ, ಸಂ. ಕಾರ್ಯದರ್ಶಿ ಹೆಚ್ ಎನ್ ನಾಗರಾಜ್  ಸ್ಥಳೀಯ ಮುಖಂಡರಾದ ರತ್ನಾಕರ ಆಚಾರ್ಯ, ಸಹಕಾರಿ ಸಂಘದ ಉಪಾಧ್ಯಕ್ಷ ಕೇಶವ ರಾವ್, ತಾ.ಪಂ ಮಾಜಿ ಸದಸ್ಯ ವಾಮನ ತಾಮಣ್ ಕರ್   ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.