ಮಾಯಾ: ದೀಪಾವಳಿ ಪ್ರಯುಕ್ತ 37ನೇ ವರ್ಷದ ಆಟೋಟ ಸ್ಪರ್ಧೆ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಬೆಳಾಲು: ಶ್ರೀ ಮಾಯಾ ಮಹೇಶ್ವರ ಭಜನಾ ಮಂಡಳಿ ಮಾಯಾ, ಬೆಳಾಲು ಇದರ ಅಶ್ರಯದಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ 37ನೇ ವರ್ಷದ ಆಟೋಟ ಸ್ಪರ್ಧೆಗಳು ಅ.29 ರಂದು ಶ್ರೀ ಮಾಯಾ ಮಹಾದೇವ ದೇವಸ್ಥಾನದ ವಠಾರದಲ್ಲಿ ಜರುಗಿತು.
ಕ್ರೀಡಾ ಕೂಟವನ್ನು ದೇವಸ್ಥಾನದ ಅರ್ಚಕ ಕೇಶವ ರಾಮಯಾಜಿ ಉದ್ಘಾಟಿಸಿ, ಶುಭ ಹಾರೈಸಿದರು. ಮುಖ್ಯ ಅತಿಥಿಗಳಾಗಿ ಮಾಯಾ ಗುತ್ತು ಪುಷ್ಪದಂತ ಜೈನ್, ಮಂಜುಶ್ರೀ ನಿವಾಸಿ ರಘು ಎಂ. ಬ್ರಹ್ಮಾವರ, ಬೆಳಾಲು ಗ್ರಾ.ಪಂ ಸದಸ್ಯರಾದ ದಯಾನಂದ ಪಿ, ಪ್ರೇಮಾ, ಶ್ರೀ ಕ್ಷೇತ್ರ ಧ.ಗ್ರಾ. ಯೋಜನೆಯ ಸೇವಾ ಪ್ರತಿನಿಧಿ ಕು| ಆಶಾ ಭಾಗವಹಿಸಿದ್ದರು. ಭಜನಾ ಮಂಡಳಿಯ ಅಧ್ಯಕ್ಷ ವಸಂತ ಎಂ.ಕೆ, ಗೌರವಾಧ್ಯಕ್ಷ ಗಂಗಾಧರ ಸಾಲಿಯಾನ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಭಜನಾ ಮಂಡಳಿಯ ಕಾರ್ಯದರ್ಶಿ ಶಿವಕೀರ್ತಿ ಸ್ವಾಗತಿಸಿ, ಕ್ರೀಡಾ ಸಮಿತಿ ಸದಸ್ಯ ಯತಿರಾಜ ವಂದಿಸಿ, ಮಾಜಿ ಕಾರ್ಯದರ್ಶಿ ಭುವನೇಶ್ ಎ ನಿರೂಪಿಸಿದರು. ನಂತರ ಸಂಜೆಯ ವರೆಗೆ ವಿವಿಧ ವಯೋಮಾನದವರಿಗೆ ಕಬ್ಬಡ್ಡಿ, ಹಗ್ಗಜಗ್ಗಾಟ, ತ್ರೋಬಾಲ್, ಇನ್ನಿತರ ಕ್ರೀಡಾಕೂಟ ನಡೆಯಿತು.
ಸಂಜೆ ನಡೆದ ಸಮಾರೋಪದ ಅಧ್ಯಕ್ಷತೆಯನ್ನು ಭಜನಾ ಮಂಡಳಿ ಅಧ್ಯಕ್ಷ ವಸಂತ ಬಿ ಬಜೆಕ್ಕಳ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಬೆಳಾಲು ಗ್ರಾ.ಪಂ. ಅಧ್ಯಕ್ಷ ದಿನೇಶ್ ಕೋಟ್ಯಾನ್, ಶ್ರೀ ಮಾಯಾ ಮಹಾದೇವ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹೆಚ್.ಪದ್ಮಗೌಡ, ಬೆಳಾಲು ಶ್ರೀ ಧ.ಮಂ ಪ್ರೌಢಶಾಲಾ ಮುಖ್ಯೋಪಾಧ್ಯಾಯ ರಾಮಕೃಷ್ಣ ಭಟ್, ಗ್ರಾ.ಪಂ ಸದಸ್ಯೆ ಭವಾನಿ, ಅರ್ಚಕ ಶಿವಕುಮಾರ್ ಬಾರಿತ್ತಾಯ ಪಾರಳ, ಮಾಯಾ ಫ್ರೆಂಡ್ಸ್ ಅಧ್ಯಕ್ಷ, ಕ್ರೀಡಾ ಸಮಿತಿ ಸಂಚಾಲಕ ರಾಧಾಕೃಷ್ಣ ಗೌಡ ಉಪಸ್ಥಿತರಿದ್ದು, ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಿಸಿದರು.
ತೀರ್ಪುಗಾರರಾದ ಜಯರಾಜ್ ಜೈನ್, ಧರ್ಮೇಂದ್ರ ಕುಮಾರ್, ರವಿಚಂದ್ರ ಜೈನ್, ಮೋಹನ ಗೌಡ ಪಿ ಮಾಚಾರು, ಶಶಿಧರ ಒಡಿಪ್ರೊಟ್ಟು, ಸುಂದರ ಎಂ.ಕೆ, ಗೌರವ ಶಿಕ್ಷಕಿ ಚೈತ್ರಾ, ಅಂಗನವಾಡಿ ಕಾರ್ಯಕರ್ತೆ ಭಾರತಿ ಮೊದಲಾದವರು ಉಪಸ್ಥಿತರಿದ್ದು, ಭಜನಾ ಮಂಡಳಿಯ ಸದಸ್ಯರು, ಊರವರು ಸಹಕರಿಸಿದರು.
ಭಜನಾ ಮಂಡಳಿಯ ಗೌರವಾಧ್ಯಕ್ಷ ಎ ಗಂಗಾಧರ ಸಾಲಿಯಾನ್ ಸ್ವಾಗತಿಸಿ, ಕಾರ್ಯದರ್ಶಿ ಶಿವಕೀರ್ತಿ ಆಚಾರ್ಯ ಬಹುಮಾನ ವಿಜೇತರ ಪಟ್ಟಿ ವಾಚಿಸಿ, ಶಿಲ್ಪಿ ಶಶಿಧರ ಆಚಾರ್ಯ ಸನ್ಮಾನಿತರ ಪರಿಚಯವಿತ್ತರು. ಭಜನಾ ಮಂಡಳಿ ಗೌರವ ಸಲಹೆಗಾರ ಶೇಖರ ಗೌಡ ಕೊಲ್ಲಿಮಾರು ನಿರೂಪಿಸಿ, ಕ್ರೀಡಾಸಮಿತಿ ಸದಸ್ಯ ಗಣೇಶ್ ಕನಿಕ್ಕಿಲ ವಂದಿಸಿದರು.
ಸನ್ಮಾನ: ಭಜನಾ ಮಂಡಳಿಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ಪ್ರೋತ್ಸಾಹಿಸುತ್ತಿರುವ ಶಿಕ್ಷಕ, ಗುರುವಾಯನಕೆರೆ ಸಿಆರ್‌ಪಿ ಕೇಂದ್ರದ ಸಂಪನ್ಮೂಲ ವ್ಯಕ್ತಿ ರಾಜೇಶ್ ಆಚಾರ್ಯರನ್ನು ಭಜನಾ ಮಂಡಳಿ ವತಿಯಿಂದ ಸನ್ಮಾನಿಸಲಾಯಿತು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.