ರಕ್ತೇಶ್ವರಿ ಪದವು : ಭೀಕರ ಬಿರುಗಾಳಿಗೆ ರಭಸಕ್ಕೆ ಶಾಲೆಯ ಹೆಂಚಿನ ಚಾವಣಿಗೆ ಹಾನಿ

Advt_NewsUnder_1
Advt_NewsUnder_1
Advt_NewsUnder_1

ನ್ಯಾಯತರ್ಪು:ಇಲ್ಲಿಯ ರಕ್ತೇಶ್ವರಿ ಪದವು ಸರಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ಭೀಕರ ಬಿರುಗಾಳಿ ರಭಸಕ್ಕೆ ಮಾಡಿನ ಹೆಂಚುಗಳು ಗಾಳಿಯ ರಭಸದಿಂದ ಚೆಲ್ಲ-ಪಿಲ್ಲಿಯಾಗಿದೆ.ಹಾಗೂ ಶಾಲೆಯ ತರಗತಿ ಕೋಣೆಯಲ್ಲಿ ನೀರು ತುಂಬಿರುತ್ತದೆ. ಸುಮಾರು 40 ಸಾವಿರಕ್ಕೂ ಹೆಚ್ಚು ಹಾನಿಯಾಗಿರುತ್ತದೆ ಎಂದು ಸ್ಥಳೀಯರು ತಿಳಿಸಿದರು.

ಅ.29 ರಂದು ರಾತ್ರಿ ಭೀಕರ ಗಾಳಿ-ಗುಡುಗು,ಮಳೆ ಸುರಿದ ಕಾರಣ ಈ ಅನಾಹುತ ಸೃಷ್ಟಿಯಾಗಿದೆ. ವಿಷಯ ತಿಳಿದು ಶಾಲೆಯ ಅಧ್ಯಕ್ಷ ವಿಜಯ ಕುಮಾರ್ ಕಲಾಯಿತೋಟ್ಟು ಹಾಗೂ ಮಕ್ಕಳ ಪೋಷಕರು ಶಾಲೆಗೆ ಭೇಟಿ ನೀಡಿದ್ದರು. ನಂತರ ಬೆಳ್ತಂಗಡಿ ಶಾಸಕರಿಗೆ, ಕಳಿಯ ಪಂಚಾಯತ,ತಾಲೂಕು ಪಂ ಹಾಗೂ ಜಿಲ್ಲಾ ಪಂ. ಸದಸ್ಯರಿಗೆ ಮಾಹಿತಿ ನೀಡಿದರು.ಈ ಸಂದರ್ಭದಲ್ಲಿ ಶಾಲೆಯ ಮುಖ್ಯ ಶಿಕ್ಷಕಿ ಚೈತ್ರಪ್ರಭಾ ಶ್ರೀ ಶಾಂ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.