ಮಚ್ಚಿನ: ನೆತ್ತರ ಭಾಗ್ಯಶ್ರೀ ಮಿತ್ರಮಂಡಳಿ ಇದರ ವತಿಯಿಂದ ಕ್ರೀಡೋತ್ಸವ

ಮಚ್ಚಿನ: ಇಲ್ಲಿಯ ಭಾಗ್ಯಶ್ರೀ ಮಿತ್ರಮಂಡಳಿ ನೆತ್ತರ ಇದರ ವತಿಯಿಂದ ಮೊಸರುಕುಡಿಕೆ, ಗಣೇಶೋತ್ಸವ, ಸ್ವತಂತ್ರೋತ್ಸವ, ದಸರಾ ಪ್ರಯುಕ್ತ ಕ್ರೀಡೋತ್ಸವದ ಉದ್ಘಾಟನಾ ಕಾರ್ಯಕ್ರಮ ಅ.೨೯ ರಂದು ನೆತ್ತರ ಸ,ಕಿ,ಪ್ರಾ,ಶಾಲೆಯಲ್ಲಿ  ನಡೆಯಿತು.
ಕಾರ್ಯಕ್ರಮದ ಉದ್ಘಾಟನೆಯನ್ನು ಮಡವು ಕರ್ನಾಟಕ ಬ್ಯಾಂಕ್ ಮ್ಯಾನೇಜರ್ ಶ್ರೀನಿವಾಸಮೂರ್ತಿ ನೆರವೇರಿಸಿ, ಅಧ್ಯಕ್ಷತೆಯನ್ನು ಮಚ್ಚಿನ ಗ್ರಾ.ಪಂ ಅಧ್ಯಕ್ಷೆ ಹರ್ಷಲತಾ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಜಿ.ಪಂ ಸದಸ್ಯೆ ಮಮತಾ ಶೆಟ್ಟಿ,  ಶಾಲಾ ಮುಖ್ಯೋಪಾಧ್ಯಾಯ ಸೀತಾರಾಮ, ತಾ.ಪಂ ಸದಸ್ಯ ವಸಂತಿ,  ಗ್ರಾ, ಪಂ ಸದಸ್ಯ ಶಿವರಾಮ ಕಾರಂದೂರು, ಮಡಂತ್ಯಾರ್ ಗ್ರಾ.ಪಂ ಸದಸ್ಯ  ಕಿಶೋರ್ ಶೆಟ್ಟಿ ಮೂಡಾಯೂರು, ಮಡಂತ್ಯಾರು ಜೆ.ಸಿ.ಐ ಅಧ್ಯಕ್ಷ ಅರುಣ್ ಮೊರಾಸ್, ಭಾಗ್ಯಶ್ರೀ ಮಿತ್ರಮಂಡಳಿ ನೆತ್ತರ ಅಧ್ಯಕ್ಷ ರಾಮಚಂದ್ರ, ಕಾರ್ಯದರ್ಶಿ ಸುಂದರ, ಶಿಶುಪಾಲನ ಸಮಿತಿ ಅಧ್ಯಕ್ಷ ಸುಗುಣ. ಭಾಗ್ಯಶ್ರೀ ಮಿತ್ರಮಂಡಳಿ ನೆತ್ತರ ಸ್ಥಾಪಕ ಅದ್ಯಕ್ಷ ಕೃಷ್ಣಪ್ಪ ಸಾಲ್ಯಾನ್,  ನೆತ್ತರ ಎಸ್ ಡಿ ಎಂ ಅಧ್ಯಕ್ಷ ಉಮಾನಾಥ ಪೂಜಾರಿ, ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಉಮಾನಾಥ ಪೂಜಾರಿಗೆ ಸನ್ಮಾನಿಸಲಾಯಿತು. ನಂತರ ಮಕ್ಕಳಿಗೆ ಆಟೋಟ ಸ್ಪರ್ಧೆ ನಡೆಸಲಾಯಿತು. ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಗ್ರಾ.ಪಂ ಉಪಾಧ್ಯಕ್ಷ ಚಂದ್ರಶೇಖರ್ ವಹಿಸಿದ್ದರು. ಬಿ.ಎಸ್, ಮಚ್ಚಿನ ಗ್ರಾ.ಪಂ ಸದಸ್ಯ ಪ್ರಮೋದ್ ಕುಮಾರ್, ಸ್ಥಳೀಯರಾದ ಮಡಂತ್ಯಾರ್ ಶ್ರೀ ದುರ್ಗಾ ಟೆಕ್ಸ್‌ಟೈಲ್ಸ್ ಮೋಹನ್ ಚೌಧರಿ, ರಾಧಾಕೃಷ್ಣ ನೆತ್ತರ, ಸುಕೇಶ್ ಎಮ್, ಹರ್ಷ ನಾರಾಯಣ ಶೆಟ್ಟಿ, ಮೋನಪ್ಪ ಪೂಜಾರಿ, ಉಮಾನಾಥ ಪೂಜಾರಿ ಉಪಸ್ಥಿತರಿದ್ದರು. ನಂತರ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಮಹಾಬಲ ದೇವಾಡಿಗ ಸ್ವಾಗತಿಸಿ, ಸದಾಶಿವ ಹೆಗ್ಡೆ ಕಾರ್ಯಕ್ರಮ ನಿರೂಪಿಸಿದರು. ಹೇಮಂತ್ ಶೆಟ್ಟಿ ಧನ್ಯವಾದವಿತ್ತರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.