ಕಣಿಯೂರು: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ ಗುರುವಾಯನಕೆರೆ ಯೋಜನಾ ಕಛೇರಿ ವ್ಯಾಪ್ತಿಯ ಕಣಿಯೂರು ವಲಯದ ನೇಜಿಕಾರು ವಿಭಾಗದ ರಾಜರಾಜೇಶ್ವರಿ ಜ್ಞಾನವಿಕಾಸ ಕೇಂದ್ರದ ಅಧ್ಯಯನ ಪ್ರವಾಸವು ಇತ್ತೀಚಿಗೆ ನಡೆಯಿತು.
ಸದಸ್ಯರ ಜ್ಞಾನವೃದ್ಧಿಗಾಗಿ ವಿವಿಧ ಸ್ವಉದ್ಯೋಗ ಘಟಕಗಳ ಭೇಟಿ, ಹಾಗೂ ರೈತಬಂಧು ಅಕ್ಕಿ ಗಿರಣಿ ಘಟಕ ಪಿಲಿಗುಡು, ಉಜಿರೆ ಸಿರಿ ಸಂಸ್ಥೆಯ ಹೊಲಿಗೆ ತಯಾರಿಕಾ ಘಟಕ, ಸಿರಿ ಸಂಸ್ಥೆ ಉಜಿರೆ, ವಿವಿಧ ಪ್ರೇಕ್ಷಣೀಯ ಸ್ಥಳಗಳಾದ ಧರ್ಮಸ್ಥಳ, ನೆಲ್ಯಾಡಿಬೀಡು, ಬಾಹುಬಲಿ ಬೆಟ್ಟ, ಚಂದ್ರನಾಥ ಬಸದಿ, ಕಾರ್ ಮ್ಯೂಸಿಯ, ವಸ್ತುಸಂಗ್ರಹಾಲಯಗಳಿಗೆ ಬೇಟಿ ನೀಡಲಾಯಿತು.
ಸಿರಿ ಸಂಸ್ಥೆಯ ನಿರ್ದೇಶಕ ಕೆ.ಎನ್ ಜನಾರ್ದನ್ ರವರು ಸಿರಿ ಸಂಸ್ಥೆಯ ಕಾರ್ಯಚಟುವಟಿಕೆ ಬಗ್ಗೆ ಮಾಹಿತಿ ನೀಡಿದರು. ಇದೇ ಸಂದರ್ಭ ಉಪಸ್ಥಿತರಿದ್ದ ಸಿರಿ ಸಂಸ್ಥೆಯ ಯೋಜನಾಧಿಕಾರಿ ರೋಹಿತಾಕ್ಷ, ಸಂಸ್ಥೆ ಬೆಳೆದು ಬಂದ ರೀತಿ ಬಗ್ಗೆ ತಿಳಿಸಿದರು.
ಸೇವಾಪ್ರತಿನಿಧಿ ಸ್ವಾತಿ ಗುರುವಾಯನಕೆರೆ, ತಾಲೂಕು ಜ್ಞಾನವಿಕಾಸ ಸಮನ್ವಯಾಧಿಕಾರಿ ಹರಿಣಿ ಎಂ, ಕಣಿಯುರು ವಲಯದ ಮೇಲ್ವಿಚಾರಕ ಮಾಧವ ಉಪಸ್ಥಿತರಿದ್ದರು.