ಮಡಂತ್ಯಾರು ಕೃಷಿ ಪತ್ತಿನ ಸಹಕಾರಿ ಸಂಘ: ಅಧ್ಯಕ್ಷರಾಗಿ ಅರವಿಂದ್ ಜೈನ್, ಉಪಾಧ್ಯಕ್ಷರಾಗಿ ಧನಲಕ್ಷ್ಮೀ ಆಯ್ಕೆ

Advt_NewsUnder_1
Advt_NewsUnder_1

ಮಡಂತ್ಯಾರು: ಇಲ್ಲಿನ ಮಡಂತ್ಯಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಆಡಳಿತ ಮಂಡಳಿಯ ಮುಂದಿನ 5 ವರ್ಷಗಳ ಅವಧಿಗೆ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆಯು ಇಂದು (ಅ.25) ನಡೆಯಿತು
ಅಧ್ಯಕ್ಷ ಸ್ಥಾನಕ್ಕಾಗಿ ಅರವಿಂದ್ ಜೈನ್ ಹಾಗೂ ಧರ್ಣಪ್ಪ ಗೌಡ ಹಾಗೂ ಉಪಾಧ್ಯಕ್ಷ ಸ್ಥಾನಕ್ಕಾಗಿ ಧನಲಕ್ಷ್ಮೀ ಹಾಗೂ ತುಳಸಿ ಜಿ ಹಾರಬೆ ನಾಮಪತ್ರ ಸಲ್ಲಿಸಿದ್ದರು.
ಮತ ಎಣಿಕೆ ನಡೆದು ಅರವಿಂದ್ ಜೈನ್‌ರವರು 8 ಮತಗಳಿಸಿ, ಅಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾಗಿದ್ದಾರೆ. ಧರ್ಣಪ್ಪ ಗೌಡರವರು 5 ಮತಗಳನ್ನು ಗಳಿಸಿ ಪರಾಭವಗೊಂಡಿದ್ದಾರೆ. ಧನಲಕ್ಷ್ಮೀ ಯವರು 8 ಮತಗಳನ್ನು ಗಳಿಸಿ ಉಪಾಧ್ಯಕ್ಷೆ ಸ್ಥಾನಕ್ಕೆ ಆಯ್ಕೆಯಾಗಿದ್ದು, ತುಳಸಿ ಜಿ ಹಾರಬೆ ಯವರು 5 ಮತಗಳನ್ನು ಗಳಿಸಿ ಪರಾಭವಗೊಂಡರು.
ಉಳಿದಂತೆ ಸಂಘದ ನಿರ್ದೇಶಕರುಗಳಾಗಿ ಉಷಾಲತಾ, ಜೋಯಲ್ ಗಾಡ್‌ಫ್ರೀ ಮೆಂಡೋನ್ಸಾ, ಧರ್ಣಪ್ಪ ಗೌಡ, ಕೆ.ಬಿ ಮಹಾವೀರ ಬಲ್ಲಾಳ್, ಕಿಶೋರ್ ಕುಮಾರ್, ಪದ್ಮನಾಭ ಸಾಲಿಯಾನ್, ಅಬ್ದುಲ್ ರಹಿಮಾನ್ ಪಡ್ಪು, ತುಳಸಿ ಜಿ ಹಾರಬೆ, ರಮೇಶ್, ಕುಮಾರ್ ನಾಯ್ಕ ಕಾರ್ಯನಿರ್ವಹಿಸಲಿದ್ದಾರೆ.
ಚುನಾವಣಾಧಿಕಾರಿಯಾಗಿ ರಿಟರ್ನಿಂಗ್ ಅಧಿಕಾರಿ ವಿಲಾಸ್ ರವರು ಚುನಾವಣಾ ಪ್ರಕ್ರಿಯೆಯನ್ನು ನಡೆಸಿಕೊಟ್ಟರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.