ಡಿಸ್ಕಸ್ ಥ್ರೋ: ಸುಶ್ಮಾ ಬಿ. ಪೂಜಾರಿ ಬಳಂಜ ರಾಜ್ಯಮಟ್ಟಕ್ಕೆ ಆಯ್ಕೆ

ಬೆಳ್ತಂಗಡಿ: ಮೂಡಬಿದ್ರೆ ಆಳ್ವಾಸ್ ಕಾಲೇಜಿನಲ್ಲಿ ಅ.15 ರಂದು ಜರುಗಿದ 17ರ ವಯೋಮಾನದ ಜಿಲ್ಲಾಮಟ್ಟದ ಬಾಲಕಿಯರ ಡಿಸ್ಕಸ್ ಥ್ರೋ ಸ್ಪರ್ಧೆಯಲ್ಲಿ ಸುಶ್ಮಾ ಬಿ. ಪೂಜಾರಿ ಬಳಂಜ ಪ್ರಥಮ ಸ್ಥಾನಿಯಾಗಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಸತತ 6 ಬಾರಿ ರಾಜ್ಯಮಟ್ಟವನ್ನು ಹಾಗೂ ಒಂದು ಬಾರಿ ರಾಷ್ಟ್ರಮಟ್ಟವನ್ನು ಪ್ರತಿನಿಧಿಸಿರುವ ಇವರು ಈ ಬಾರಿ ಜಿಲ್ಲಾ ಮಟ್ಟದ ಸ್ಪರ್ಧೆಯಲ್ಲಿ 33 ಮೀಟರ್ ಡಿಸ್ಕಸ್ ಎಸೆದು ಈ ಸಾಧನೆ ಮಾಡಿ ರಾಜ್ಯ ಮಟ್ಟಕ್ಕೆ ಆಯ್ಕೆಯಾದರು. ಇವರು ಆಳ್ವಾಸ್ ಪದವಿ ಪೂರ್ವ ಕಾಲೇಜಿನಲ್ಲಿ ಪ್ರಥಮ ಪಿಯುಸಿಯಲ್ಲಿ ಕಲಿಯುತ್ತಿದ್ದು, ಬಳಂಜ ಗ್ರಾ.ಪಂ. ಉಪಾಧ್ಯಕ್ಷ ಬಾಲಕೃಷ್ಣ ಪೂಜಾರಿ ಮತ್ತು ಮಾಲಾತಿ ಯೈಕುರಿ ನಾಲ್ಕೂರು ದಂಪತಿ ಪುತ್ರಿ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.