ತಾಲೂಕು ಮಟ್ಟದಲ್ಲಿ ಕಿತ್ತೂರು ರಾಣಿ ಚೆನ್ನಮ್ಮ ವಿಜಯೋತ್ಸವ

Advt_NewsUnder_1
Advt_NewsUnder_1
Advt_NewsUnder_1

ಬೆಳ್ತಂಗಡಿ: ಬೆಳ್ತಂಗಡಿ ತಾಲೂಕು ಹಬ್ಬಗಳ ಆಚರಣಾ ಸಮಿತಿ ಇದರ ವತಿಯಿಂದ ಕಿತ್ತೂರು ರಾಣಿ ಚೆನ್ನಮ್ಮ ವಿಜಯೋತ್ಸವ-2019 ಕಾರ್ಯಕ್ರಮ ಅ.23ರಂದು ಬೆಳ್ತಂಗಡಿ ಮಿನಿ ವಿಧಾನ ಸೌಧ ಸಭಾಂಗಣದಲ್ಲಿ ಜರುಗಿತು.
ಕಾರ್ಯಕ್ರಮವನ್ನು ತಾ.ಪಂ ಸ್ಥಾಯಿ ಸಮಿತಿ ಉಪಾಧ್ಯಕ್ಷ ವಿ.ಟಿ ಸೆಭಾಸ್ಟಿನ್ ದೀಪ ಬೆಳಗಿಸಿ ಉದ್ಘಾಟಿಸಿ, ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ವೀರ ರಾಣಿ ಕಿತ್ತೂರು ರಾಣಿ ಚೆನ್ನಮ್ಮರ ಜೀವನ ಆದರ್ಶಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವ ಎಂದು ಕರೆ ನೀಡಿದರು. ಶಿಕ್ಷಣ ಸಂಯೋಜಕಿ ಲಲಿತ ಎಂ. ಮುಖ್ಯ ಭಾಷಣ ಮಾಡಿ ಕಿತ್ತೂರು ಜನತೆಯ ಮಹಾಮಾತೆಯಾಗಿ, ದೇಶ ಭಕ್ತೆಯಾಗಿ, ಧiನಿಷ್ಠೆಯನ್ನು ಹೊಂದಿದ್ದ ಚೆನ್ನಮ್ಮರ ಶೌರ್ಯ, ಪರಾಕ್ರಮ ನಮ್ಮ ಮಕ್ಕಳಲ್ಲಿ ತುಂಬುವ ಮೂಲಕ ಅವರಿಗೆ ಪ್ರೇರಣೆ ನೀಡಬೇಕು ಎಂದು ತಿಳಿಸಿ ಕಿತ್ತೂರು ರಾಣಿ ಚೆನ್ನಮ್ಮರ ಜೀವನ ಬಗ್ಗೆ ಸಮಗ್ರ ವಿವರ ನೀಡಿದರು.
ಅಧ್ಯಕ್ಷತೆಯನ್ನು ತಹಶೀಲ್ದಾರ್ ಗಣಪತಿ ಶಾಸ್ತ್ರಿ ವಹಿಸಿ, ಸಮಾಜ ಮತ್ತು ಆಡಳಿತದಲ್ಲಿ ನಮ್ಮೊಳಗಡೆ ಇರುವ ಸಮಸ್ಯೆ, ಪಿಡುಗುಗಳನ್ನು ಸೈನಿಕರಂತೆ ಹೋರಾಡಿ ಉತ್ತಮ ನಾಡನ್ನು ಕಟ್ಟಲು ನಾವೆಲ್ಲ ಪಣತೊಡೋಣ ಎಂದು ಸಲಹೆಯಿತ್ತರು.
ವೇದಿಕೆಯಲ್ಲಿ ತಾ.ಪಂ ಸದಸ್ಯರಾದ ಸುಧೀರ್ ಸುವರ್ಣ, ಕೃಷ್ಣಯ್ಯ ಆಚಾರ್ಯ, ವಸಂತಿ, ಧನಲಕ್ಷ್ಮೀ, ಅಮಿತಾ, ಶಶಿಧರ ಕಲ್ಮಂಜ, ನ.ಪಂ ಸದಸ್ಯರಾದ ರಜನಿ ಕುಡ್ವ, ತುಳಸಿ, ಜನಾರ್ದನ್, ಲೋಕೋಪಯೋಗಿ ಇಲಾಖಾ ಸ.ಕಾ. ಇಂಜಿನಿಯರ್ ಶಿವಪ್ರಸಾದ್ ಉಪಸ್ಥಿತರಿದ್ದರು. ಉಷಾಕಿರಣ, ಸರಿತಾ, ಸುಮನಾ ಪ್ರಾರ್ಥಿಸಿ, ಉಪತಹಶೀಲ್ದಾರ್ ಶಂಕರ್ ಸ್ವಾಗತಿಸಿದರು. ಸಿಬಂದಿ ಹರೀಶ್ ನೆರಿಯ ಕಾರ್ಯಕ್ರಮ ನಿರೂಪಿಸಿ, ಗ್ರಾಮಕರಣಿಕ ಜಯಚಂದ್ರ ವಂದಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.