ಅಂತಾರಾಷ್ಟ್ರೀಯ ಚೆಸ್ ಪಂದ್ಯಾಟ-ಎಸ್‌ಡಿಎಂ ರೋಟೋ ಲಾಯರ್ಸ್ಸ್ ಕಪ್ ಉದ್ಘಾಟನೆ

  

ಬೆಳ್ತಂಗಡಿ: ರೋಟರಿ ಕ್ಲಬ್ ಬೆಳ್ತಂಗಡಿ, ಎಸ್.ಡಿ.ಎಂ ಶಿಕ್ಷಣ ಸಂಸ್ಥೆಗಳು ಉಜಿರೆ ಹಾಗೂ ಬಾರ್ ಅಸೋಸಿಯೇಷನ್ ಬೆಳ್ತಂಗಡಿ ಇವುಗಳ ಸಂಯುಕ್ತ ಆಶ್ರಯದಲ್ಲಿ ಅ.24ರಿಂದ ಅ.28ರವರೆಗೆ ನಡೆಯಲಿರುವ 4ನೇ ಅಂತಾರಾಷ್ಟ್ರೀಯ ಫಿಡೆ ರೇಟೆಡ್ ಮುಕ್ತ ಚದುರಂಗ ಪಂದ್ಯಾಟ ಎಸ್‌ಡಿಎಂ ರೋಟೋ ಲಾಯರ್ಸ್ ಕಪ್-2019 ಕಾರ್ಯಕ್ರಮದ ಉದ್ಘಾಟನಾ ಸಮಾರಂಭವು ಇಂದು (ಅ.24) ಬೆಳ್ತಂಗಡಿ ಶ್ರೀ ಧ.ಮಂ ಕಲಾಭವನದಲ್ಲಿ ಜರುಗಿತು.


ಕಾರ್ಯಕ್ರಮದ ಉದ್ಘಾಟನೆಯನ್ನು ಎಸ್‌ಡಿಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ. ಬಿ ಯಶೋವರ್ಮ ನೆರವೇರಿಸಿ ಶುಭ ಹಾರೈಸಿದರು. ಶಾಸಕ ಹರೀಶ್ ಪೂಂಜ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ಬೆಳ್ತಂಗಡಿ ಹಿರಿಯ ನ್ಯಾಯಾಧೀಶರುಗಳಾದ ಬಿ.ಕೆ ನಾಗೇಶ್ ಮೂರ್ತಿ, ಕೆ.ಎಂ ಆನಂದ್ ಹೆಚ್ಚುವರಿ ನ್ಯಾಯಾಧೀಶ ಸತೀಶ್ ಕೆ, ರೋ| ರಂಗನಾಥ್ ಭಟ್, ರೋ| ರಿತೇಶ್ ಬಾಳಿಗಾ, ಯುಕೆಸಿಎ ಕಾರ್ಯದರ್ಶಿ ಹನುಮಂತಪ್ಪ, ಆಯೋಜನಾ ಸಮಿತಿ ಅಧ್ಯಕ್ಷ ನಿವೃತ್ತ ಮೇ|ಜ| ರೋ. ಎಂ.ವಿ ಭಟ್,  ಬೆಳ್ತಂಗಡಿ ರೋಟರಿ ಕ್ಲಬ್ ಅಧ್ಯಕ್ಷ  ಜಯರಾಮ ಎಸ್, ಬೆಳ್ತಂಗಡಿ ವಕೀಲರ ಸಂಘದ ಅಧ್ಯಕ್ಷ ಅಲೋಶಿಯಸ್ ಲೋಬೋ, ಮುಖ್ಯ ಸಂಚಾಲಕ ಎನ್.ಡಿ ರತ್ನವರ್ಮ ಬುಣ್ಣು, ಮತ್ತಿತರ ಗಣ್ಯರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

 

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.