ಚಾರ್ಮಾಡಿ ನದಿಪಾತ್ರಗಳಲ್ಲಿ ತಡಗೋಡೆ,‌ ಅಂತರಕ್ಕೆ‌ದೊಡ್ಡ ಸೇತುವೆ; ಗೃಹಸಚಿವ ಬೊಮ್ಮಾಯಿ

Advt_NewsUnder_1
Advt_NewsUnder_1

ಬೆಳ್ತಂಗಡಿ : ಚಾರ್ಮಾಡಿ ಅಂತರ ನೆರೆಪೀಡಿತ  ಪ್ರದೇಶಕ್ಕೆ ಇಂದು (ಅ.24) ರಂದು ರಾಜ್ಯ ಸರಕಾರದ ಗೃಹ ಸಚಿವರಾದ ಬಸವರಾಜ ಬೊಮ್ಮಾಯಿ ಭೇಟಿ ನೀಡಿ ಚಾರ್ಮಾಡಿ ನದಿಪಾತ್ರಗಳಲ್ಲಿ ತಡಗೋಡೆ,‌ಅಂತರಕ್ಕೆ‌ದೊಡ್ಡ ಸೇತುವೆ ನಿರ್ಮಿಸುವುದಾಗಿ  ಗೃಹಸಚಿವ ಬೊಮ್ಮಾಯಿ ತಿಳಿಸಿದರು. ಬೆಳ್ತಂಗಡಿಗೆ  ಭೇಟಿ ನೀಡಿದ ಅವರು ಶಾಸಕರ ವಿನಂತಿಯ ಮೇರೆಗೆ ಚಾರ್ಮಾಡಿಯ ನೆರೆ ಪೀಡಿತ ಅಂತರ ಪ್ರದೇಶಕ್ಕೆ ಭೇಟಿ ನೀಡಿ ಅಲ್ಲಿ ಸಂತ್ರಸ್ತರ ಜೊತೆ ಅವರ ಅಹವಾಲು ಸ್ವೀಕರಿಸಿ ಬಳಿಕ ಮಾತನಾಡುತ್ತಿದ್ದರು.

ಸಚಿವರ ಜೊತೆ ಶಾಸಕ ಹರೀಶ್ ಪೂಂಜ, ಚಾರ್ಮಾಡಿ ಗ್ರಾ.ಪಂ ಅಧ್ಯಕ್ಷೆ ಶೈಲಜಾ, ಪಶ್ಚಿಮ ವಲಯ ಐಜಿಪಿ ಅರುಣ್ ಚಕ್ರವರ್ತಿ, ಎಸ್ ಪಿ ಲಕ್ಷ್ಮೀ ಪ್ರಸಾದ್, ಸರ್ಕಲ್ ಸಂದೇಶ್ ಪಿ.ಜಿ, ತಾ.ಪಂ ಸದಸ್ಯರಾದ ಶಶಿಧರ ಎಂ ಕಲ್ಮಂಜ‌‌ ಮತ್ತು ಕೊರಗಪ್ಪ ಗೌಡ, ಬಿಜೆಪಿ‌ ಮಂಡಲ ಅಧ್ಯಕ್ಷ ಜಯಂತ ಕೋಟ್ಯಾನ್, ಕಾರ್ಯದರ್ಶಿ ಸೀತಾರಾಮ‌ ಬಿ.ಎಸ್, ಪಿಡಿಒ ಪ್ರಕಾಶ ಶೆಟ್ಟಿ ನೊಚ್ಚ ತಹಶಿಲ್ದಾರ ಗಣಪತಿ ಶಾಸ್ರ್ತಿ, ಕಂದಾಯ ನಿರೀಕ್ಷಕ ರವಿ ಕುಮಾರ್, ಧರ್ಮಸ್ಥಳ ಸಬ್ ಇನ್ಸ್ ಪೆಕ್ಟರ್ ಅವಿನಾಶ್ ಗೌಡ, ಸ್ಥಳೀಯ ಪ್ರಮುಖರಾದ ಕೃಷ್ಣ ಭಟ್, ಕೃಷ್ಣ ಕುಮಾರ್, ಉಮೇಶ್ ಚಾರ್ಮಾಡಿ, ರವಿ ಕುಮಾರ್, ಮುಂಡಾಜೆ ಸಿ.ಎ ಬ್ಯಾಂಕ್ ಅಧ್ಯಕ್ಷ ಎನ್ ಎಸ್ ಗೋಖಲೆ, ನಾರಾಯಣ ಫಡ್ಕೆ ಮುಂಡಾಜೆ ಮತ್ತಿತರ ಪ್ರಮುಖರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.