“ಅರಳು ಮಲ್ಲಿಗೆ ರಾಜ್ಯ ಪ್ರಶಸ್ತಿ” ಗೆ ಜೀವನ್ ಗೌಡ ಪಟ್ರಮೆ ಆಯ್ಕೆ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1


ಉಜಿರೆ: ಕ್ರೀಡಾಕ್ಷೇತ್ರದಲ್ಲಿ ಸಾಧನೆ ತೋರಿದ ಉಜಿರೆ ಎಸ್‌ಡಿಎಂ ಕಾಲೇಜಿನ ಪ್ರಥಮ ಪಿಯುಸಿ ವಿದ್ಯಾರ್ಥಿ, ಉಜಿರೆ ಉಡ್ಯಾಪು ನಗರ ನಿವಾಸಿ, ಕರ್ನಾಟಕ ರಕ್ಷಣಾ ವೇದಿಕೆ ತಾ| ಅಧ್ಯಕ್ಷ ಶ್ರೀನಿವಾಸ ಗೌಡ ಪಟ್ರಮೆ ಮತ್ತು ಪುಷ್ಪಾ ದಂಪತಿ ಪುತ್ರ ಜೀವನ್ ಗೌಡ ಪಟ್ರಮೆ ಅವರು ಆಯ್ಕೆಯಾಗಿದ್ದಾರೆ.
ಮಂಗಳೂರಿನ ಹಂಪನಕಟ್ಟೆ ಮಂಗಳೂರು ವಿಶ್ವವಿದ್ಯಾನಿಲಯ ಕಾಲೇಜಿನ ರವೀಂದ್ರ ಕಲಾಭವನದಲ್ಲಿ ಮಂಗಳೂರು ವಿ.ವಿ ಸಹಕಾರದೊಂದಿಗೆ ನ. 3 ರಂದು ನಡೆಯುವ 5 ನೇ ವಿಶ್ವಕನ್ನಡ ವಚನ ಸಾಹಿತ್ಯ ಮತ್ತು ಸಾಂಸ್ಕೃತಿಕ ಸಮ್ಮೇಳನ -2019 ಹಾಗೂ ರಾಜ್ಯೋತ್ಸವ ಸಂಭ್ರಮ ಕಾರ್ಯಕ್ರಮದಲ್ಲಿ ಪ್ರಶಸ್ತಿ ಸ್ವೀಕರಿಸಲು ಕುಟುಂಬ ಸಮೇತರಾಗಿ ಆಗಮಿಸುವಂತೆ ಜೀವನ್ ಗೌಡ ಆಹ್ವಾನಿತರಾಗಿದ್ದಾರೆ. ಜ್ಞಾನಮಂದಾರ ಶೈಕ್ಷಣಿಕ ಸಾಂಸ್ಕೃತಿಕ ಟ್ರಸ್ಟ್ ಬೆಂಗಳೂರು ಇದರ ಸಂಸ್ಥಾಪಕ ಹೆಚ್.ಜಿ ಸೋಮಶೇಖರ್ ಅವರು ಈ ಆಹ್ವಾನಪತ್ರ ನೀಡಿದ್ದಾರೆ.
ಪ್ರಶಸ್ತಿಗೆ ಆಯ್ಕೆಯಾಗಿರುವ ಜೀವನ್ ಅವರು ಅತ್ಯುತ್ತಮ ಶೆಟ್ಲ್ ಬ್ಯಾಡ್ಮಿಂಟನ್ ಆಟಗಾರರಾಗಿದ್ದು ರಾಜ್ಯಮಟ್ಟದ ಕ್ರೀಡಾಕೂಟದಲ್ಲೂ ಕೂಡ ಭಾಗವಹಿಸಿ ಉತ್ಕೃಷ್ಟ ಪ್ರದರ್ಶನ ನೀಡಿದ್ದಾರೆ. ಸ್ಥಳೀಯ ಮಟ್ಟದಲ್ಲಿ ಅನೇಕ ಬಹುಮಾನಗಳನ್ನು ಪಡೆದುಕೊಂಡಿದ್ದಾರೆ.

Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.