ಮಚ್ಚಿನ: 2018-19ರ ಸಾಲಿನ ಸಾರ್ವಜನಿಕ ಶಿಕ್ಷಣ ಇಲಾಖೆ ನಡೆಸಿದ ಕಬಡ್ಡಿಯಲ್ಲಿ ಮೊರಾರ್ಜಿ ದೇಸಾಯಿ ವಸತಿ ಶಾಲೆ ವಗ್ಗ ತಂಡದ ನಾಯಕಿಯಾಗಿ ಶ್ರಾವ್ಯ ಕುಲಾಲ್ ಆಯ್ಕೆಯಾಗಿದ್ದು, ಇವರು ತಂಡದ ನಾಯಕಿಯಾಗಿ ಅತ್ಯುತ್ತಮ ಆಟದೊಂದಿಗೆ ತಂಡವನ್ನು ಮುನ್ನಡೆಸುತ್ತ ರಾಜ್ಯ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದು ಛತ್ತೀಸ್ಗಡ್ನಲ್ಲಿ ನಡೆಯುವ ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.
ವಗ್ಗ ಮೊರಾರ್ಜಿ ದೇಸಾಯಿ ವಸತಿ ಶಾಲೆಯ 5 ವಿದ್ಯಾರ್ಥಿಗಳನ್ನು ಒಳಗೊಂಡ ಮೈಸೂರು ವಿಭಾಗ ತಂಡ ವಗ್ಗ ತಂಡದ 4 ಮಕ್ಕಳು ಛತ್ತಿಸ್ಗಡದಲ್ಲಿ ಜರಗುವ ರಾಷ್ಟ್ರೀಯ ಮಟ್ಟದ ಕಬಡ್ಡಿ ಪಂದ್ಯಾಟಕ್ಕೆ ಆಯ್ಕೆಯಾಗಿರುತ್ತಾರೆ. ಸತತ 5 ನೇ ಬಾರಿ ರಾಷ್ಟ್ರೀಯ ಮಟ್ಟವನ್ನು ಕಬಡ್ಡಿ ಎಲ್ಲಾ ವಿಭಾಗದಲ್ಲಿ ಪ್ರತಿನಿಧಿಸಿ ರಾಷ್ಟ್ರಮಟ್ಟದಲ್ಲಿ ಮೊರಾರ್ಜಿ ಶಾಲೆಯ ಕೀರ್ತಿಯನ್ನು ಎತ್ತಿಹಿಡಿದಿದ್ದಾರೆ.
ಪ್ರಾಥಮಿಕ ಹಂತದಲ್ಲೆ ವಲಯ ಮಟ್ಟದಿಂದ ಹಿಡಿದು ರಾಜ್ಯಮಟ್ಟವರೆಗೆ ಏರಿ ವೈಯಕ್ತಿಕ ಚಾಂಪಿಯನ್ ಪಟ್ಟವನ್ನು ಮುಡಿಗೇರಿಸಿಕೊಂಡಿರುವ ಇವರು, ಬಳ್ಳಮಂಜದ ವಾಸು ಕುಲಾಲ್ ಹಾಗೂ ಸುಜಾತ ಕುಲಾಲ್ ದಂಪತಿಯ ದ್ವಿತೀಯ ಪುತ್ರಿ. ಮೊರಾರ್ಜಿ ದೇಸಾಯಿ ವಸತಿ ಶಾಲೆ ವಗ್ಗ ಇಲ್ಲಿನ 7ನೇ ತರಗತಿ ವಿದ್ಯಾರ್ಥಿನಿಯಾಗಿದ್ದು, ದೈಹಿಕ ಶಿಕ್ಷಣ ಶಿಕ್ಷಕ ಆಸೀದ್ ಪಡಂಗಡಿಯವರ ಶಿಷ್ಯೆ.