HomePage_Banner_
HomePage_Banner_
HomePage_Banner_
HomePage_Banner_
HomePage_Banner_
HomePage_Banner_
HomePage_Banner_
HomePage_Banner_

ಉಜಿರೆಯಲ್ಲಿ ದಿವ್ಯಾಸ್ ಬ್ಯೂಟಿ ಕೇರ್ ಶುಭಾರಂಭ

   

ಉಜಿರೆ: ಬೆಳ್ತಂಗಡಿ ತಾಲೂಕಿನಲ್ಲಿ ಪ್ರಪ್ರಥಮ ಕಾಸ್‌ಮೆಟೊಲಾಜಿಸ್ಟ್ ಅನುಭವ ಹೊಂದಿರುವ ದಿವ್ಯಾಸ್ ಬ್ಯೂಟಿ ಕೇರ್ ಇದಾಗಿದೆ. ನಮ್ಮ ಸಂಸ್ಥೆಯಲ್ಲಿ ಅನೇಕ ವಿದ್ಯಾರ್ಥಿಗಳು ತರಬೇತಿ ಪಡೆದಿದ್ದರು. ಒಂದು ವರ್ಷದ ತರಬೇತಿಯಲ್ಲಿ ಅತ್ಯುತ್ತಮ ಕಾಸ್‌ಮೆಟೊಲಾಜಿಸ್ಟ್‌ನಲ್ಲಿ ಅನುಭವ ಪಡೆದ ವಿದ್ಯಾರ್ಥಿ ದಿವ್ಯಾರವರು ಎಂದು ಮಂಗಳೂರು ಇಂಟರ್‌ನ್ಯಾಷನಲ್ ಸರ್ಟಿಫೈಡ್ ಮೇಕಪ್ ಆರ್ಟಿಸ್ಟ್ ಬ್ಯೂಟಿ ಕಾಸ್‌ಮೆಟೊಲಾಜಿಸ್ಟ್ ಚೇತನಾ ಎಸ್ ಹೇಳಿದರು.


ಅವರು ಉಜಿರೆ ಕಾಲೇಜು ರಸ್ತೆಯ ಸೌಮ್ಯ ಕಾಂಪ್ಲೆಕ್ಸ್‌ನಲ್ಲಿ ಅ.21 ರಂದು ದಿವ್ಯಾಸ್ ಬ್ಯೂಟಿ ಕೇರ್ ಉದ್ಘಾಟಿಸಿ ಮಾತನಾಡಿದರು. ಸಂಸ್ಥೆ ನಡೆಸುವುದಕ್ಕಿಂತ ಅನುಭವ ಅತೀ ಮುಖ್ಯ. ಸಂಸ್ಥೆ ಅಚ್ಚುಕಟ್ಟಾಗಿ ನಿರ್ಮಿಸಿದ್ದಾರೆ. ಅವರಿಗೆ ಶುಭ ಹಾರೈಕೆಗಳು ಎಂದರು.


ಈ ಸಂದರ್ಭದಲ್ಲಿ ಸಂಸ್ಥೆಯ ಮಾಲಕಿಯ ಅತ್ತೆ ಲಕ್ಷ್ಮೀ, ಪತಿ ರಾಜೇಶ್, ಪುತ್ರಿ ರಚನಾ, ಮಾತಾಪಿತರಾದ ಕರುಣಾಕರ ಮತ್ತು ಕಮಲ ದಂಪತಿ, ಗಣೇಶ್ ಪ್ಲೈವುಡ್‌ನ ಕೋದಂಡರಾಮ, ನಿತಿನ್, ರಂಜನ್, ರವಿಶಂಕರ, ಮಂಗಳೂರಿನ ನಳಿನಿ, ನಂದಿನಿ ಮೊದಲಾದವರು ಉಪಸ್ಥಿತರಿದ್ದು, ಶುಭ ಕೋರಿದರು.


ಇಲ್ಲಿ ಹೇರ್, ಮುಖದ ಚರ್ಮಕ್ಕೆ ಎಡ್ವನ್ಸ್ ಟ್ರೀಟ್‌ಮೆಂಟ್, ಹೆಚ್.ಡಿ ವಾಟರ್ ಪ್ರೂಫ್, ಲಾಂಗ್ ಲಾಸ್ಟಿಂಗ್ ಮೇಕಪ್, ಹೇರ್ ಕಲರಿಂಗ್, ಕಟ್ಟಿಂಗ್, ವಿವಿಧ ಬಗೆಯ ವ್ಯಾಕ್ಸಿಂಗ್, ಐಬ್ರೋ, ಹೇರ್ ಸ್ಟ್ರೈಟಿಂಗ್, ಫರ್ಮಿಗ್ ಸೌಲಭ್ಯಗಳು ದೊರೆಯಲಿದೆ ಎಂದು ಮಾಲಕಿ ದಿವ್ಯಾ ತಿಳಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.