ಮೆಸ್ಕಾಂ ಇಲಾಖೆಯಿಂದ ಬಿಲ್ ಶಾಕ್, ಕೃಷಿಕರಿಗೆ ರೂ 2 ಸಾವಿರದಿಂದ 46 ಸಾವಿರದ ತನಕ ಬಿಲ್ಲು

ಕಳಿಯ : ಇಲ್ಲಿಯ ನ್ಯಾಯತರ್ಫು,ಕಳಿಯ ಮತ್ತು ಓಡಿಲ್ನಾಳ ಗ್ರಾಮದ ಕೃಷಿಕರಿಗೆ ಕನಿಷ್ಠ 2 ಸಾವಿರದಿಂದ ಗರಿಷ್ಠ 46 ಸಾವಿರದವರೆಗಿನ ಬಿಲ್ ನೀಡುವ ಮೂಲಕ ಶಾಕ್ ನೀಡಿದ್ದಾರೆ.
ಕಳಿಯ ಗ್ರಾಮದ ಅಂಗನವಾಡಿ ಕೇಂದ್ರಕ್ಕೆ ಸುಮಾರು ರೂ 7,854 ರೂಪಾಯಿ ಮತ್ತು ಕೃಷಿಕರೊಬ್ಬರಿಗೆ ರೂ 46 ಸಾವಿರಕ್ಕೂ ಹೆಚ್ಚು ಬಿಲ್ ನೀಡುವುದರೊಂದಿಗೆ ಶೇಕಡಾ 90% ರಷ್ಟು ಕೃಷಿಕರಿಗೆ ದೀಪಾವಳಿ ಬಂಪರ್ ಗಿಪ್ಟ್ ಶಾಕ್ ನೀಡಿದ್ದಾರೆ. ಈಗಾಗಲೇ ವಿಪರೀತ ಮಳೆಗೆ ಕೃಷಿಕರು ಹೆಚ್ಚಿನ ಪ್ರಮಾಣದ ನಷ್ಟವನ್ನು ಅನುಭವಿಸಿ ಕಂಗಲಾಗಿದ್ದು, ಗಾಯದ ಮೇಲೆ ಬರೆ ಎಳೆದಂತಾಗಿದೆ.
ಮೆಸ್ಕಾಂ ಬಿಲ್ ಬಗ್ಗೆ ಮಾಹಿತಿ ಪಡೆಯಲು ಬೆಳ್ತಂಗಡಿ ಕಛೇರಿಗೆ ಭೇಟಿ ನೀಡಿದರೆ ಬಿಲ್ ನಲ್ಲಿ ಸ್ವಲ್ಪ ಕಡಿತ ಮಾಡುವುದಾಗಿ ಹೇಳಿ ಕಟ್ಟಲು 3 ತಿಂಗಳ ಸಮಯಾವಕಾಶ ನೀಡುತೇವೆ  ಎಂದು ಕೃಷಿಕರನ್ನು ಅಧಿಕಾರಿಗಳು ಸಮಾಧಾನ ಪಡಿಸುತ್ತಾರೆ. ಬಳಕೆ ಮಾಡಿರುವ ವಿದ್ಯುತ್‌ಗಿಂತ ಹೆಚ್ಚು ಬಿಲ್ ನೀಡಿ ನಂತರ ಕಡಿತ ಗೊಳಿಸುವುದರಲ್ಲಿ ಕೃಷಿಕರಿಗೆ ಒಂದು ರೀತಿಯಲ್ಲಿ ವಂಚನೆಯಾಗುತ್ತಿದೆ ಎಂದು ಬಳಕೆದಾರರು ಆರೋಪಿಸಿದ್ದಾರೆ.
ಈ ಬಗ್ಗೆ ಸಂಬಂಧಿಸಿದ ಅಧಿಕಾರಿಗಳು, ಜನ ಪ್ರತಿನಿಧಿಗಳು ತಕ್ಷಣ ಸ್ಪಂದಿಸುವ ಮೂಲಕ ಕೃಷಿಕರಿಗೆ ನ್ಯಾಯ ಒದಗಿಸಿಕೊಡಬೇಕು ಎಂದು ಗ್ರಾಮಸ್ಥರು ಒತ್ತಾಯಿಸುತ್ತಿದ್ದಾರೆ

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.