ಅಕ್ರಮ ಮರಕಳ್ಳತನ; ಕಾರು ಸಹಿತ ಮೂವರು ಆರೋಪಿಗಳ ಬಂಧನ

ಧರ್ಮಸ್ಥಳ: ಕುಖ್ಯಾತ ಮರಗಳ್ಳರನ್ನು ಅರಣ್ಯ ಇಲಾಖೆಯವರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಪುದುವೆಟ್ಟು ಕ್ರಾಸ್ ಬಳಿ ಅ.16 ರಂದು ನಡೆದ ಕಾರ್ಯಾಚರಣೆಯಲ್ಲಿ ಈ ಪ್ರಕರಣ ಪತ್ತೆಹಚ್ಚಲಾಗಿದೆ.
ಬಂಧಿತರನ್ನು ಕೋಟೆಕಾರು ನಿವಾಸಿ ಅಬ್ಬಾಸ್(46ವ.), ಕಕ್ಕಿಂಜೆ ಗಾಂಧಿನಗರದ ಮುಹಮ್ಮದ್ ಸೂಫಿ(34ವ.), ಮತ್ತು ಗುಂಡ್ಯ ನಿವಾಸಿ ಸುರೇಶ್(26ವ.) ಎಂಬವರೆಂದು ಗುರುತಿಸಲಾಗಿದೆ. ಈ ಪೈಕಿ ಇನ್ನೋರ್ವ ಆರೋಪಿ ಕೌಕ್ರಾಡಿ ಗ್ರಾಮದ ಹೊಸಮಜಲು ನಿವಾಸಿ ಮುಹಮ್ಮದ್ ಬಾವಾ ಪರಾರಿಯಾಗಿದ್ದಾರೆ.
ಆರೋಪಿಗಳಿಂದ ಒಂದು ಕಾರು, 3 ಲಕ್ಷ ರೂ. ಮೌಲ್ಯದ ಸಾಗುವಾನಿ ಮತ್ತು ಬೀಟೆ ಮರದ ದಿಮ್ಮಿಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.
ಆರೋಪಿಗಳು ಅರಣ್ಯದಿಂದ ಬೆಲೆಬಾಳುವ ಮರಗಳನ್ನು ಕಡಿದು ಸಾಗಾಟ ಮಾಡಿ ಅದರಿಂದ ಹಣಗಳಿಸುತ್ತಿದ್ದರು ಎಂದು ತಿಳಿದುಬಂದಿದ್ದು, ಖಚಿತ ಮಾಹಿತಿ ಆಧರಿಸಿ ಬೆಳ್ತಂಗಡ ವಲಯ ಅರಣ್ಯ ಅಧಿಕಾರಿ ಸುಬ್ಬಯ್ಯ ನಾಯ್ಕ ಅವರ ತಂಡ ವಿಶೇಷ ಗಸ್ತು ನಿರತರಾಗಿದ್ದ ವೇಳೆ ಆರೋಪಿಗಳು ಟಾಟಾ ಸಿಯಾರೋ ಕಾರಿನಲ್ಲಿ ಅಕ್ರಮವಾಗಿ ಮರದ ದಿಮ್ಮಿಗಳನ್ನು ಸಾಗಾಟ ಮಾಡುತ್ತಿದ್ದುದನ್ನು ಪತ್ತೆಹಚ್ಚಿದ್ದಾರೆ.
ವಾಹನದಲ್ಲಿ 5 ಸಾಗುವಾನಿ ಮತ್ತು 5 ಬೀಟೆ ಮರದ ದಿಮ್ಮಿಗಳಿದ್ದು ಅವುಗಳನ್ನು ವಾಹನ ಸಮೇತ ಮುಟ್ಟುಗೋಲು ಹಾಕಿಕೊಳ್ಳಲಾಗಿದೆ. ಜೊತೆಗೆ ಎರಡು ಗರಗಸ, ಕತ್ತಿ ಹಾಗೂ ಹಗ್ಗವನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.