ಪಾರೆಂಕಿ: ವಾರಾಹಿ ದರ್ಪಣ ಕಛೇರಿ ಉದ್ಘಾಟನೆ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

 ಪಾರೆಂಕಿ: ಇಲ್ಲಿಯ ಮಡಂತ್ಯಾರು ಶ್ರೀ ರೌದ್ರನಾಥೇಶ್ವರ ಸ್ವಾಮಿ ದೇವಸ್ಥಾನ ನಡುಬೊಟ್ಟು ಕ್ಷೇತ್ರದಲ್ಲಿ ತುಳು ಲಿಪಿ ಅಧ್ಯಯನ ಹಾಗೂ ತುಳುನಾಡಿನ ದೈವಾರಾಧನೆಯ ಕುರಿತು ಪ್ರಶ್ನಾ ಚಿಂತನೆಯ ವಾರಾಹಿ ದರ್ಪಣ ಎಂಬ ನೂತನ ಕಛೇರಿಯ ಉದ್ಘಾಟನಾ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು.


ಸುಬ್ರಹ್ಮಣ್ಯ ಮಠದ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿಯವರು ದೀಪ ಪ್ರಜ್ವಲಿಸಿ, ಆಶೀರ್ವಚನ ನೀಡಿದರು. ದೈವಾರಾಧನೆಯ ಮಾರ್ಗದರ್ಶಕ ಹಾಗೂ ಸಂಶೋಧಕ ರವಿ ಎನ್ ನಡುಬೊಟ್ಟು, ಕ್ಷೇತ್ರದ ಆಡಳಿತ ಮೊಕ್ತೇಸರ ವಿಶ್ವನಾಥ ಯನ್, ಅರ್ಚಕ ನಾರಾಯಣ ಭಟ್, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಜಿತೇಂದ್ರ ಸಾಲ್ಯಾನ್, ಪ್ರಕಾಶ್ ಶೆಟ್ಟಿ ಗಾಣದಕೊಟ್ಯ, ದರಿತುಡರ ಗೇನದ ಅದೆ ಸೇವಾ ಸಮಿತಿ ಅಧ್ಯಕ್ಷ ಅಶೋಕ್ ಪೂಜಾರಿ ಕಜಿಪಟ್ಟ, ರೌದ್ರನಾಥೇಶ್ವರ ಭಜನಾ ಮಂಡಳಿ ಅಧ್ಯಕ್ಷ ಮುತ್ತಪ್ಪ ಮೂಲ್ಯ, ಗಣೇಶ್ ಮೂಲ್ಯ ಅನಿಲಡೆ, ತುಂಗಪ್ಪ ಮೂಲ್ಯ ವಡ್ಡ, ಬಾಬು ಮೂಲ್ಯ ಬೊಲ್ಜಾಲ್, ರಾಮ ಮೂಲ್ಯ ಪೊಯ್ಯೆಗುಡ್ಡೆ, ರಾಮಣ್ಣ ಕುಕ್ಕಳ, ಪೂವಪ್ಪ ಮೂಲ್ಯ ಬಂಗಿದೊಟ್ಟು ಮತ್ತಿತರರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ದೈವಪಾತ್ರಿ ಬಾಬು ಮೂಲ್ಯ ಬೊಲ್ಜಾಲ್ ಇವರನ್ನು ಸನ್ಮಾನಿಸಲಾಯಿತು.
ಮೇದಾವಿ ಕಾರ್ಯಕ್ರಮ ನಿರೂಪಿಸಿದರು. ನಂತರ ಶ್ರೀ ರೌದ್ರನಾಥೇಶ್ವರ ಸ್ವಾಮಿ ಹಾಗೂ ಧರ್ಮದೈವಗಳಿಗೆ ಸಂಕ್ರಮಣ ಹರಕೆ ಸೇವೆ ಹಾಗೂ ಸಾರ್ವಜನಿಕ ಅನ್ನಸಂತರ್ಪಣೆ ಜರುಗಿತು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.