HomePage_Banner_
HomePage_Banner_
HomePage_Banner_
HomePage_Banner_
HomePage_Banner_
HomePage_Banner_
HomePage_Banner_

ಅ.19: ಉಜಿರೆ ಇಂಜಿನಿಯರಿಂಗ್ ಕಾಲೇಜಿನಲ್ಲಿ ಕ್ಲೀನ್ ಇಂಡಿಯಾ ಹಾಕಥಾನ್

ಉಜಿರೆ: ಶ್ರೀ.ಧ.ಮಂ.ಇಂಜಿನಿಯರಿಂಗ್ ಕಾಲೇಜಿನಲ್ಲಿ ಡಿಲೈತ್ ಬೆಂಗಳೂರಿನ ಸಹಭಾಗಿತ್ವದೊಂದಿಗೆ ಮಂಗಳೂರು ವಲಯದ ಇಂಜಿನಿಯರಿಂಗ್ ವಿದ್ಯಾರ್ಥಿಗಳಾಗಿ ಅ.೧೯ರಂದು ಶನಿವಾರದಂದು ಕ್ಲೀನ್ ಇಂಡಿಯಾ ಹ್ಯಾಕಥಾನ್ ಅಯೋಜಿಸಲಾಗಿದೆ.
ಪ್ರಸ್ತುತ ಸಮಸ್ಯೆಯಾದ ತ್ಯಾಜ್ಯ ವಿಭಜನೆ ಎಂಬ ವಿಷಯದ ಕುರಿತಾಗಿ ಬೆಳಗ್ಗೆ 9ರಿಂದ ಸಂಜೆ 7ರ ತನಕ ನಿರಂತರವಾಗಿ ಈ ಸ್ವರ್ಧೆ ನಡೆಯಲಿರಿವುದು ಎಂದು ಕಾಲೇಜಿನ ಪ್ರಾಂಶುಪಾಲ ಡಾ|| ಅಶೋಕ್ ಕುಮಾರ್ ತಿಳಿಸಿದ್ದಾರೆ.
ಅವರು ಅ.17ರಂದು ಬೆಳ್ತಂಗಡಿ ಪ್ರೆಸ್ ಕ್ಲಬ್‌ನಲ್ಲಿ ನಡೆದ ಪತ್ರಿಕಾ ಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿ ಪ್ರಾಥಮಿಕವಾಗಿ ನೊಂದಾಯಿಸಿದ 68 ತಂಡಗಳಲ್ಲಿ 25 ತಂಡಗಳು ಫೈನಲ್ ಹಂತಕ್ಕೆ ಆಯ್ಕೆ ಆಗಿರುತ್ತದೆ. ಇಂಜಿನಿಯರಿಂಗ್ ವಿದ್ಯಾರ್ಥಿಗಳು ತಮ್ಮ ಅಲೋಚನಾ ಲಹರಿ ಮತ್ತು ತಾಂತ್ರಿಕ ಜ್ಞಾನದ ಮೂಲಕ ತ್ಯಾಜ್ಯ ನಿವಾರಣಾ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವುದು, ಇದರಿಂದಾಗಿ ಸ್ಮಾರ್ಟ ಮನೆ ಮತ್ತು ಸ್ಮಾರ್ಟ ನಗರದ ಪರಿಕಲ್ಪನೆ ದೊರಕಿಸುವುದು ಈ ಕಾರ್ಯಕ್ರಮದ ಮೂಲ ಉದ್ದೇಶ ಆಗಿರುತ್ತದೆ ಎಂದು ತಿಳಿಸಿದರು.
ವಿಜೇತ ತಂಡಕ್ಕೆ ರೂ 25,000 ಬಹುಮಾನ ಘೋಷಣೆಯಾಗಿದ್ದು, ಅನಂತರ ಮೂಲ ಮಾದರಿ ತಯಾರಗೆ ರೂ 50,000 ಡಿಲೈತ್ ಕಂಪೆನಿಯು ಪ್ರಾಯೋಜಕತ್ವ ವಹಿಸಲಿದೆ ಎಂದು ಈ ಸಂದರ್ಭ ಹೇಳಿದರು. ಪತ್ರಿಕಾ ಗೋಷ್ಠಿಯಲ್ಲಿ ಪ್ರೋ| ರಾಮಕೃಷ್ಣ ಹೆಗಡೆ, ಪ್ರೋ| ಸತ್ಯನಾರಾಯಣ ಭಟ್ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.