HomePage_Banner_
HomePage_Banner_
HomePage_Banner_
HomePage_Banner_
HomePage_Banner_
HomePage_Banner_
HomePage_Banner_
HomePage_Banner_

ವಿಜಯ ಕ್ರೇಡಿಟ್ ಕೋ-ಆಪರೇಟಿವ್ ಸೊಸೈಟಿಗೆ ನಬಾರ್ಡ್ ಅಧಿಕಾರಿಗಳ ಭೇಟಿ

ಬೆಳ್ತಂಗಡಿ: ಇಲ್ಲಿನ ವಿಜಯ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಗೆ ನಬಾರ್ಡ್ ಅಧಿಕಾರಿಗಳಾದ ಪಶ್ಚಿಮ ಬಂಗಾಳದ ಭೋವಾಲ್ ಹಾಗೂ ಬೆಂಗಳೂರಿನ ರಿಜಿನಲ್ ಆಫೀಸ್‌ನ ರೋನಿರಾಜು ಇತ್ತೀಚೆಗೆ ಭೇಟಿ ನೀಡಿ, ಸಂಘದ ಮುಖಾಂತರ ವಿತರಣೆಯಾಗುತ್ತಿರುವ ಸಾಲದ ಯೋಜನೆಗಳು ಮತ್ತು ನಡೆಸುತ್ತಿರುವ ವ್ಯವಹಾರಗಳನ್ನು ಪರಿಶೀಲಿಸಿದರು. ಸಂಘದ ವಿವಿಧ ಠೇವಣಿ ಮತ್ತು ಸಾಲ ಯೋಜನೆಗಳು ಗ್ರಾಮೀಣ ಪ್ರದೇಶದಲ್ಲಿ ಜನರ ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸುವಲ್ಲಿ ಸಂಘದ ಪ್ರಯತ್ನವನ್ನು ಮತ್ತು ಸಂಘದ ಎಲ್ಲಾ ೨೦ ಶಾಖೆಗಳಿಗೆ ಕೋರ್ ಬ್ಯಾಂಕಿಂಗ್ ವ್ಯವಸ್ಥೆಯನ್ನು ಅಳವಡಿಸಿರುವ ಬಗ್ಗೆ ಅವರು ಮೆಚ್ಚುಗೆ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ನಬಾರ್ಡ್ ಅಧಿಕಾರಿಗಳನ್ನು ಸೊಸೈಟಿಯ ಅಧ್ಯಕ್ಷ ಜಯರಾಮ್ ಶೆಟ್ಟಿ ಸ್ವಾಗತಿಸಿದರು. ಸಂಘದ ನಿರ್ದೇಶಕ ಟಿ. ಕೃಷ್ಣ ರೈ, ರಾಮಣ್ಣ ಶೆಟ್ಟಿ, ನಾರಾಯಣ ಶೆಟ್ಟಿ, ಟಿ.ಆರ್.ಅಡ್ಯಂತಾಯ, ಡಿ.ಸಿ.ಸಿ ಬ್ಯಾಂಕಿನ ಅಧಿಕಾರಿ ಜಗದೀಶ್ ರೈ, ವಿಜಯ ಕ್ರೆಡಿಟ್ ಸೊಸೈಟಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಜಿತ್ ಕುಮಾರ್, ಪ್ರಧಾನ ಕಛೇರಿ ಶಾಖಾ ಪ್ರಬಂಧಕ ಸುಜಯ್, ಡಿ.ಸಿ.ಸಿ ಬ್ಯಾಂಕಿನ ಅಧಿಕಾರಿಗಳು ಹಾಗೂ ವಿಜಯ ಕ್ರೆಡಿಟ್ ಸೊಸೈಟಿ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.