ಗೇರುಕಟ್ಟೆ: ಜಾನುವಾರು ಕಾಲು ಬಾಯಿ ರೋಗ ನಿಯಂತ್ರಣ ಉಚಿತ ಲಸಿಕೆ

ಗೇರುಕಟ್ಟೆ : ಇಲ್ಲಿಯ ಗೇರುಕಟ್ಟೆ ಹಾಲು ಉತ್ಪಾದಕರ ಸಂಘ ಮತ್ತು ರಾಷ್ಟ್ರೀಯ ಪಶುಸಂಗೋಪನೆ ಸಹಯೋಗದೊಂದಿಗೆ ಜಾನುವಾರು ಕಾಲುಬಾಯಿ ರೋಗ ನಿರೋಧಕ ಚುಚ್ಚುಮದ್ದು ಲಸಿಕೆಯನ್ನು ಹಸುಗಳಿಗೆ ನೀಡುವ ಮೂಲಕ ಬೆಳ್ತಂಗಡಿ ಪಶು ವೈದ್ಯರಾದ ಡಾ.ರವಿಕುಮಾರ್ ಚಾಲನೆ ನೀಡಿದರು. ಗೇರುಕಟ್ಟೆ ಹಾಲು ಉತ್ಪಾದಕ ಸಂಘದ ಅಧ್ಯಕ್ಷ ಜನಾರ್ದನ ಗೌಡ ಕುಳಾಯಿ ಇವರ “ಶುಭೋಧಯ ನಿಲಯ”ದಲ್ಲಿ ಅ.16 ರಂದು ಬೆಳಗ್ಗೆ ನಡೆಯಿತು.
ರಾಷ್ಟ್ರೀಯ ಜಾನುವಾರು ಕಾಲು ಬಾಯಿ ರೋಗ ನಿಯಂತ್ರಣ ಎನ್.ಎ.ಡಿ.ಸಿ.ಪಿ.ಯೋಜನೆ ಮತ್ತು ಹಾಲು ಉತ್ಪಾದಕರ ಸಂಘಗಳ ಮೂಲಕ ತಲಾ 6 ತಿಂಗಳಿಗೊಮ್ಮೆ ಉಚಿತವಾಗಿ ನೀಡಲಾಗುತ್ತದೆ. ಹೈನುಗಾರಿಕಾ ಕೃಷಿಕರ ಮನೆ ಮನೆಗೆ ತೆರಳಿ 4 ತಿಂಗಳಿಗಿಂತ ಮೇಲ್ಪಟ್ಟ ಹಸು- ಕರುಗಳಿಗೆ ಲಸಿಕೆಯನ್ನು ಹಾಕುವುದರಿಂದ ಜಾನುವಾರುಗಳ ಆರೋಗ್ಯ ಅಭಿವೃದ್ಧಿ ಹೊಂದುತ್ತದೆ. ಹಾಗೂ ಗುಣಮಟ್ಟದ ಹಾಲು ಉತ್ಪಾದನೆಗೆ ಸಹಾಯ ವಾಗುತ್ತದೆ.ಇದರಿಂದ ಹೈನುಗಾರಿಕಾ ಕೃಷಿಕರು ಹೆಚ್ಚಿನ ಪ್ರಮಾಣದ ಲಾಭವನ್ನು ಪಡೆಯಲು ಸಾಧ್ಯವಾಗುತ್ತದೆ ಎಂದು ಡಾ.ರವಿಕುಮಾರ್ ಹೇಳಿದರು.ಈ ಸಂದರ್ಭದಲ್ಲಿ ಬೆಳ್ತಂಗಡಿ ಪಶುಸಂಗೋಪನೆ ಇಲಾಖೆ ಸಿಬ್ಬಂದಿಗಳಾದ ಪ್ರಶಾಂತ್ ಕುಮಾರ್, ಶ್ರೀಧರ್, ಚಂದ್ರ ಕುಮಾರ್, ಲಕ್ಷ್ಮೀಷ, ಸಂಘದ ಅಧ್ಯಕ್ಷ ಜನಾರ್ದನ ಗೌಡ, ನಿರ್ದೇಶಕರಾದ ರಂಜನ್ ಹೇರೋಡಿ,ನೇವಿಲ್ ಸ್ಟೀವನ್ ಮೋರಾಸ್,ಕಾರ್ಯದರ್ಶಿ ಗುಲಾಬಿ, ಸಿಬ್ಬಂದಿಗಳಾದ ಶಾಲಿನಿ,ರಕ್ಷಿತ್, ವಿಜಯ ಕುಮಾರ್ ಕಲಾಯಿತೋಟ್ಟು, ಉಮೇಶ್ ಗೌಡ, ತಾರಾನಾಥ ಹಸುಗಳ ವಾರಸ್ಥುದಾರರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.