ಹುಣ್ಸೆಕಟ್ಟೆ: ಸ್ವಚ್ಚತಾ ಸೇನಾನಿ ದಿನಾಚರಣೆ

ಹುಣ್ಸೆಕಟ್ಟೆ: ಧ.ಗ್ರಾ.ಯೋ ಪ್ರಗತಿಬಂಧು, ಜ್ಞಾನವಿಕಾಸ ಹಾಗೂ ಸ್ವಸಹಾಯ ಸಂಘಗಳ ಒಕ್ಕೂಟ ಬೆಳ್ತಂಗಡಿ ಬಿ ಹುಣ್ಸೆಕಟ್ಟೆ ಇದರ ಸಂಯುಕ್ತ ಆಶ್ರಯದಲ್ಲಿ ಅ.9 ರಂದು ಸ್ವಚ್ಚತಾ ಸೇನಾನಿ ದಿನದ ಅಂಗವಾಗಿ ಹುಣ್ಸೆಕಟ್ಟೆಯಲ್ಲಿ ಸ್ವಚ್ಚತಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮದಲ್ಲಿ ಸಮುದಾಯ ಅಭಿವೃದ್ಧಿ ಪ್ರಾದೇಶಿಕ ವಿಭಾಗದ ನಿರ್ದೇಶಕ ಶ್ರೀಹರಿ ಭಾಗವಹಿಸಿ, ಸುತ್ತಮುತ್ತಲಿನ ಪರಿಸರವನ್ನು ಆದಷ್ಟು ಸ್ವಚ್ಚವಾಗಿ ಇಟ್ಟುಕೊಳ್ಳಬೇಕು ಪ್ಲಾಸ್ಟಿಕ್ ಬಳಕೆಯನ್ನು ಕಡಿಮೆ ಮಾಡಬೇಕು ಎಂದು ಹೇಳುತ್ತಾ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ವಲಯ ಮೇಲ್ವಿಚಾರಕ ರಾಜೇಶ್ ಪಿ, ಶಾಲಾ ಶಿಕ್ಷಕಿ ಶಶಿಕಲಾ, ಅಂಗನವಾಡಿ ಶಿಕ್ಷಕಿ ರಜನಿ, ಕಾರ್ಯಕರ್ತೆಯರಾದ ವಾರಿಜ, ಪ್ರೇಮ ದೇವಾಡಿಗ, ಒಕ್ಕೂಟದ ಅಧ್ಯಕ್ಷ ಕೆ. ದಯಾನಂದ ಕೋಟ್ಯಾನ್, ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಸೇವಾಪ್ರತಿನಿಧಿ ಪ್ರಮೀಳಾ ಸ್ವಾಗತಿಸಿ, ಧನ್ಯವಾದವಿತ್ತರು. ನಂತರ ಒಕ್ಕೂಟದ ಸದಸ್ಯರು ಹಾಗೂ ಜನ ಪ್ರತಿನಿಧಿಗಳು ಸೇರಿ ಶಾಲಾ ವಠಾರ ಹಾಗೂ ಅಂಗನವಾಡಿ ವಠಾರವನ್ನು ಸ್ವಚ್ಚತೆ ಮಾಡಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.