HomePage_Banner_
HomePage_Banner_
HomePage_Banner_
HomePage_Banner_
HomePage_Banner_
HomePage_Banner_
HomePage_Banner_

ತೋಟಗಾರಿಕಾ ಇಲಾಖೆ ಯಾಂತ್ರೀಕರಣ ಯೋಜನೆಯಡಿ ಸಹಾಯಧನ ಸೌಲಭ್ಯ ಪಡೆಯಲು ರೈತರಿಂದ ಅರ್ಜಿ ಆಹ್ವಾನ

Image result for thotagarike ilake logo

ಬೆಳ್ತಂಗಡಿ ತೋಟಗಾರಿಕಾ ಇಲಾಖೆಯಲ್ಲಿ2019-20ನೇ ಸಾಲಿಗೆ ಯಾಂತ್ರೀಕರಣ ಯೋಜನೆಯಡಿ ಸಹಾಯಧನ ಸೌಲಭ್ಯ ಪಡೆಯಲು ಆಸಕ್ತ, ಅರ್ಹ ರೈತರು ಬೇಡಿಕೆ ಅರ್ಜಿ ನೋಂದಣಿಗಾಗಿ ಅ.17 ರಿಂದ ಅ.24 ರವೆರೆಗೆ ಬೆಳ್ತಂಗಡಿ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರ ಕಛೇರಿಯನ್ನು ಕಛೇರಿ ಅವಧಿಯಲ್ಲಿ ಸಂಪರ್ಕಿಸಲು ಕೋರಿದೆ.
ಮಾರ್ಗಸೂಚಿಯಂತೆ ಚಾಲ್ತಿ ವರುಷದ ಬೇಡಿಕೆಗಳು ಚಾಲ್ತಿ ಸಾಲಿಗೆ ಮಾತ್ರ ಅನ್ವಯಿಸುವುದರಿಂದ ಕಳೆದ ಸಾಲಿನಲ್ಲಿ ಹೆಸರು ನೊಂದಾಯಿಸಿ, ಸಹಾಯಧನ ಲಭ್ಯವಾಗದೇ ಇರುವ ರೈತರು ಹೊಸದಾಗಿ ಬೇಡಿಕೆ ನೊಂದಾಯಿಸಬೇಕಾಗಿರುತ್ತದೆ. ಸಹಾಯಧನವನ್ನು ಸರಕಾರದ ಮಾರ್ಗಸೂಚಿಯಂತೆ ಜೇಷ್ಠತೆಯನ್ನು ಅನುಸರಿಸಿ ವಿಲೇ ಮಾಡಲಾಗುತ್ತದೆ ಎಂದು ಬೆಳ್ತಂಗಡಿ ಸಹಾಯಕ ತೋಟಗಾರಿಕಾ ನಿರ್ದೇಶಕರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ: ಸಹಾಯಕ ತೊಟಗಾರಿಕೆ ಅಧಿಕಾರಿ ಬೆಳ್ತಂಗಡಿ ಹೋಬಳಿ 8277806379, ಕೊಕ್ಕಡ ಹೋಬಳಿ 9632303018 ವೇಣೂರು ಹೋಬಳಿ 9449653719; 08256-232148, 8277806380 ಸಂಪರ್ಕಿಸಬಹುದು. ಇ-ಮೇಲ್: [email protected]

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.