ಬೆಳ್ತಂಗಡಿ: ಸಂಗಮ ಕಲಾವಿದರು ಉಜಿರೆ ಇದರ ದಶಮಾನೋತ್ಸವ ಪ್ರಯುಕ್ತ ಬರುವ ಫೆಬ್ರವರಿ ತಿಂಗಳಲ್ಲಿ ಸುರ್ಯ ದೇವಸ್ಥಾನದ ವಠಾರದಲ್ಲಿ ತಾಲೂಕು ಮಟ್ಟದ ತುಳು ಸಾಮಾಜಿಕ ನಾಟಕ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗಿದೆ.
ಸ್ಪರ್ಧೆಯಲ್ಲಿ ತಾಲೂಕಿನ ಹವ್ಯಾಸಿ ನಾಟಕ ತಂಡ ಭಾಗವಹಿಸಬಹುದು. ನಾಟಕದ ಅವಧಿ ಗರಿಷ್ಠ 2.30 ಗಂಟೆ, ಗರಿಷ್ಠ 5 ತಂಡಗಳನ್ನು ಮಾತ್ರ ಆಯ್ಕೆ ಮಾಡಲಾಗುವುದು. ವಿಜೇತ ತಂಡಕ್ಕೆ ರೂ.20 ಸಾವಿರ, ರೂ.15,000, ಮತ್ತು ರೂ.10,000 ನಗದು ಬಹುಮಾನ ಮತ್ತು ಫಲಕ ನೀಡಲಾಗುವುದು. ಅಲ್ಲದೆ ಶ್ರೇಷ್ಠ ನಿರ್ದೇಶಕ, ನಟ, ಬಾಲನಟ, ಪೋಷಕ ನಟ-ನಟಿ, ಹಾಸ್ಯ ಕಲಾವಿದ ಬಹುಮಾನವಿದೆ. ಪ್ರವೇಶ ಪತ್ರ ಸ್ವೀಕರಿಸಲು ನ.5 ಕೊನೆಯದಿನ. ಆಸಕ್ತ ತಂಡಗಳು ನಾಟಕದ ಪುಸ್ತಕ ಮತ್ತು ಸಿಡಿಯನ್ನು ಈ ಕೆಳಗಿನ ವಿಳಾಸಕ್ಕೆ ಕಳುಹಿಸಿಕೊಡಬೇಕಾಗಿ ವಿನಂತಿ. ಅರುಣ್ಕುಮಾರ್ ಕಾರ್ಯದರ್ಶಿ ಸಂಗಮ ಕಲಾವಿದರು. ಸಿ/ಒ ಹೊಳ್ಳ ಆರ್ಟ್ಸ್ ಜನಾರ್ದನ ದೇವಸ್ಥಾನದ ಬಳಿ ಉಜಿರೆ-574240-ಮೊ. 9535670878, 9448336918, 9845440338 ಸಂಪರ್ಕಿಸಬಹದು ಎಂದು ಸಂಘಟಕರು ತಿಳಿಸಿದ್ದಾರೆ.