HomePage_Banner_
HomePage_Banner_
HomePage_Banner_

ಬೆಳ್ತಂಗಡಿ: ಸಿಪಿಐಎಂ ನೇತೃತ್ವದಲ್ಲಿ ಪ್ರತಿಭಟನೆ

Advt_NewsUnder_1

ಬೆಳ್ತಂಗಡಿ: ಸಿಪಿಐಎಂ ಬೆಳ್ತಂಗಡಿ ತಾಲೂಕು ಸಮಿತಿ ಸಹಯೋಗದೊಂದಿಗೆ, ಬಿ.ಎಂ.ಭಟ್ ನೇತೃತ್ವದಲ್ಲಿ, ಎಲ್ಲಾ ಕಾರ್ಮಿಕ ಸಂಘಗಳ ಜಂಟಿ ಆಶ್ರಯದಲ್ಲಿ ಕೇಂದ್ರದ ನರೇಂದ್ರ ಮೋದಿ ಸರಕಾರದ ಕಾರ್ಮಿಕ ವಿರೋಧಿ, ಜನ ವಿರೋಧಿ ನೀತಿಯ ವಿರುದ್ಧ ಬೆಳ್ತಂಗಡಿ ಮಿನಿ ವಿಧಾನ ಸೌದ ಎದುರು ಪ್ರತಿಭಟನೆ ನಡೆಯಿತು.
ಭಾರತವನ್ನ ಆರ್ಥಿಕ ಬಿಕಟ್ಟಿಗೆ ತಂದು ನಿಲ್ಲಿಸಿದ ನರೇಂದ್ರ ಮೋದಿ ಆಡಳಿತದ ವೈಫಲ್ಯಗಳ ವಿರುದ್ಧ, ಸಾರ್ವಜನಿಕ ರಂಗದ ರಕ್ಷಣೆ, ಕೈಗಾರಿಕೆಗಳ ಮುಚ್ಚುವಂತೆ ಮಾಡಿದ ಸರಕಾರದ ನೀತಿ, ಉದ್ಯೋಗಗಳ ಸೃಷ್ಟಿಯ ಬದಲು ಉದ್ಯೋಗ ನಾಶ ಆಗುತ್ತಿರುವುದರ ವಿರುದ್ಧ, ಋಣಮುಕ್ತ ಕಾಯ್ದೆಯಡಿ ಎಲ್ಲಾ ಬಡವರ, ಕೂಲಿಕಾರರ, ಬೀಡಿ ಕಾರ್ಮಿಕರ, ಅದರಲ್ಲೂ ಮುಖ್ಯವಾಗಿ ಪ್ರವಾಹಪೀಡಿತ ಪ್ರದೇಶದ ಜನರ ಸಾಲಗಳನ್ನು ಮನ್ನಾ ಮಾಡಲು ಆಗ್ರಹಿಸಿ, ಕಲ್ಯಾಣ ಮಂಡಳಿಗಳ ರಕ್ಷಣೆ, ಕನಿಷ್ಟವೇತನ 21,000 ನಿಗದಿ, ಸ್ಕೀಂ, ಗುತ್ತಿಗೆ ಕಾರ್ಮಿಕರ ಖಾಯಮಾತಿಗೆ ಒತ್ತಾಯಿಸಿ ಪ್ರತಿಭಟನೆ ನಡೆಸಲಾಯಿತು.
2020 ಜನವರಿ 8 ರಂದು ಕೇಂದ್ರದ ಧೋರಣೆಯ ವಿರುದ್ಧ ಅಖಿಲಭಾರತ ಮುಷ್ಕರ ನಡೆಸಲಿರುವ ಬಗ್ಗೆ ಕರೆ ನೀಡಲಾಯಿತು. ಈ ಸಂದರ್ಭದಲ್ಲಿ ಕಾರ್ಮಿಕ ನಾಯಕರುಗಳಾದ ಲೋಕೇಶ್ ಕುದ್ಯಾಡಿ, ಜಯರಾಮ ಮಯ್ಯ, ಸಂಜೀವ ನಾಯ್ಕ, ನೆಬಿಸಾ, ಜಯಶ್ರೀ, ರಾಮಚಂದ್ರ, ಪುಷ್ಪಾ, ಸುಜಾತ, ವಿನೋದ, ಮೊದಲಾದವರಿದ್ದರು.

Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.