ತೆಂಕಕಾರಂದೂರು: ಶಾಲಾ ವಾರ್ಷಿಕೋತ್ಸವದ ಪೂರ್ವಬಾವಿ ಸಭೆ

ತೆಂಕಕಾರಂದೂರು: ಸ. ಉ. ಪ್ರಾ. ಶಾಲೆ ಪೆರೋಡಿತ್ತಾಯಕಟ್ಟೆ ಶಾಲಾ ಎಸ್. ಡಿ.ಎಂ.ಸಿ ಸಮಿತಿ ಹಾಗೂ ಹಳೆ ವಿದ್ಯಾರ್ಥಿ ಸಂಘಗಳ ಜಂಟಿ ಆಶ್ರಯದಲ್ಲಿ ಡಿಸೆಂಬರ್ ತಿಂಗಳ ೨೧ನೇ ತಾರೀಕಿನಂದು ನಡೆಯುವ ಶಾಲಾ ವಾರ್ಷಿಕೋತ್ಸವ ಸಮಾರಂಭದ ಪೂರ್ವ ಭಾವಿ ಸಭೆ ಹಾಗೂ ಸಮಿತಿ ರಚನೆ ಅ.೧೩ರಂದು ಪೆರೋಡಿತ್ತಾಯಕಟ್ಟೆ ಶಾಲೆಯಲ್ಲಿ ಜರಗಿತು.
ಸಭೆಯಲ್ಲಿ ವಾರ್ಷಿಕೋತ್ಸವದ ಮುಂಚೆ ಆಗಬೇಕಿದ್ದ ಕಾಮಗಾರಿಗಳ ಹಾಗೂ ಸಮಾರಂಭದ ಕಾರ್ಯಕ್ರಮಗಳ ಖರ್ಚು ವೆಚ್ಚದ ಬಗ್ಗೆ ಚರ್ಚಿಸಿ, ನಾವು ಕಲಿತ ಜ್ಞಾನ ದೇಗುಲವನ್ನು ಮಾದರಿ ಶಾಲೆಯನ್ನಾಗಿ ಮಾಡುದಾಗಿ ತೀರ್ಮಾನಿಸಿ, ವಾರ್ಷಿಕೋತ್ಸವದ ಸಮಿತಿ ರಚಿಸಲಾಯಿತು.
ವಾರ್ಷಿಕೋತ್ಸವದ ಅಧ್ಯಕ್ಷರಾಗಿ ಪ್ರಸ್ತುತ ಹಳೇ ವಿದ್ಯಾರ್ಥಿ ಸಂಘದ ಗೌರವ ಅಧ್ಯಕ್ಷ ಸಂತೋಷ್ ಹೆಗ್ಡೆ ಭಜನೋಡಿ, ಕಾರ್ಯದರ್ಶಿ ಶಾಲಾ ಶಿಕ್ಷಕ ಶ್ರೀ ದೇವುದಾಸ್ ನಾಯಕ್, ಕೋಶಾಧಿ ಜಗದೀಶ್ ಗೌಡ ಕಜೆಬೆಟ್ಟು ಇವರುಗಳನ್ನು ನೇಮಕ ಮಾಡಿ ಹಾಗೂ ಇತರ ಸಮಿತಿಗಳನ್ನು ರಚಿಸಲಾಯಿತು.
ಈ ಸಮಾರಂಭದ ಅಧ್ಯಕ್ಷತೆಯನ್ನು ಜನಜಾಗ್ರತಿ ವೇದಿಕೆಯ ಸ್ಥಾಪಕಾಧ್ಯಕ್ಷ ವಸಂತ ಸಾಲ್ಯಾನ್ ವಹಿಸಿ, ವೇದಿಕೆಯಲ್ಲಿ ಬಳಂಜ ಗ್ರಾ.ಪಂ ಅಧ್ಯಕ್ಷೆ ದೇವಕಿ, ಗ್ರಾ. ಪಂ. ಸದಸ್ಯ ಗುರುರಾಜ್ ಹೆಗ್ಡೆ, ಶಾಲಾ ಹಳೇ ವಿದ್ಯಾರ್ಥಿ ಮಂಗಳೂರು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ದ.ಕ. ಜಿಲ್ಲೆ ಯ ಉಪನಿರ್ದೇಶಕರು ಸುಂದರ ಪೂಜಾರಿ, ರವಿ ಪೂಜಾರಿ ಮಜಲು ಯುವ ಉದ್ಯಮಿ ಚಿಲಿಂಬಿ ಮಂಗಳೂರು, ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷ ನೇಮು ಸಪಲ್ಯ, ಶಾಲಾ ಮುಖ್ಯ ಶಿಕ್ಷಕಿ ಪದ್ಮಾವತಿ, ಹ.ವಿ.ಅಧ್ಯಕ್ಷ ಸತೀಶ್ ಶೆಟ್ಟಿ ಅಲಿಮಾರ್, ಹಿರಿಯ ರಾದ ತಾಲ್ಲೂಕಿನ ನಿವೃತ್ತ ಗ್ರಾಮ ಕರಣಿಕ ಚಂದ್ರಮೋಹನ್ ರೈ, ಸಮಿತಿ ಪದಾಧಿಕಾರಿಗಳು ಉಪಸ್ಥಿತರಿದ್ದರು. 

ಕಾರ್ಯಕ್ರಮವನ್ನು ಶಾಲಾ ಮುಖ್ಯ ಶಿಕ್ಷಕಿ ಪದ್ಮಾವತಿ ಸ್ವಾಗತಿಸಿ, ಹ.ವಿ.ಸ. ಗೌ.ಅಧ್ಯಕ್ಷ ಸಂತೋಷ್ ಹೆಗ್ಡೆ ಪ್ರಾಸ್ತಾವಿಕ ಭಾಷಣ ಮಾಡಿ, ಕಾರ್ಯಕ್ರಮವನ್ನು ದೇವು ದಾಸ್ ನಾಯಕ ನಿರೂಪಿಸಿ, ಜಗದೀಶ್ ಗೌಡ ಧನ್ಯವಾದವಿತ್ತರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.