ಸರಕಾರಿ ಪದವಿ ಪೂರ್ವ ಕಾಲೇಜು ಅಳದಂಗಡಿ ಇಲ್ಲಿಯ ವಾರ್ಷಿಕ ವಿಶೇಷ ಶಿಬಿರ ಅ.೯ ರಂದು ನಾವರ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯಿತು. ಶಿಬಿರದ ಉದ್ಘಾಟನೆಯನ್ನು ಹಿರಿಯರಾದ ನಾವರಗುತ್ತು ರವಿರಾಜ ಹೆಗ್ಡೆಯವರು ನೆರವೇರಿಸಿ ಹಳ್ಳಿ ಪ್ರದೇಶದ ಶಾಲೆಗೆ ಬಂದು ಇಲ್ಲಿಯ ನಾಗರಿಕರೊಂದಿಗೆ ಬೆರೆಯುವ ಒಂದು ವಾರದ ಕಾರ್ಯಕ್ರಮ ಯಶಸ್ವಿಯಾಗಲಿ ಎಂದು ಶುಭ ಹಾರೈಸಿದರು.
ಸುಲ್ಕೇರಿ ಗ್ರಾಮ ಪಂಚಾಯತು ಅಧ್ಯಕ್ಷೆ ಯಶೋಧ ಯಲ್ ಬಂಗೇರ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಅಂಡಿಂಜೆ ತಾ.ಪಂ.ಸದಸ್ಯ ಸುಧೀರ್ ಆರ್.ಸುವರ್ಣ ಮುಖ್ಯ ಅತಿಥಿಯಾಗಿ ಭಾಗವಹಿಸಿ ವಿದ್ಯಾರ್ಥಿ ದೆಸೆಯಲ್ಲಿ ಪಠ್ಯದ ಜತೆಗೆ ಸೇವಾ ಮನೋಭಾವ ಹಾಗೂ ಶೈಕ್ಷಣಿಕ ಕಾರ್ಯಕ್ರಮದ ಬಗ್ಗೆ ಸಂಪನ್ಮೂಲ ವ್ಯಕ್ತಿಗಳಿಂದ ಅರಿವು ಪಡಕೊಂಡು ಭವಿಷ್ಯದಲ್ಲಿ ಉತ್ತಮ ನಾಗರೀಕರಾಗುವುದು ಸಂತೋಷ ತಂದಿದೆ ಎಂದರು.
ಅಳದಂಗಡಿ ಗ್ರಾ.ಪಂ.ಸದಸ್ಯ ಸದಾನಂದ ಪೂಜಾರಿ ಉಂಗಿಲಬೈಲು, ನಾವರ ಗ್ರಾಮ ಪಂಚಾಯತು ಸದಸ್ಯ ರವಿ ಪೂಜಾರಿ, ರಜನಿ ಬಾಲಕೃಷ್ಣ, ಅರ್ಚನಾ, ಹಾಗೂ ನಾವರ ಸ.ಕಿ.ಪ್ರಾ.ಶಾಲೆ ಮೇಲುಸ್ತುವಾರಿ ಸಮಿತಿ ಅಧ್ಯಕ್ಷ ರತ್ನಾಕರ ಪೂಜಾರಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ನಾವರ ಶಾಲಾ ಮುಖ್ಯೋಪಾಧ್ಯಾಯಿನಿ ಶಶಿದೇವಿ ಶುಭಾಶಂಸನೆ ಮಾಡಿದರು. ಕೊಕ್ರಾಡಿ ಸ.ಪ.ಪೂ ವಿದ್ಯಾಲಯದ ಪ್ರಾಂಶುಪಾಲ ನೋಬರ್ಟ್ ಮಾರ್ಟಿನ್ ದಿಕ್ಸೂಚಿ ಭಾಷಣ ಮಾಡಿದರು. ಕಾರ್ಯಕ್ರಮದಲ್ಲಿ ಅಳದಂಗಡಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಸನ್ನಿ ಕೆ.ಎಂ, ರಾಜ್ಯ ಶಾಸ್ತ್ರ ಉಪನ್ಯಾಸಕ ಸುಭಾಶ್ಚಂದ್ರ ಜೈನ್, ಉಪನ್ಯಾಸಕ ಸಂತೋಷ್, ನಾವರ ಶಾರದೋತ್ಸವ ಸಮಿತಿಯ ಸಂಚಾಲಕ ವಿಜಯ ಕುಮಾರ್ ಜೈನ್, ನಾವರ ಪ್ರಗತು ಬಂಧು ಒಕ್ಕೂಟದ ಅಧ್ಯಕ್ಷ ವೀರೇಂದ್ರ ಕುಮಾರ್ ಜೈನ್, ಶ್ರೀ.ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಪುಷ್ಪಾವತಿ, ಹಳೇ ವಿದ್ಯಾರ್ಥಿ ಸಂಘದ ಅಧ್ಯಕ್ಷ ಲ್ಯಾನ್ಸಿ ರೊಡ್ರಿಗಸ್, ಆಶಾ ಕಾರ್ಯಕರ್ತೆ ಗಿರಿಜಾ ಅಶೋಕನಗರ ಉಪಸ್ಥಿತರಿದ್ದರು. ಅಳದಂಗಡಿ ಪದವಿ ಕಾಲೇಜಿನ ಗಣಿತ ಉಪನ್ಯಾಸಕ ಹಾಗೂ ಶಿಭಿರಾಧಿಕಾರಿ ಸದಾನಂದ ಕುಲಾಲ್ ಪ್ರಸ್ತಾವನೆ ಮಾಡಿದರು.