HomePage_Banner_
HomePage_Banner_

ನಾಳ ರಾಷ್ಟ್ರೀಯ ಸೇವಾ ಯೋಜನೆ ವಾರ್ಷಿಕ ಶಿಬಿರ ಸಮಾರೋಪ

ನಾಳ: ಇಲ್ಲಿಯ ಸರಕಾರಿ ಉನ್ನತಿಕರಿಸಿದ ಹಿರಿಯ ಪ್ರಾಥಮಿಕ ನಾಳ ಹಾಗೂ ಪದವಿಪೂರ್ವ ಶಿಕ್ಷಣ ಇಲಾಖೆ ಬೆಂಗಳೂರು, ವಾಣಿ ಪದವಿ ಪೂರ್ವ ಕಾಲೇಜು, ಬೆಳ್ತಂಗಡಿ ಇದರ ಸಂಯುಕ್ತ ಆಶ್ರಯ ರಾಷ್ಟ್ರೀಯ ಸೇವಾ ಯೋಜನೆ ವಾರ್ಷಿಕ ವಿಶೇಷ ಶಿಬಿರದ ಸಮಾರೋಪ ಸಮಾರಂಭ ಅ.8.ರಂದು ಮಧ್ಯಾಹ್ನ ನಡೆಯಿತು.

ಸಮಾರೋಪ ಸಮಾರಂಭದ ಮುಖ್ಯ ಅತಿಥಿಗಳಾಗಿ ಮಾತನಾಡುತ್ತಾ ವಿದ್ಯಾರ್ಥಿ ಜೀವನದಲ್ಲಿ ಉತ್ತಮ ಗುಣಮಟ್ಟದ ವಿಧ್ಯಾಭ್ಯಾಸ ಜೊತೆಗೆ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡು ಮುಂದಿನ ಪೀಳಿಗೆಗೆ ಮಾದರಿಯಾಗ ಬೇಕು. ಕಳೆದ 7 ದಿನಗಳಲ್ಲಿ ವಿವಿಧ ವಿಷಯಗಳ ಮಾಹಿತಿಗಳನ್ನು ಸಂಗ್ರಹಿಸಿ ದೈಹಿಕ, ಮಾನಸಿಕ ,ಆರೋಗ್ಯ ಮತ್ತು ಗ್ರಾಮ ಭೇಟಿ ನೀಡುವ ಮೂಲಕ ಜನರ ಕಷ್ಟ ಸುಖದ ಬಗ್ಗೆ ವಿಚಾರ ವಿನಿಮಯ ಮಾಡಿ ಗಳಿಸಿದ ಎಲ್ಲಾ ವಿಷಯಗಳನ್ನು ಮೈಗೂಡಿಸಿಕೊಂಡಾಗ ಜೀವನದಲ್ಲಿ ಬರುವ ಸಮಸ್ಯೆಗಳನ್ನು ಬಗೆಹರಿಸಲು ಸಾಧ್ಯ ಎಂದು ಕಿವಿ ಮಾತು ಹೇಳಿದರು.ವಾಣಿ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲರಾದ ಡಿ.ಯದುಪತಿ ಗೌಡ ಸಭಾ ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ ಕಳೆದ 1 ವಾರದ ನಡೆದ ಶಿಬಿರದಲ್ಲಿಪ್ರಮುಖಕರು,ವಿಧ್ಯಾಭಿಮಾನಿಗಳು ಹಾಗೂ ಊರಿನ ಗ್ರಾಮಸ್ಥರು ಸೇರಿದಂತೆ ಹಲವಾರು ರೀತಿಯಲ್ಲಿ ಸಹಕರಿಸಿದವರಿಗೆ ಅಭಿನಂದನೆ ಸಲ್ಲಿಸಿ,ಕಿರುಕಾಣಿಕೆ ನೀಡಿದರು.

ಗಣಕಯಂತ್ರ ಉಪನ್ಯಾಸಕಿ ಕಾಮಾಕ್ಷಿ ವಾರದ ವರದಿಯನ್ನು ಸಭೆಯಲ್ಲಿ ಮಂಡಿಸಿದರು. ಶಿಬಿರಾರ್ಥಿಗಳಾದ ನಿತೇಶ್,ಕು.ಹರಿಪ್ರೀಯಾ,ಕು.ರೇಷ್ಮಾ,ಕು.ಅಂಜನ ರಾವ್ ಶಿಬಿರದಲ್ಲಿ ಪಡೆದ ಅನುಭವವನ್ನು ಸಭೆಯಲ್ಲಿ ತಿಳಿಸಿದರು.

ವಾಣಿ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಮೋಹನ ಗೌಡ,ನಾಳ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ವಸಂತ ಮಜಲು,ವ್ಯವಸ್ಥಾಪನ ಸಮಿತಿ ಸದಸ್ಯ ಆನಂದ ಶೆಟ್ಟಿ. ಪಣೆಜಾಲು,ನಾಳ ಶಾಲೆಯ ಸಹ ಶಿಕ್ಷಕಿ ದಮಯಂತಿ ಎಂ. ತಾ .ಪಂ ಸದಸ್ಯ ಪ್ರವೀಣ್ ಗೌಡ, ಕಳಿಯ ಪಂಚಾಯತ್  ಸದಸ್ಯರಾದ ಹಾಗೂ ಶಿಬಿರ ಅನುಷ್ಠಾನ ಸಮಿತಿ ಅಧ್ಯಕ್ಷ ಸುಧಾಕರ ಮಜಲು, ನಾಳ ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷ ಮೋಹನ ಗೌಡ,ವಾಣಿ ಪ.ಪೂ.ಕಾಲೇಜು ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷ ದಿನೇಶ ಗೌಡ ಕಲಾಯಿತೋಟ್ಟು, ಶಿಬಿರ ಕಾರ್ಯದರ್ಶಿ ವಿಜಯ ಕುಮಾರ್ ಕಲಾಯಿತೋಟ್ಟು, ಘಟಕ ನಾಯಕರಾದ ನಿತೇಶ್,ಕು.ಪೂಜಾ ವೇದಿಕೆಯಲ್ಲಿ ಉಪಸ್ಥಿತರಿದ್ದರು.ಪ್ರಗತಿಪರ ಕೃಷಿಕ ಜನಾರ್ದನ ಗೌಡ ನಿರ್ಬುಂಡ,ರಾಜೇಶ್ ಪರ್ಬುಂಡ,ಕೇಶವ ಪೂಜಾರಿ ನಾಳ, ಮಮತ ಆಳ್ವ ನಾಳ,ಬಾಲಕೃಷ್ಣ ರೈ. ನಾಳ,ಸೋಮಪ್ಪ ಗೌಡ ಕುಬಯ,ಗಣೇಶ ಬಿ.ನಾಳ, ಕಳಿಯ ಪಂಚಾಯತ ಮಾಜಿ ಉಪಾಧ್ಯಕ್ಷ ಸತೀಶ್ ನಾೈಕ ನಾಳ,ವಾಣಿ ಕಾಲೇಜು ಉಪನ್ಯಾಸಕರಾದ ಮಹಾಬಲ ಗೌಡ, ಮೀನಾಕ್ಷಿ ಎನ್,ಸಿದ್ಧಿ ಪ್ರಭು,ಸುರೇಂದ್ರ, ಶಾವ್ಯ ಶೆಟ್ಟಿ,ಅನುಷಾ,ಶ್ರೀ ದೇವಿ,ಶಾಲಿಕ ಪಿ.ಆರ್. ಸುಧೀರ್ ಕೆ.ಎನ್,ರಕ್ಷಾ,ಚೇತನ್ ಕುಮಾರ್, ಶಂಕರ್ ರಾವ್,ಹೇಮಲತಾ ಎಂ,ಕಿಶೋರಿ,ರಮ್ಯಾ ಜೋಶಿ, ರವಿಶಂಕರ್ ಪಿ, ಕಾಲೇಜು ಶಿಬಿರಾರ್ಥಿಗಳು, ನಾಳ ಶಾಲಾ ಅಭಿವೃದ್ಧಿ ಸಮಿತಿ ಸದಸ್ಯರು, ನಾಳ ಶಾಲಾ ಸಹ ಶಿಕ್ಷಕರು ವಿಧ್ಯಾಭಿಮಾನಿಗಳು ಉಪಸ್ಥಿತರಿದ್ದು ಸಹಕರಿಸಿದರು.

ಶಿಬಿರಾರ್ಥಿಗಳಾದ ಕು.ವಸುಮತಿ,ಅಂಜನ ಕೆ ರಾವ್, ಪ್ರಾರ್ಥನೆ ಮಾಡಿದರು. ವಾಣಿ ಕಾಲೇಜು ಉಪಪ್ರಾಂಶುಪಾಲರಾದ ವಿಷ್ಣುಪ್ರಕಾಶ್ ಎಂ.ಸ್ವಾಗತಿಸಿದರು. ಆಂಗ್ಲ ಬಾಷಾ ಉಪನ್ಯಾಸಕಿ ಅನುರಾಧ ಕೆ.ರಾವ್ ಕಾರ್ಯಕ್ರಮ ನಿರೂಪಿಸಿದರು. ಶಿಬಿರ ಕಾರ್ಯಕ್ರಮಾಧಿಕಾರಿ,ಉಪನ್ಯಾಸಕ ನಂದಕುಮಾರ್ ಧನ್ಯವಾದವಿತ್ತರು.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.