HomePage_Banner_
HomePage_Banner_
HomePage_Banner_
HomePage_Banner_
HomePage_Banner_
HomePage_Banner_

ಪುತ್ತೂರು ಎ.ಸಿಯಾಗಿ ಸುಧಾಕರ್ ಲೊಖಾಂಡೆ

ಬೆಳ್ತಂಗಡಿ : ಪುತ್ತೂರು ಉಪವಿಭಾಗದ ನೂತನ ಸಹಾಯಕ ಆಯಕ್ತರಾಗಿ ಐ.ಎ.ಎಸ್ ಅಧಿಕಾರಿ ಸ್ನೇಹಲ್ ಸುಧಾಕರ್ ಲೊಖಾಂಡ್ ಅವರನ್ನು ನೇಮಕಗೊಳಿಸಿ ಸರಕಾರ ಆದೇಶಿಸಿದೆ.
೨೦೧೭ನೇ ಬ್ಯಾಚ್‌ನ ಐಎಎಸ್ ಅಧಿಕಾರಿಯಾಗಿರುವ ಇವರು ಮಹಾರಾಷ್ಟ್ರ ಪುಣೆ ಮೂಲದವರು. ಇವರ ತಂದೆ ಸುಧಾಕರ್ ಅವರು ಅಂಬರ್‍ನಾಥ್‌ನ ಡಿಫೆನ್ಸ್ ನ ನಿವೃತ್ತ ಸೀನಿಯರ್ ಅಡಿಟರ್ ಆಗಿದ್ದು ತಾಯಿ ಉಷಾ ಲೊಖಾಂಡೆ ಅವರು ಗೃಹಿಣಿ. ಪ್ರಸ್ತುತ ಪುತ್ತೂರು ಉಪವಿಭಾಗದ ಸಹಾಯಕ ಆಯುಕ್ತರಾಗಿರುವ ಹೆಚ್.ಕೆ ಕೃಷ್ಣಮೂರ್ತಿಯವರಿಗೆ ಕೆಲವು ದಿನಗಳ ಹಿಂದೆಯಷ್ಟೇ ಸರಕಾರ ಮುಂಬಡ್ತಿ ನೀಡಿತ್ತು. ಸದ್ಯ ಹಿರಿಯ ಉಪವಿಭಾಗಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ಹೆಚ್.ಕೆ ಕೃಷ್ಣಮೂರ್ತಿಯವರಿಗೆ ವರ್ಗಾವಣೆ ಆದೇಶ ಇನ್ನಷ್ಟೆ ಬರಬೇಕಿದ್ದು ಸ್ನೇಹಲ್ ಸುಧಾಕರ್ ಲೊಖಾಂಡ್ ಅವರ ಆಗಮನದ ಬಳಿಕ ಕೃಷ್ಣಮೂರ್ತಿಯವರು ಅಧಿಕಾರ ಹಸ್ತಾಂತರಿಸಿ ನಿರ್ಗಮಿಸಲಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.