ಪದ್ಮುಂಜ : ಕಾಳು ಮೆಣಸು ಬೆಳೆಯ ವೈಜ್ಞಾನಿಕ ಕೃಷಿ ತರಬೇತಿ ಕಾರ್ಯಕ್ರಮ

ಪದ್ಮುಂಜ:ಕರ್ನಾಟಕ ಪಶುವೈದ್ಯಕೀಯ ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ,ಭಾ,ಕೃ,ಅ,ಪ,ಕೃಷಿ ವಿಜ್ಞಾನ ಕೇಂದ್ರ ಮಂಗಳೂರು, ತೋಟಗಾರಿಕೆ ಇಲಾಖೆ ಮತ್ತು ಕಲ್ಲೇರಿ ನವ ಚೇತನ ತೋಟಗಾರಿಕಾ ರೈತ ಉತ್ಪಾದಕರ ಕಂಪನಿ ಇದರ ಜಂಟಿ ಸಹಭಾಗಿತ್ವದಲ್ಲಿ ಎಫ್. ಪಿ.ಓ. ಸದಸ್ಯರಿಗೆ ಕಾಳು ಮೆಣಸು ಬೆಳೆಯ ವೈಜ್ಞಾನಿಕ ಕೃಷಿ ತರಬೇತಿ ಕಣಿಯೂರು ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ಅ.3 ರಂದು ನಡೆಯಿತು.

ಕಣಿಯೂರು ಗ್ರಾಮ ಪಂಚಾಯತ್ ಅಧ್ಯಕ್ಷ ಸುನೀಲ್ ಸಾಲ್ಯಾನ್ ದೀಪ ಬೆಳಗಿಸಿ ಚಾಲನೆ ನೀಡಿ, ಕಲ್ಲೇರಿ ನವ ಚೇತನ ತೋಟಗಾರಿಕೆಯಾಗಿ ಕಂಪೆನಿಯ ವತಿಯಿಂದ ಗ್ರಾಮೀಣ ಭಾಗದ ಕೃಷಿಕರಿಗೆ ಕಾಳುಮೆಣಸು ವೈಜ್ಞಾನಿಕ ಕೃಷಿಯ ಬಗ್ಗೆ ಮಾಹಿತಿ ನೀಡುವ ಮೂಲಕ ಕೃಷಿಕರಿಗೆ ವಿವಿಧ ರೀತಿಯ ಉಪಯುಕ್ತ ಮಾಹಿತಿಯನ್ನು ಒದಗಿಸುತ್ತಾರೆ. ಹಾಗೂ ಪಂಚಾಯತ್ ವ್ಯಾಪ್ತಿಯಲ್ಲಿ ಕೃಷಿ ಮಾರುಕಟ್ಟೆ, ಕೃಷಿ ಮಾಹಿತಿ,ಕೃಷಿ ಮೇಳವನ್ನು ನಡೆಸುವ ಸಂಘ,ಸಂಸ್ಥೆಗಳಿಗೆ ಪಂಚಾಯತ ಮೂಲಕ ಹೆಚ್ಚಿನ ಸಹಕಾರ ನೀಡುವುದಾಗಿ ಹೇಳಿದರು.
ನವಚೇತನ ತೋಟಗಾರಿಕಾ ರೈತ ಉತ್ಪಾದಕರ ಕಂಪನಿಯ ಅಧ್ಯಕ್ಷ ಪಿ.ದುಗ್ಗಪ್ಪ ಗೌಡ ಅಧ್ಯಕ್ಷತೆ ವಹಿಸಿ ಮಾತನಾಡಿ,ರೈತರು ತಮ್ಮ ಕೃಷಿ ಚಟುವಟಿಕೆಯಲ್ಲಿ ಅಧುನಿಕ ಯಂತ್ರೋಪಕರಣಗಳ ಬಳಸುವ ಮೂಲಕ ವೈಜ್ಞಾನಿಕ ಕೃಷಿ ಪದ್ದತಿಯನ್ನು ಅಳವಡಿಸಿ ಹೆಚ್ಚು ಲಾಭಗಳಿಸಬಹುದು. ಹಾಗೂ ಮುಂದಿನ ದಿನಗಳಲ್ಲಿ ಕೃಷಿಕರಿಗೆ ಜಮೀನಿನ ಮಣ್ಣು ಮಾದರಿ ಪರೀಕ್ಷೆಯನ್ನು ಉಚಿತವಾಗಿ ಸಂಬಂಧಿಸಿದ ಇಲಾಖೆಯ ವತಿಯಿಂದ ಮಾಡಿಸುವುದಾಗಿ ತಿಳಿಸಿದರು.

ಬೆಳ್ತಂಗಡಿ ಸಹಾಯಕ ತೋಟಗಾರಿಕಾ ನಿರ್ದೇಶಕ ಶಿವಪ್ರಕಾಶ್ ಎಂ,ಮಂಗಳೂರು ಕಂಕನಾಡಿ, ಪಿ.ಎಫ್.ಓ.ವಿಜ್ಞಾನಿ ಡಾ.ರಶ್ಮಿಆರ್, ಸಸ್ಯ ಸಂರಕ್ಷಣಾ ವಿಜ್ಞಾನಿ ಡಾ.ಕೇದಾರನಾಥ, ಮಣ್ಣು ವಿಜ್ಞಾನಿ ಡಾ.ಮಲ್ಲಿಕಾರ್ಜುನ ಎಲ್ ಮತ್ತು ತಾಂತ್ರಿಕ ಸಿಬ್ಬಂದಿಗಳು ಕಾಳು ಮೆಣಸು ಕೃಷಿಕರಿಗೆ ಮಾಹಿತಿ ನೀಡಿದರು. ಪದ್ಮುಂಜ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಡೀಕಯ್ಯ ಗೌಡ, ನಿರ್ದೇಶಕ ಯು.ನಾರಾಯಣ ಭಟ್, ಲಿಂಗಪ್ಪ ನೈಾಕ, ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ನಾರಾಯಣ ಶೆಟ್ಟಿ ಮತ್ತು ಸ್ಥಳೀಯ ಕೃಷಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ಸಂಘದ ನಿರ್ದೇಶಕ ತಿಮ್ಮಯ್ಯ ಗೌಡ ಸ್ವಾಗತಿಸಿದರು. ಉಪಾಧ್ಯಕ್ಷ ವಿನ್ಸೆಂಟ್ ಬ್ರಾಗ್ಗ್ಸ ಧನ್ಯವಾದವಿತ್ತರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.