ಜೇಸಿ ಚಿದಾನಂದ ಇಡ್ಯಾರವರಿಗೆ ಅತ್ಯುತ್ತಮ ವಲಯಾಧಿಕಾರಿ ಪ್ರಶಸ್ತಿ

ಬೆಳ್ತಂಗಡಿ : ಜೆಸಿಐ ಬೆಳ್ತಂಗಡಿ ಮಂಜುಶ್ರೀಯ ಪೂರ್ವಾಧ್ಯಕ್ಷ ಜೇಸಿ ಚಿದಾನಂದ ಇಡ್ಯಾರವರಿಗೆ ಉಡುಪಿ, ದ.ಕ ಉತ್ತರಕನ್ನಡ ಜಿಲ್ಲೆಗಳನ್ನೊಳಗೊಂಡ ವಲಯ ೧೫ರ ವಲಯ ಸಮ್ಮೇಳದಲ್ಲಿ ಅತ್ಯುತ್ತಮ ವಲಯಾಧಿಕಾರಿ ಪ್ರಶಸ್ತಿ ಲಭಿಸಿದೆ.
ಅ.೫ರಂದು ಮಂಗಳೂರಿನಲ್ಲಿ ನಡೆದ ವಲಯಾ ಸಮ್ಮೇಳನದಲ್ಲಿ ವಲಯದ ನಾಯಕರುಗಳು ಹಾಗೂ ರಾಷ್ಟ್ರೀಯ ಉಪಾಧ್ಯಕ್ಷೆ ರಾಖಿ ಜೈನ್ ರವರ ಸಮ್ಮುಖದಲ್ಲಿ ವಲಯಾಧ್ಯಕ್ಷ ಅಶೋಕ್ ಚುಂತಾರು ಪ್ರಶಸ್ತಿ ನೀಡಿ ಗೌರವಿಸಿದರು. ೨೦೧೬ರಿಂದ ವಲಯದಲ್ಲಿ ಹಲವಾರು ಹುದ್ದೆಗಳನ್ನು ಅತ್ಯಂತ ಯಶಸ್ವಿಯಾಗಿ ನಿರ್ವಹಿಸಿ ಪ್ರಸ್ತುತ ವರ್ಷದಲ್ಲಿ ವ್ಯವಹಾರ ವಿಭಾಗದ ನಿರ್ದೇಶಕರಾಗಿ, ಕಾಪುವಿನಲ್ಲಿ ಅತ್ಯಂತ ಯಶಸ್ವಿಯಾಗಿ ವ್ಯವಹಾರ ಸಮ್ಮೇಳನ ಆಯೋಜಿಸಿ ಯಶಸ್ವಿಗೊಳಿಸಿದ್ದು ಇವರ ಸಂಘಟನಾ ಚತುರತೆ, ಕರ್ತವ್ಯ ನಿಷ್ಠೆಯನ್ನು ಪರಿಗಣಿಸಿ ಈ ಪ್ರಶಸ್ತಿಯನ್ನು ನೀಡಲಾಯಿತು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.