ಬಳಂಜದಲ್ಲಿ ಬಲೇ ಕೆಸರುಡೊಂಜಿ ದಿನ ಗೊಬ್ಬುಗ ಗ್ರಾಮೀಣ ಕ್ರೀಡಾಕೂಟ

ಮಕ್ಕಳಿಂದ ಹಿಡಿದು ವೃದ್ಧರ ತನಕ ಮನಸಾರೆ ಆಡಿ, ಕುಣಿದು, ಕುಪ್ಪಳಿಸಿದ ಗ್ರಾಮಸ್ಥರು 

 

ಬಳಂಜ : ಶ್ರೀ ಪಂಚಲಿಂಗೇಶ್ವರ ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನ ಬಳಂಜ, ಶ್ರೀ ಪಂಚಲಿಂಗೇಶ್ವರ ಭಜನಾ ಮಂಡಳಿ ಮತ್ತು ಶ್ರೀ ಉಮಾಮಹೇಶ್ವರ ಯುವಕ ಮಂಡಲ ಬಳಂಜ ಅರ್ಪಿಸುವ, ಉದ್ಯಮಿ ಎನ್ವಿಗ್ರೀನ್ ಬಯೋಟೆಕ್ ಇಂಡಿಯಾ ಪೈ.ಲಿ ಬೆಂಗಳೂರು ಇದರ ಸ್ಥಾಪಕ ಅಶ್ವಥ್ ಹೆಗ್ಡೆ ಬಳಂಜರವರ ಸಾರಥ್ಯದಲ್ಲಿ ದಸರಾ ಹಬ್ಬದ ಪ್ರಯುಕ್ತ ಬಳಂಜ ವಲಯ ಮಟ್ಟದ ಗ್ರಾಮೀಣ ಕೆಸರುಗದ್ದೆ ಕ್ರೀಡಾಕೂಟ ೨೦೧೯, ಬಲೇ ಕೆಸರ್‌ಡೊಂಜಿ ದಿನ ಗೊಬ್ಬುಗ ಕಾರ್ಯಕ್ರಮವು ಅ. ೬ರಂದು ಬಳಂಜಗುತ್ತು ಬಾಕಿಮಾರುಗದ್ದೆಯಲ್ಲಿ ಭೂಮಿ ತಾಯಿಗೆ ಪೂಜೆ ಸಲ್ಲಿಸಿ, ಅವನಿ ಪ್ರಭಾಕರ ಹೆಗ್ಡೆಯವರ ಕಂಬಳ ಕೋಣಗಳನ್ನು ಕರೆಗೆ ಇಳಿಸುವುದರ ಮೂಲಕ ಪಂದ್ಯಾಟಕೆ ವಿಶೇಷವಾಗಿ ಚಾಲನೆ ನೀಡಲಾಯಿತು.

ಉಭಯ ಜಿಲ್ಲಾ ಜನಜಾಗೃತಿ ವೇದಿಕೆಯ ಸ್ಥಾಪಕಧ್ಯಕ್ಷ ಕೆ.ವಸಂತ ಸಾಲಿಯಾನ್ ಕಾಪಿನಡ್ಕ ದೀಪ ಬೆಳಗಿಸಿ, ತಾಳೆ ಗರಿಯನ್ನು ಬಿಡಿಸುವುದರ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ಬೆಳಗ್ಗಿನಿಂದ ಸಂಜೆಯವರೆಗೆ ನಡೆಯುವ ಎಲ್ಲಾ ಪಂದ್ಯಾಟಗಳು ಅತ್ಯಂತ ಯಶಸ್ವಿಯಾಗಿ ನಡೆಯಲಿ ಎಂದು ಶುಭ ಹಾರೈಸಿದರು.


ಮುಖ್ಯ ಅತಿಥಿ ದಯಾನಂದ ಜಿ. ಕತ್ತಲ್‌ಸಾರ್ ಮಾತನಾಡಿ ಬಳಂಜದಲ್ಲಿ ನಡೆದ ಇಂತಹ ಕ್ರೀಡಾಕೂಟದ ದೇಶೀ ಸೊಗಡನ್ನು ಬಿಂಬಿಸುವಂತಿದೆ. ಆಧುನಿಕತೆಯ ಭರಟೆಯಲ್ಲಿ ಗ್ರಾಮೀಣ ಕ್ರೀಡೆಗಳು ಮರೆಯಾಗುತ್ತಿರುವ ಸಂದರ್ಭದಲ್ಲಿ ಯುವ ಉದ್ಯಮಿ ಅಶ್ವಥ್ ಹೆಗ್ಡೆ ಇಲ್ಲಿನ ಜನತೆಗೆ ಇಂತಹ ಕ್ರೀಡಾಕೂಟ ಹಮ್ಮಿಕೊಂಡಿರುವುದು ಅತ್ಯಂತ ಖುಷಿ ಕೊಟ್ಟಿದೆ ಎಂದರು.


ವೇದಿಕೆಯಲ್ಲಿ ಬಳಂಜ ಗುತ್ತು ಶ್ರೀಮತಿ ಚಂದನಾ ಪಡಿವಾಳ್, ತಾ.ಪಂ ಮಾಜಿ ಸದಸ್ಯ ಹೆಚ್. ಧರ್ಣಪ್ಪ ಪೂಜಾರಿ, ಪ್ರಗತಿಪರ ಕೃಷಿಕ ಸತೀಶ್ ರೈ ಬಾರ್ದಡ್ಕ, ನಿವೃತ್ತ ಶಿಕ್ಷಕ ಉಸ್ಮಾನ್.ಎ, ಬಳಂಜ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಅನುವಂಶೀಯ ಆಡಳಿತ ಮೊಕ್ತೇಸರಾದ ಬಿ.ಶೀತಲ್ ಪಡಿವಾಳ್, ಕುಳೆಂಜಿರೋಡಿಗುತ್ತು ಅರುಣ್ ಹೆಗ್ಡೆ, ಬಳಂಜ ಗ್ರಾ.ಪಂ ಸದಸ್ಯರಾದ ಯಶೋಧರ ಶೆಟ್ಟಿ, ಮಂಗಳಾ ದೇವಾಡಿಗ, ರೇವತಿ, ಪ್ರಗತಿಪರ ಕೃಷಿಕ ಪ್ರಭಾಕರ ಹೆಗ್ಡೆ ಕೋಡಿ, ಬಳಂಜ ಗ್ರಾ.ಪಂ ಮಾಜಿ ಅಧ್ಯಕ್ಷ ಸುರೇಶ್ ಶೆಟ್ಟಿ ಕುರೆಲ್ಯಗುತ್ತು, ದೈಹಿಕ ಶಿಕ್ಷಕರಾದ ಜಯರಾಜ್ ಜೈನ್, ಪ್ರಭಾಕರ ನಾರಾವಿ, ಅಜಿತ್ ಕೊಕ್ರಾಡಿ, ಧರ್ಮೆಂದ್ರ ಮೊದಲಾದವರು ಉಪಸ್ಥಿತರಿದ್ದರು. ಅಶ್ವಥ್ ಹೆಗ್ಡೆ ಬಳಂಜ ಪ್ರಾಸ್ತಾವಿಕ ಮಾತನಾಡಿ ಸ್ವಾಗತಿಸಿ, ಸತೀಶ್ ಹೊಸ್ಮಾರು ನಿರೂಪಿಸಿ, ಜಗದೀಶ್ ಪರಾರಿ ವಂದಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.