ನಾಳ ನವರಾತ್ರಿ: ಪೂಜೆ-ಪಕ್ಷ ಭಜನೆ”ಆಯುಧಪೂಜೆ ಮಂತ್ರಾಕ್ಷತೆ” ಮತ್ತು ಯಕ್ಷಗಾನ ಪ್ರದರ್ಶನ

ನಾಳ : ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ನವರಾತ್ರಿ ಪೂಜೆ,ಪಕ್ಷ ಭಜನೆ,ಆಯುಧ ಪೂಜೆ-ಮಂತ್ರಾಕ್ಷತೆ ಹಾಗೂ ವಾಹನ ಪೂಜೆ ಅ.7 ರಂದು ಜರಗಿತು.

ಬಂಟಪ್ಪ ನಾೈಕ್ ಮತ್ತು ಮಕ್ಕಳು ಮಜಲು ಇವರಿಂದ ಭಜನಾ ಸೇವೆ, ದೇವಿ ಆದಿಶಕ್ತಿ ಭಜನಾ ಮಂಡಳಿ ವೇಣೂರು ಸದಸ್ಯರಿಂದ ಭಜನಾ ಕಾರ್ಯಕ್ರಮ ವಿಜ್ರಂಭಣೆಯಿಂದ ನಡೆಯಿತು. ಶ್ರೀಮತಿ ಮತ್ತು ಲಿಂಗಪ್ಪ ಗೌಡ ಕಳಿಯ ಮನೆಯವರಿಂದ ರಾತ್ರಿ ಸಾರ್ವಜನಿಕ ಅನ್ನ ಸಂತರ್ಪಣೆ ನೆರವೇರಿಸಿದರು. ಜಿಲ್ಲೆಯ ಪ್ರಸಿದ್ಧ ಕಲಾವಿದರಿಂದ “ಶಶಿಪ್ರಭಾ ಪರಿಣಯ” ಯಕ್ಷಗಾನ ಪ್ರದರ್ಶನ ನಡೆಯಿತು.

ಹಿಮ್ಮೇಳ ರವಿಚಂದ್ರ ಕನ್ನಡಿಕಟ್ಟೆ,ಅಮ್ರತಾ ಅಡಿಗ ಪಾಣಾಜೆ,ಪದ್ಮನಾಭ ಉಪಾಧ್ಯಾಯ ಮತ್ತು ಕಲಾವಿದರು ಉಪಸ್ಥಿತರಿದ್ದರು.ನವರಾತ್ರಿ ಭಜನಾ ಸೇವಾ ಕರ್ತರನ್ನು,ಭಜನಾ ಸೇವೆಯಲ್ಲಿ ಭಾಗವಹಿಸಿದ್ದ ಮಂಡಳಿಯ ಸದಸ್ಯರನ್ನು, ಅನ್ನ ಸಂತರ್ಪಣೆ ಸೇವಾ ಕರ್ತರನ್ನು ದೇವಸ್ಥಾನದ ವತಿಯಿಂದ ಶಾಲು ಹೊದಿಸಿ ಗೌರವಿಸಲಾಯಿತು.ಸುಮಾರು 500 ಕ್ಕೂ ಹೆಚ್ಚು ವಿವಿಧ ವಾಹನ ಮತ್ತು ಆಯುಧ ಪೂಜೆ ನಡೆಯಿತ್ತು.ಈ ಸಂದರ್ಭದಲ್ಲಿ ವ್ಯವಸ್ಥಾಪನ ಸಮಿತಿ,ಅಭಿವೃದ್ಧಿ ಸಮಿತಿ, ಭಜನಾ ಮಂಡಳಿ ಪದಾಧಿಕಾರಿಗಳು,ಅರ್ಚಕರು ಮತ್ತು ಸಿಬ್ಬಂದಿಗಳು ಉಪಸ್ಥಿತರಿದ್ದು ಕಾರ್ಯಕ್ರಮದ ಯಶಸ್ವಿಗೆ ಸಹಕರಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.