ಮುಂಡೂರು: ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ

ಮುಂಡೂರು: ಇಲ್ಲಿನ ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನ, ಶ್ರೀ ಶಾರದಾಂಭ ಭಜನಾ ಮಂಡಳಿ ಹಾಗೂ ಶ್ರೀ ಶಾರದಾಂಭ ಯುವಕ ಮಂಡಲದ ಆಶ್ರಯದಲ್ಲಿ ಉನ್ನತ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ನಡೆಯಿತು.
ಮುಂಡೂರು ಮಹಾಬಲ ಶೆಟ್ಟಿ ಹಾಗೂ ಅರುಣಾ ದಂಪತಿ ಪುತ್ರ ಮುಂಡೂರು ಸರಕಾರಿ ಕಿ. ಪ್ರಾ. ಶಾಲೆಯ ಹಳೆ ವಿದ್ಯಾರ್ಥಿ ಕಾಕ್ಷತ್ ಶೆಟ್ಟಿ ಸರಕಾರಿ ಪ್ರೌಢ ಶಾಲೆ ಗುರುವಾಯನಕೆರೆಯಲ್ಲಿ ವಿದ್ಯಾಭ್ಯಾಸ ಗೈದು ಎಸ್.ಎಸ್.ಎಲ್.ಸಿ.ಯಲ್ಲಿ ಶೇಕಡಾ ೮೮ ಅಂಕ ಪಡೆದು ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿರುತ್ತಾರೆ. ಮುಂಡೂರು ಕಲ್ಲಂಡ ವಸಂತ ಶೆಟ್ಟಿ ಹಾಗೂ ಪುಷ್ಪಾ ದಂಪತಿಯ ಪುತ್ರ ಮುಂಡೂರು ಸ. ಕಿ. ಪ್ರಾ ಶಾಲೆಯ ಹಳೆ ವಿದ್ಯಾರ್ಥಿ ಪ್ರಜ್ವಲ್.ವಿ ಶೆಟ್ಟಿ ಉಜಿರೆ ಎಸ್.ಡಿ.ಯಂ ಕಾಲೇಜಿನಲ್ಲಿ ಇಲೆಕ್ಟ್ರಿಕಲ್ ಹಾಗೂ ಎಲೆಕ್ಟ್ರಾನಿಕ್ ವಿಷಯದಲ್ಲಿ ಇಂಜಿನಿಯರಿಂಗ್ ಶಿಕ್ಷಣವನ್ನು ಪಡೆದು ಶೇ.೭೧ ಅಂಕ ಪಡೆದು ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿರುತ್ತಾರೆ. ಮುಂಡೂರು ಅಶೋಕ್ ಜೈನ್ ಹಾಗೂ ವೈಶಾಲಿ ಜೈನ್ ದಂಪತಿ ಪುತ್ರಿ ನಾರಾವಿ ಸೈಂಟ್ ಆಂಟನಿ ಪ್ರೌಢ ಶಾಲೆಯಲ್ಲಿ ವಿದ್ಯಾಭ್ಯಾಸ ಗೈದು ಶೇ.೮೬ ಅಂಕ ಪಡೆದು ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಈ ಎಲ್ಲಾ ವಿದ್ಯಾರ್ಥಿಗಳನ್ನು ಶಾರದಂಭ ಭಜನಾ ಮಂಡಳಿಯ ಅಧ್ಯಕ್ಷ ಶ್ರೀಧರ್ ಅಂಚನ್, ಕೋಶಾಧಿಕಾರಿ ಆನಂದ ಆಚಾರ್, ದುರ್ಗಾಪರಮೇಶ್ವರಿ ದೇವಸ್ಥಾನದ ಅರ್ಚಕ ಅರವಿಂದ ಭಟ್ ಹಾಗೂ ದೇವಸ್ಥಾನದ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ರಾಜೀವ ಸಾಲಿಯಾನ್, ವಿದ್ಯಾ ದಾನಿ ಬಾಬು ಮೂಲ್ಯ ಕಕ್ಕುಡೆ, ಪ್ರಗತಿ ಬಂಧು ಒಕ್ಕೂಟದ ಅಧ್ಯಕ್ಷ ಅಶೋಕ್ ಕೊಡಕ್ಕಾಲು, ಜ್ಯೋತಿ ಯುವತಿ ಮಂಡಲದ ಆಧ್ಯಕ್ಷ ಸುಶೀಲ ಇವರುಗಳು ಪ್ರತಿಭಾವಂತರನ್ನು ಶಾಲು ಹೊದಿಸಿ, ಸನ್ಮಾನ ಪತ್ರ ಹಾಗೂ ಸ್ಮರಣಿಕೆ ನೀಡಿ ಗೌರವಿಸಿದರು. ಈ ಸಂದರ್ಭದಲ್ಲಿ ಬಾಬು ಮೂಲ್ಯ ಕಕ್ಕುಡೆ ಇವರ ಕುಟುಂಬಸ್ಥರು ಮೂವರು ಬಡ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನವನ್ನು ನೀಡಿ ಗೌರವಿಸಿದರು. ಸುರೇಶ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿ, ಶ್ರೀಧರ್ ಅಂಚನ್ ಸ್ವಾಗತಿಸಿ, ಅಶೋಕ್ ಕೊಡಕ್ಕಾಲು ವಂದಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.