ಕೊಕ್ಕಡ ಸಹಕಾರಿ ಸಂಘದ ಶತಮಾನೋತ್ಸವ ಸಂಭ್ರಮ: 2 ಕೋಟಿ ರೂ ವೆಚ್ಚದಲ್ಲಿ ನಿರ್ಮಿಸಿದ “ಶತ ಸಹಕಾರಿ ಸೌಧ” ಉದ್ಘಾಟನೆ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1


ಬೆಳ್ತಂಗಡಿ: 1919 ಡಿ. 19 ರಂದು ಸ್ಥಾಪನೆಗೊಂಡಿರುವ ಕೊಕ್ಕಡ ಸಹಕಾರಿ ಸಂಘ ಶತಮಾನೋತ್ಸವ ಸಂಭ್ರಮಾಚರಣೆ, ಕಾರ್ಯಕ್ರಮದ ಸವಿನೆನಪಿಗಾಗಿ 2 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಲಾಗಿರುವ 2 ಮಹಡಿಯ ಶತ ಸಹಕಾರಿ ಸೌಧ ಕಟ್ಟಡದ ಉದ್ಘಾಟನೆ ಅ. 20 ರಂದು ನಡೆಯಲಿದೆ ಎಂದು ಸಹಕಾರಿ ಸಂಘದ ಅಧ್ಯಕ್ಷ ನಾರಾಯಣ ಗೌಡ ಮತ್ತು ಶತಮಾನೋತ್ಸವ ಸಮಿತಿ ಕಾರ್ಯಾಧ್ಯಕ್ಷ ಪಿ ಕುಶಾಲಪ್ಪ ಗೌಡ ಅ. 8 ರಂದು ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಮೊಲಹಳ್ಳಿ ಶಿವರಾಯ, ದಂಬೆ ಸುಬ್ರಾಯ ರಾವ್ ಅವರ ಮುತುವರ್ಜಿಯಿಂದ ಕೊಕ್ಕಡದ ಕಿರಾಣಿ ಅಂಗಡಿಯಲ್ಲಿ ಆರಂಭಗೊಂಡ ಈ ಸಂಘ ಇಂದು ಬೃಹದಾಕಾರವಾಗಿ ಬೆಳೆದಿದೆ. 2600 “ಎ” ತರಗತಿ ಸದಸ್ಯರನ್ನು ಹೊಂದಿದೆ. ಕೊಕ್ಕಡ ಪೇಟೆಯಲ್ಲಿ 1.35ಎಕ್ರೆ ಜಾಗ, ಎರಡೂ ಗ್ರಾಮಗಳಲ್ಲಿ ಸ್ವಂತ ಕಟ್ಟಡ ಹೊಂದಿದೆ. ಬ್ಯಾಂಕಿಂಗ್ ಸೇವೆ ಜೊತೆಗೆ ಸಹಕಾರಿಗಳು ಮತ್ತು ಗ್ರಾಹಕರ ಅನುಕೂಲಕ್ಕಾಗಿ ಪಡಿತರ ವಿಲೇವಾರಿ, ಕ್ಯಾಂಪ್ಕೋ ಖರೀದಿ ಕೇಂದ್ರ, ರಸಗೊಬ್ಬರ ಮಾರಾಟ ಕೇಂದ್ರ, ಕೊಂಕಣ್ ಅಡುಗೆ ಅನಿಲ ವಿತರಣೆ, ಸಂಘಕ್ಕೆ ಲಾಭ ಇಲ್ಲದಿದ್ದರೂ ಜನಸಾಮಾನ್ಯರ ಅನುಕೂಲವನ್ನು ಮನಗಂಡು ಪಡಿತರ ವಿತರಣೆ ಇತ್ಯಾಧಿ ಸೇವೆಗಳನ್ನುನೀಡುತ್ತಾ ಬರುತ್ತಿದೆ. ಪ್ರಸ್ತುತ ವರ್ಷ 126.50 ಕೋಟಿ ರೂ.ವ್ಯವಹಾರ ನಡೆಸಿ 59.08 ಲಕ್ಷ ರೂ. ಲಾಭ ಗಳಿಸಿದೆ. ಸಂಘದಲ್ಲಿ ರಾಷ್ಟ್ರೀಕೃತ ಬ್ಯಾಂಕ್ ಮಾದರಿಯಲ್ಲಿ ಸದಸ್ಯರಿಗೆ ವ್ಯವಹಾರದ ಮೆಸೇಜ್ ರವಾನೆ, ಪಹಣಿ ಪತ್ರ ವಿತರಣೆ ಇತ್ಯಾಧಿ ವ್ಯವಸ್ಥೆಗಳನ್ನು ಜಾರಿಗೆ ತಂದು ಪ್ರಸ್ತುತ ವರ್ಷ ಆಡಿಡ್ ವರದಿಯಲ್ಲಿ “ಎ” ಶ್ರೇಣಿ ಪಡೆದುಕೊಂಡಿದೆ ಎಂದರು.
ಕಾರ್ಯಕ್ರಮಗಳು ಈ ರೀತಿ ಇದೆ:
ಉದ್ಘಾಟನೆ ಪ್ರಯುಕ್ತ ಬೆಳಿಗ್ಗೆ ಸ್ಥಳೀಯ ಪ್ರತಿಭೆಗಳ ಸಾಂಸ್ಕೃತಿಕ ವೈವಿಧ್ಯ, 10.30 ಕ್ಕೆ ಸಹಕಾರಿ ಸೌಧ ಉದ್ಘಾಟನೆ, 10.45 ರಿಂದ ಭವ್ಯ ಮೆರವಣಿಗೆ, 11 ಕ್ಕೆ ಸಭಾ ಕಾರ್ಯಕ್ರಮ ಮತ್ತು ಸನ್ಮಾನ, 2ರಿಂದ 4 ಗಂಟೆ ವರೆಗೆ ವಿವಿಧ ವಿಚಾರಗೋಷ್ಠಿಗಳು, 4.00 ರಿಂದ 6 ರ ವರೆಗೆ ಮಹಿಳಾ ಯಕ್ಷಗಾನ ತಂಡದಿಂದ “ಹರಿಭಕ್ತಿ ಶಿಖಧ್ವಜ” ಯಕ್ಷಗಾನ ತಾಳ ಮದ್ದಳೆ, 6. 30 ರಿಂದ ಸಮಾರೋಪ ಸಮಾರಂಭ, ಬಳಿಕ ಬಲೆ ತೆಲಿಪಾಲೆ ಖ್ಯಾತಿಯ ಕಲಾವಿದೆರ್ ಬೆದ್ರ ಇವರಿಂದ ತುಳುಹಾಸ್ಯಮಯ ನಾಟಕ “ಪಾಂಡುನ ಅಲಕ್ಕ ಪೋಂಡು” ಪ್ರಸ್ತುತಿಗೊಳ್ಳಲಿದೆ ಎಂದರು.
ಭಾಗವಹಿಸುವ ಗಣ್ಯಾತಿಗಣ್ಯರು:
ಉದ್ಘಾಟನೆಯಲ್ಲಿ ರಾಜ್ಯದ ಉಪಮುಖ್ಯಮಂತ್ರಿ ಡಾ. ಅಶ್ವತ್ಥನಾರಾಯಣ, ಸಚಿವರಾದ ಬಸವರಾಜ್ ಬೊಮ್ಮಾಯಿ ಮತ್ತು ಕೋಟ ಶ್ರೀನಿವಾಸ ಪೂಜಾರಿ, ಸಂಸದ ನಳಿನ್ ಕುಮಾರ್ ಕಟೀಲು, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಡಾ. ಎಂ.ಎನ್ ರಾಜೇಂದ್ರ ಕುಮಾರ್, ಶಾಸಕರಾದ ಹರೀಶ್ ಪೂಂಜ, ಸಂಜೀವ ಮಠಂದೂರು ಮತ್ತು ಹರೀಶ್ ಕುಮಾರ್, ಜಿ.ಪಂ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು ಸಹಿತ ಅಗ್ರಮಾನ್ಯ ಗಣ್ಯರುಗಳು ಭಾಗಿಯಾಗಲಿದ್ದಾರೆ ಎಂದು ವಿವರ ನೀಡಿದರು.
ಗೋಷ್ಠಿಯಲ್ಲಿ ಸಂಘದ ಉಪಾಧ್ಯಕ್ಷ ಲಕ್ಷ್ಮೀನಾರಾಯಣ ಶಬರಾಯ, ಮುಖ್ಯಕಾರ್ಯನಿರ್ವಹಣಾಧಿಕಾರಿ ಭುವನೇಶ್ವರೀ ಎ, ನಿರ್ದೇಶಕ ಸಿರಿಲ್ ಡಿಸೋಜಾ, ಕಾರ್ಯಕ್ರಮದ ಮಾಧ್ಯಮ ಸಂಯೋಜಕ ವೃಷಾಂಕ್ ಮತ್ತು ಸದಸ್ಯ ಶ್ರೀಧರ ಗೌಡ ಕೆಂಗುಡೇಲು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.