ಶ್ರೀದುರ್ಗಾ ಎಸೋಸಿಯೇಟ್ಸ್ ಶುಭಾರಂಭ

ಮಡಂತ್ಯಾರು: ವಾಸ್ತು ಪ್ಲಾನಿಂಗ್, ೩ಡಿ ಡಿಸೈನ್, ಪ್ಲಾನಿಂಗ್, ಎಸ್ಟಿಮೆಟ್, ವ್ಯಾಲುವೇಶನ್, ಕನ್ಸ್‌ಟ್ರಕ್ಷನ್ ಮತ್ತು ಸೂಪರ್‌ವೈಸಿಂಗ್, ಸ್ಟ್ರಕ್ಚರಲ್ ಡಿಸೈನ್, ಇಂಟೀರಿಯರ್ ಡಿಸೈನ್‌ನ ಸಿವಿಲ್ ಇಂಜಿನಿಯರ್ ಮತ್ತು ಕಾಂಟ್ರಾಕ್ಟರ್ ಕಛೇರಿ ಶ್ರೀ ದುರ್ಗಾ ಎಸೋಸಿಯೇಟ್ ಸಂಸ್ಥೆ ಅ.೭ ರಂದು ಮಡಂತ್ಯಾರು ಕಾಲೇಜು ರಸ್ತೆಯ ಪಂಚಾಯತ್ ಕಟ್ಟಡದಲ್ಲಿ ಶುಭಾರಂಭಗೊಂಡಿತು.
ಬೆಂಗಳೂರು ಹೈಕೋರ್ಟ್ ನ್ಯಾಯವಾದಿ ಸ್ವರ್ಣಲತಾ ವಸಂತ ಹೆಗ್ಡೆ ಉದ್ಘಾಟಿಸಿ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಕಾಂತಪ್ಪ ಗೌಡ ಹಟ್ಟತ್ತೋಡಿ, ಭವಾನಿ ಕೆ ಗೌಡ, ವಸಂತ ಗೌಡ, ನೇತ್ರಾವತಿ, ಊರಿನ ಗಣ್ಯರು ಮತ್ತು ಕುಟುಂಬಸ್ಥರು ಉಪಸ್ಥಿತರಿದ್ದು ಶುಭ ಹಾರೈಸಿದರು. ಪ್ರಶಾಂತ್ ಬಿ.ಕೆ. ಮತ್ತು ಮನಿಷ್ ಆಗಮಿಸಿದ ಅತಿಥಿ ಗಣ್ಯರನ್ನು ಸ್ವಾಗತಿಸಿ ವಂದಿಸಿದರು. ಸರ್ವರ ಸಹಕಾರ ಕೋರಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.