ವರದಕ್ಷಿಣೆಗಾಗಿ ಪೀಡಿಸಿ ಪತ್ನಿ ಮಗುವಿಗೆ ಹಲ್ಲೆ-ಜೀವ ಬೆದರಿಕೆ: ದೂರು

Advt_NewsUnder_1
Advt_NewsUnder_1
Advt_NewsUnder_1

 

ಧರ್ಮಸ್ಥಳ: ಇಲ್ಲಿನ ಪಾಂಗಾಳ ನಿವಾಸಿ ಮೋಹನ ಗೌಡ ಅವರನ್ನು ವರಿಸಿದ್ದ ಮಾಲಾಶ್ರೀ ಅವರಿಗೆ ಅವರ ಪತಿ ಮತ್ತು ಅತ್ತೆ ಮಾವ ಸೇರಿ ವರಕ್ಷಿಣೆ ಕಿರುಕುಳ ನೀಡಿ ಹಲ್ಲೆಗೈದುದೂ ಮಾತ್ರವಲ್ಲದೆ ಕೊಲೆ ಬೆದರಿಕೆಯೊಡ್ಡಿದ ಘಟನೆ ನಡೆದಿದೆ.
ಈ ಸಂಬಂಧ ಪತಿ ಮೋಹನ್ ಗೌಡ, ಅತ್ತೆ ಬೊಮ್ಮಿ, ಮಾವ ಬಾಲಕೃಷ್ಣ ಅವರ ವಿರುದ್ಧ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.


ಮಾಲಾಶ್ರೀ ನೀಡಿದ ದೂರಿನಲ್ಲಿ ಹೇಳುವಂತೆ, ನನಗೆ 2 ವರ್ಷಗಳ ಹಿಂದೆ ಮೋಹನ ಗೌಡ ಅವರ ಜೊತೆ ವಿವಾಹವಾಗಿದ್ದು ಒಂದು ಹೆಣ್ಣು ಮಗು ಇದೆ. ಈ ನಡುವೆ ಪ್ರತಿದಿನ ಪತಿ, ಅತ್ತೆ ಮಾವನ ಜೊತೆ ಸೇರಿ ಮದುವೆ ವೇಳೆ ಕೊಡುತ್ತೇನೆಂದು ಹೇಳಿದ್ದ 15 ಪವನ್ ಚಿನ್ನ ತರುವಂತೆ ಪೀಡಿಸಿ ಆಗಾಗ ಹಲ್ಲೆ ನಡೆಸುತ್ತಿದ್ದರು. ಸೆ. 28 ರಂದು ಇದೇ ರೀತಿ ಗಲಾಟೆ ಎಬ್ಬಿಸಿ ಅತ್ತೆ ಮಾವನ ಜೊತೆ ಸೇರಿ ನನಗೆ ಕೈಯಿಂದ ಮುಖಕ್ಕೆ, ಕಿವಿಗೆ ಹಲ್ಲೆ ನಡೆಸಿ, ತಲೆಯನ್ನು ಗೋಡೆಗೆ ಜಜ್ಜಿ ನೋವುಂಟು ಮಾಡಿರುತ್ತಾರೆ. ತವರು ಮನೆಗೆ ಹೋಗಿದ್ದ ನಾನು ಅ. 4 ರಂದು ನೋವು ಉಲ್ಬಣಿಸಿದ್ದರಿಂದ ಉಜಿರೆ ಖಾಸಗಿ ಅಸತ್ರೆಗೆ ದಾಖಲಾಗಿದ್ದೇನೆ. ನನಗೆ ನ್ಯಾಯಕೊಡಿ ಎಂದು ವಿನಂತಿಸಿಕೊಂಡಿದ್ದಾರೆ. ತನಿಖೆ ನಡೆಸಿದ ಪೊಲೀಸರು ಗಾಯಾಳುವಿನಿಂದ ಹೇಳಿಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.