ಪೂಜಾ ಪ್ರಶಾಂತ್ ಶೆಟ್ಟಿ ಕೋಲ್ಪೆ ಯವರ “ಪ್ರಸವಬಂಧನ” ಕವನ ಸಂಕಲನ ಬಿಡುಗಡೆ

Advt_NewsUnder_1
Advt_NewsUnder_1
Advt_NewsUnder_1

ಬೆಳ್ತಂಗಡಿ: ತಾಯ್ತತನದ ಹಿರಿಮೆ ತುಳುನಾಡ ಸಾಂಪ್ರದಾಯಿಕ ಸೀಮಂತ ಕಾರ್ಯಕ್ರಮದ ಜೊತೆಗೆ ಪೂಜಾ ಪಕ್ಕಳ ಕೋಲ್ಪೆ ಅವರ ಎರಡನೆ ಕವನ ಸಂಕಲನದ ಲೋಕಾರ್ಪಣೆ ಇಂದು(ಅ.೭)ರಂದು ಗುರುವಾಯನಕೆರೆಯ ಬಂಟರ ಭವನದಲ್ಲಿ ನಡೆಯಿತು. ಪುತ್ತೂರು ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕಿ ಶಕುಂತಳಾ ಶೆಟ್ಟಿ ಕೃತಿ ಬಿಡುಗಡೆ ಮಾಡಿದರು.


ಕಾರ್ಯಕ್ರಮದಲ್ಲಿ ವಿಶ್ರಾಂತ ಹಿಂದಿ ಶಿಕ್ಷಕರು ಮತ್ತು ಸಾಹಿತಿಗಳಾದ ರಘುನಾಥ ರೈ ಧರ್ಮಸ್ಥಳ, ಜನಪದ ಮತ್ತು ಸಂಸ್ಕೃತಿ ಚಿಂತಕ ಹಾಗೂ ವಾಣಿ ಪ. ಪೂ ಕಾಲೇಜು ಪ್ರಾಂಶುಪಾಲ ಡಿ. ಯದುಪತಿ ಗೌಡ, ಉಪನ್ಯಾಸಕರು ಹಾಗೂ ಮಾಜಿ ಸೈನಿಕ ಹರೀಶ್ ರೈ ಪಿ. ಉಜಿರೆ ಮತ್ತಿತರರು ಉಪಸ್ಥಿತರಿದ್ದರು.
ಅಕ್ಷಯ್ ಕುಮಾರ್ ಕಾರ್ಯಕ್ರಮ ನಿರೂಪಿಸಿದರು. ಕೃತಿ ರಚನೆಗಾರ್ತಿ ಪೂಜಾ ಮತ್ತು ಅವರ ಪತಿ,ಉಪನ್ಯಾಸಕ ಪ್ರಶಾಂತ್ ಶೆಟ್ಟಿ ಕೋಲ್ಪೆ ಉಪಸ್ಥಿತರಿದ್ದರು. ಕೃತಿ ಬಿಡುಗಡೆ ಬಳಿಕ ಪೂಜಾ ಅವರ ಸೀಮಂತದ ಕಾರ್ಯಗಳು ನಡೆದವು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.