ಕಳಿಯ: ಭೀಕರ ಗುಡುಗು ಸಿಡಿಲು ಅರ್ಬಟಕ್ಕೆ ಹಟ್ಟಿಯಲ್ಲಿದ್ದ ಹಸು ಸಾವು


ಕಳಿಯ: ಇಲ್ಲಿಯ ಪೇರ್ಬೋಡಿ ನಿವಾಸಿ ಮೋಹನ ಗೌಡರ ಮನೆಯ ಪಕ್ಕದಲ್ಲಿ ಅ.5 ರಂದು ಸಿಡಿಲು ಬಡಿದು ಹಟ್ಟಿಯಲ್ಲಿದ್ದ ಹಸು ಸಾವನ್ನಪ್ಪಿದೆ.
ಅಂದು ರಾತ್ರಿ ಸುಮಾರು 7:.30 ಸಮಯದಲ್ಲಿ ಸುರಿಯುವ ಭಾರೀ ಮಳೆ, ಗುಡುಗು ಸಿಡಿಲ ಅರ್ಬಟಕ್ಕೆ ಮನೆಯ ಪಕ್ಕದ ಹಟ್ಟಿಯಲಿದ್ದ ದೊಡ್ಡ ಗಾತ್ರದ ಹಾಲು ಕರೆಯುವ ಹಸು ಸಿಡಿಲಾಘಾತಕ್ಕೆ ಗುರಿಯಾಗಿ ಸಾವು ಸಂಭವಿಸಿತು.


ಜೊತೆಗೆ ಹಟ್ಟಿಯ ಮೇಲ್ಚಾವಣಿ ಹೆಂಚು ಮತ್ತು ವಿದ್ಯುತ್ ಸ್ವಿಚ್ ಬೋರ್ಡ್ ಗಳಿಗೂ ಹಾನಿಯಾಗಿದೆ.
ದಿನವೊಂದಕ್ಕೆ 20 ಲೀಟರಿಗೂ ಹೆಚ್ಚು ಹಾಲು ನೀಡುತ್ತಿದ್ದ 4 ವರ್ಷದ 2ನೇ ಕರುವಿನ ಹಸು ಇದಾಗಿತ್ತು. ಸುಮಾರು 50 ಸಾವಿರಕ್ಕೂ ಹೆಚ್ಚು ಬೆಲೆ ಬಾಳುವ ಮತ್ತು ೫ ತಿಂಗಳ ಗಬ್ಬ ಕೂಡ ಹೊತ್ತುಕೊಂಡಿತ್ತು. ಇದರಿಂದಾಗಿ ಹೈನುಗಾರಿಕೆ ಮತ್ತು ಕೃಷಿ ಯಲ್ಲಿ ತೊಡಗಿಸಿಕೊಂಡಿದ್ದ ಅದರ ವಾರೀಸುದಾರರಿಗೆ ನಷ್ಟ ಉಂಟಾಗಿದೆ. ವಿಷಯ ತಿಳಿದು ಗೇರುಕಟ್ಟೆ ಹಾಲು ಉತ್ಪಾದಕರ ಸಹಕಾರ ಸಂಘದ ಸದಸ್ಯರು ಮನೆಗೆ ಭೇಟಿ ನೀಡಿರುತ್ತಾರೆ. ಬೆಳ್ತಂಗಡಿ ಪಶು ವೈದ್ಯಾಧಿಕಾರಿ ಡಾ.ರವಿ ಕುಮಾರ್ ಸ್ಥಳಕ್ಕಾಗಮಿಸಿ ಮರಣೋತ್ತರ ಪರೀಕ್ಷೆ ನಡೆಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.