ಸೈಂಟ್‌ಸಾವಿಯೋ: ಅತ್ಯುತ್ತಮ ಶಿಕ್ಷಕಿ ಪ್ರಶಸ್ತಿ

Advt_NewsUnder_1
Advt_NewsUnder_1
Advt_NewsUnder_1

ಬೆಳ್ತಂಗಡಿ : ಸೆ.27 ರಂದು ಸೈಂಟ್ ಸಾವಿಯೋ ಮುಖ್ಯ ಶಿಕ್ಷಕಿಯಾಗಿರುವ ಡಾ| ಸಿ. ಡೈಸಿತೋಮಸ್ ಅವರಿಗೆ ಬೆಂಗಳೂರಿನ ಅಂಬೇಡ್ಕರ್ ಭವನದಲ್ಲಿ “ದಿ ನ್ಯಾಷನಲ್ ಪ್ರೆಸ್ ಕೌನ್ಸಿಲ್ ಆಫ್ ಇಂಡಿಯಾ” ಎಂಬ “ನ್ಯಾಷನಲ್ ಟೀಚರ್‍ಸ್ ಅವಾರ್ಡ್ಸ್-2019” ಪ್ರಶಸ್ತಿಯನ್ನು ನೀಡಿ ಗೌರವಿಸಿದ್ದಾರೆ.
ಡಾ| ಡೈಸಿ ತೋಮಸ್ ಅವರು 33 ವರ್ಷ ಶಿಕ್ಷಕಿ ವೃತ್ತಿಯಲ್ಲಿ ತನ್ನನ್ನು ತಾನು ತೊಡಗಿಸಿಕೊಂಡು ನಿಷ್ಟೆಯಿಂದ, ಪ್ರಾಮಾಣಿಕವಾಗಿ, ಎಲ್ಲಾ ಜವಬ್ದಾರಿಯನ್ನು ಪೂರ್ವ ಯೋಜನೆಯ ಮೂಲಕ ಬೇರೆ ಬೇರೆ ವಿದ್ಯಾಸಂಸ್ಥೆಯಲ್ಲಿ ಸೇವೆಯನ್ನು ಮಾಡಿರುತ್ತಾರೆ.
ಕ್ರೆಸ್ಟ್‌ಸ್ಕೂಲ್ ಬೆಂಗಳೂರು, ಸೈಂಟ್‌ಜೋಸೆಪ್ ಪುಪ್ಪಗಿರಿ ಕೇರಳ, ಕ್ಯಾಲಿಕಟ್ ಹಾಗೂ ಸರಸ್ವತಿ ಶಾಲೆ ಮುಂಡಾಜೆ ಹೀಗೆ ಹಲವಾರು ಸಂಸ್ಥೆಯಲ್ಲಿ ಕೆಲಸವನ್ನು ಮಾಡುತ್ತಾ ಡಾಕ್ಟರೇಟ್ ಪದವಿಯನ್ನು ಪಡೆದು ಪ್ರಸ್ತುತ ಸೈಂಟ್ ಸಾವಿಯೋ ಆಂಗ್ಲಮಾಧ್ಯಮ ಶಾಲೆ ಬೆಂದ್ರಾಳ ಇಲ್ಲಿ ಕಳೆದ 4 ವರ್ಷಗಳಿಂದ ಸೇವೆಯನ್ನು ಮಾಡುತ್ತಾ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ 100% ಫಲಿತಾಂಶ ತರುವಲ್ಲಿ ಇವರ ಪಾತ್ರ ಪ್ರಮುಖವಾದದ್ದು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.