ಬೆಳ್ತಂಗಡಿ: ರಾಜ್ಯ ಸರ್ಕಾರದಿಂದ ಮೊದಲ ಹಂತದ ಪರಿಹಾರ ಬಿಡುಗಡೆ – ಜಿಲ್ಲಾಧಿಕಾರಿ

ಬೆಳ್ತಂಗಡಿ : ಜಿಲ್ಲೆಯಲ್ಲಿ ಪ್ರವಾಹದಿಂದ ಆಗಿರುವ ಹಾನಿಯ ಬಗೆಗೆ ಸರಕಾರಕ್ಕೆ ವರದಿ ಸಲ್ಲಿಸಲಾಗಿದ್ದು ಮೊದಲ ಹಂತದ ಪರಿಹಾರ ಬಿಡುಗಡೆಯಾಗಿದೆ. ಬರುವ ಅನುದಾನಗಳಿಗೆ ಅನುಸಾರವಾಗಿ ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗುವುದು ಎಂದು ದ.ಕ ಜಿಲ್ಲಾಧಿಕಾರಿ ಸಿಂಧೂ ರೂಪೇಶ್ ತಿಳಿಸಿದರು.

ಅ.೦೪ ರಂದು ಬೆಳ್ತಂಗಡಿ ತಾಲೂಕಿನಲ್ಲಿ ಪ್ರವಾಹದಿಂದಾಗಿ ಅತ್ಯಂತ ಹೆಚ್ಚು ಹಾನಿಗೀಡಾದ ಚಾರ್ಮಾಡಿ ಹಾಗೂ ದಿಡುಪೆ ಪರಿಸಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಸಂತ್ರಸ್ಥರ ಸಮಸ್ಯೆಗಳನ್ನು ಆಲಿಸಿದ ಬಳಿ ಮಾಧ್ಯಮದವರೊಂದಿಗೆ ಮಾತನಾಡಿದರು.

ತಾಲೂಕಿನಲ್ಲಿ ಹಾನಿಗೆ ಒಳಗಾಗಿರುವ ಮನೆಗಳನ್ನು ಗುರುತಿಸಲಾಗಿದ್ದು ಮನೆ ನಿರ್ಮಾಣಕ್ಕೆ ಮೊದಲ ಹಂತದ ಅನುದಾನವನ್ನು ಬಿಡುಗಡೆ ಮಾಡಲಾಗಿದೆ. ಮನೆ ಮಂಜೂರಾದವರು ಇನ್ನು ಮನೆ ನಿರ್ಮಾಣದ ಕಾರ್‍ಯವನ್ನುಆರಂಭಿಸಬಹುದಾಗಿದೆ. ಮುಂದೆ ಇವರಿಗೆ ರಾಜೀವಗಾಂಧಿ ವಸತಿ ನಿಗಮದಿಂದ ಹಂತ ಹಂತವಾಗಿ ಅನುದಾನ ಮಂಜೂರಾಗಲಿದೆ ಎಂದು ತಿಳಿಸಿದರು. ಮನೆಗೆ ನಿವೇಶನವಿಲ್ಲವರ ಪಟ್ಟಿಯನ್ನು ತಯಾರಿಸಲಾಗಿದ್ದು ಅಂತವರಿಗೆ ನಿವೇಶನ ನೀಡುವ ಕಾರ್‍ಯವನ್ನುಗ್ರಾಮ ಪಂಚಾಯತುಗಳು ನಡೆಸುತ್ತಿವೆ ಎಂದರು.

ಕೃಷಿ ನಾಶದ ಬಗೆಗೆ ವರದಿಯನ್ನು ತಯಾರಿಸಲಾಗಿದ್ದು ಸರಕಾರಕ್ಕೆ ಸಲ್ಲಿಸಲಾಗಿದೆ. ಅದನ್ನು ಮೂರು ರೀತಿಯಲ್ಲಿ ಗುರುತಿಸಲಾಗಿದೆ ಕೃಷಿಭೂಮಿಗೆ ಮರಳು ತುಂಬಿಕೊಂಡವರಿಗೆ, ಕೃಷಿ ನಾಶವಾಗಿರುವುದನ್ನುಹಾಗೂ ನದಿಗಳು ಪಾತ್ರ ಬದಲಿಸಿರುವುದರಿಂದ ಆಗಿರುವ ನಾಶಗಳನ್ನು ಅಂದಾಜಿಸಲಾಗಿದೆ. ಕೃಷಿ ನಾಶಕ್ಕೆ ಎನ್.ಡಿ.ಆರ್.ಎಫ್‌ ಮಾದರಿಯಂತೆ ಪರಿಹಾರವನ್ನು ವಿತರಿಸಲಾಗುವುದು ಬೆಳ್ತಂಗಡಿ ತಾಲೂಕಿನಿಂದ ಸುಮಾರು 1200 ಅರ್ಜಿಗಳು ಬಂದಿದೆ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.

ಮರಳು ನೀತಿಯಂತೆಯೇ ಕ್ರಮ: ನದಿಗಳು ಮರಳಿನಿಂದ ತುಂಬಿದ್ದರೂ ಮರಳು ತೆಗೆಯಲುಇರುವ ಕಾನೂನುಗಳನ್ನು ಅನುಸರಿಸಿಕೊಂಡೇ ಮುಂದುವರಿಯಬೇಕಾಗಿದೆ.

ಜಿಲ್ಲೆಯಲ್ಲಿರುವ ಮರಳು ಶೇಖರಣೆಗಳನ್ನು 22 ಕಡೆಗಳಲ್ಲಿ ಗುರುತಿಸಲಾಗಿದ್ದು ಅದರಲ್ಲಿ 12ರ ಟೆಂಡರ್‌ ಕರೆಯುವ ಕಾರ್‍ಯ ನಡೆಯುತ್ತಿದೆ, ಇದೀಗ ಪ್ರವಾಹದಿಂದಾಗಿ ಮರಳು ದಿನ್ನೆಗಳು ಸೃಷ್ಟಿಯಾಗಿದ್ದರೆ ಅದನ್ನು ಪರಿಶೀಲಿಸುವ ಕಾರ್‍ಯವನ್ನು ಮಾಡಲಾಗುತ್ತಿದೆ ಇದೇ ಪ್ರಕ್ರಿಯೆಗಳ ಮೂಲಕವೇ ಅನ್ನೂ ತೆರವುಗೊಳಿಸಬೇಕಾಗಿದೆ ಎಂದರು.

ಕೃಷಿಭೂಮಿಗಳಲ್ಲಿ ತುಂಬಿರುವಮರಳನ್ನು ನೇರವಾಗಿತೆಗೆದು ಸಾಗಾಟ ಮಾಡುವ ಹಾಗಿಲ್ಲಎಂದಅವರುಅದನ್ನು ಸ್ಥಳೀಯವಾಗಿ ಉಪಯೋಗಿಸುವನಿಟ್ಟಿನಲ್ಲಿಕ್ರಮ ಕೈಗೊಳ್ಳಲಾಗುತ್ತಿದೆ. ಗ್ರಾಮಪಂಚಾಯತುಗಳ ಮಟ್ಟದಲ್ಲಿಈ ಮರಳನ್ನು ತೆಗೆಯಲು ಮಾರ್ಗಸೂಚಿಗಳನ್ನು ತಯಾರಿಸಲಾಗುವುದುಎಂದರು.
ಜಿಲ್ಲಾಧಿಕಾರಿಯವರು ದಿಡುಪೆಯ ಕುಕ್ಕಾವು ಸೇತುವೆ ಹಾಗೂ ಗಣೇಶ ನಗರಕ್ಕೆ ಭೇಟಿ ನೀಡಿ ಜನರ ಸಮಸ್ಯೆಗಳನ್ನು ಆಲಿಸಿ ಅಗತ್ಯ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು. ಚಾರ್ಮಾಡಿಯ ಹೊಸಮಠ ಹಾಗೂ ಅನಾರು ಪರಿಸರಲ್ಲಿನ ಅನಾಹುತಗಳನ್ನು ವೀಕ್ಷಿಸಿದರು. ಅವರೊಂದಿಗೆ ಜಿ.ಪಂ ಕಾರ್‍ಯನಿರ್ವಹಣಾಧಿಕಾರಿ ಡಾ. ಸೆಲ್ವಮಣಿ, ತಾ .ಪಂ ಕಾರ್ಯನಿರ್ವಣಾಧಿಕಾರಿ ಕೆ.ಇ ಜಯರಾಮ್ , ಸಹಾಯಕ ಲೆಕ್ಕ ಅಧೀಕ್ಷಕ ಗಣೇಶ್ ಪೂಜಾರಿ,   ತಹಶೀಲ್ದಾರ್ ಗಣಪತಿ ಶಾಸ್ತ್ರಿ, ಕಂದಾಯ ನಿರೀಕ್ಷಕ ರವಿ ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳು. ಗ್ರಾ. ಪಂ ಅಬಿವೃದ್ದಿ ಅಧಿಕಾರಿಗಳು ಇದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.