ಬದಿನಡೆ,ಮಂಜಲಡ್ಕ ದೈವಗಳ ಮೂಲಸ್ಥಾನದಲ್ಲಿ ಶ್ರಮದಾನ ಮತ್ತು ವಿಜ್ಞಾಪನ ಪತ್ರ ಬಿಡುಗಡೆ

 

ಕಳಿಯ:ಇಲ್ಲಿಯ ಕಳಿಯ ಗ್ರಾಮದ ಬದಿನಡೆ,ಮಂಜಲಡ್ಕ ದೈವಗಳ ಸನ್ನಿಧಿಯಲ್ಲಿ ಗ್ರಾಮಸ್ಥರಿಂದ ಶ್ರಮದಾನ ಹಾಗೂ ವಿಜ್ಞಾಪಣ ಪತ್ರ ಬಿಡುಗಡೆ ಸೆ.29 ರಂದು ನಡೆಯಿತು.

ಗೌರವಾಧ್ಯಕ್ಷರಾದ ವೇ.ಮೂ. ರಾಘವೇಂದ್ರ ಬಾಂಗಿಣ್ಣಾಅವರು ವಿಜ್ಞಾಪನೆ ಕರಪತ್ರ ಬಿಡುಗಡೆ ಮಾಡಿ ಮಾತನಾಡುತ್ತಾ ದೈವಗಳ ಗುಡಿಗೋಪುರ ನಿರ್ಮಾಣ ಕಾರ್ಯಕ್ಕೆ ಅಂದಾಜು 50 ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗಲಿದೆ.

ಭಕ್ತಾಧಿಗಳು ಧನಸಹಾಯ ಮತ್ತು ವಸ್ತು ರೂಪದಲ್ಲಿ ಸಹಾಯ ಮಾಡುವಂತೆ ವಿನಂತಿಸಿದರು. ಉಳ್ಳಾಕ್ಕುಲು ಉಳ್ಳಾಳ್ತಿ, ಬಂಗಾಡಿ ದೈವ,ರಕ್ತೇಶ್ವರಿ,ಮಹಿಷಂತಾಯ,ಪಂಜುರ್ಲಿ ಪರಿವಾರ ದೈವಗಳು ಹಾಗೂ ಮಂಜಲಡ್ಕ ದೈವ ಕೊಡಮಣಿಂತಾಯ,ವ್ಯಾಘ್ರ ಚಾಮುಂಡಿ ಮತ್ತು ಕಲ್ಕುಡ ದೈವಗಳಿಗೆ ನೂತನ ಗುಡಿ ಗೋಪುರಗಳನ್ನು ನಿರ್ಮಿಸುವ ಕಾರ್ಯಕ್ರಮ ಭರದಿಂದ ನಡೆಯುತ್ತಿದೆ. ಈ ಸಂದರ್ಭದಲ್ಲಿ ಅಧ್ಯಕ್ಷ ಸುವರ್ಣೆಂದ್ರ ಎಸ್.ಜೈನ್, ಕಾರ್ಯಾಧ್ಯಕ್ಷ ಸುರೇಂದ್ರ ಕುಮಾರ್,ಉಪಾಧ್ಯಕ್ಷರಾದ ತುಕಾರಾಮ ಪೂಜಾರಿ, ಕಮಲಾಕ್ಷ ಪೂಜಾರಿ, ಪುಂಡಲೀಕ ಶೆಟ್ಟಿ, ಪದ್ಮನಾಭ ಶೆಟ್ಟಿ, ಶೇಖರ ನಾಯ್ಕ, ಪ್ರಧಾನ ಕಾರ್ಯದರ್ಶಿ ಸುರೇಂದ್ರ ಕುಮಾರ್, ಕಾರ್ಯದರ್ಶಿ ಸುರೇಶ್ ಕುಮಾರ್ ಅರ್.ಎನ್. ಜೊತೆ ಕಾರ್ಯದರ್ಶಿ ಯಶೋಧರ ಶೆಟ್ಟಿ.ಕೆ,ಸಂಘಟನಾ ಕಾರ್ಯದರ್ಶಿಗಳಾದ ರಾಘವ ಹೆಚ್.ರಾಜೇಶ್ ಪಿ.ಸಮಿತಿ ಪದಾಧಿಕಾರಿಗಳು ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.