ನಾಳ ರಾಷ್ಟ್ರೀಯ ಸೇವಾ ಯೋಜನೆ ವಾರ್ಷಿಕ ವಿಶೇಷ ಶಿಬಿರ

ನಾಳ: ಅ 3, ಇಲ್ಲಿಯ ಸರಕಾರಿ ಉನ್ನತಿಕರಿಸಿದ ಹಿರಿಯ ಪ್ರಾಥಮಿಕ ನಾಳ ಹಾಗೂ ಪದವಿಪೂರ್ವ ಶಿಕ್ಷಣ ಇಲಾಖೆ ಬೆಂಗಳೂರು, ವಾಣಿ ಪದವಿ ಪೂರ್ವ ಕಾಲೇಜು, ಬೆಳ್ತಂಗಡಿ ಇದರ ಸಂಯುಕ್ತ ಆಶ್ರಯದಲ್ಲಿ ರಾಷ್ಟ್ರೀಯ ಸೇವಾ ಯೋಜನೆ ವಾರ್ಷಿಕ ವಿಶೇಷ ಶಿಬಿರ 2019 ಕಾರ್ಯಕ್ರಮದ ಉದ್ಘಾಟನೆಯನ್ನು ಜಿಲ್ಲಾ ಪಂಚಾಯತ್  ಸದಸ್ಯೆ ಮಮತ ಎಮ್.ಶೆಟ್ಟಿ ದೀಪ ಬೆಳಗಿಸುವ ಮೂಲಕ ಚಾಲನೆ ನೀಡಿ ವಿದ್ಯಾರ್ಥಿ ಜೀವನದಲ್ಲಿ ಉತ್ತಮ ಗುಣಮಟ್ಟದ ವಿಧ್ಯಾಭ್ಯಾಸ ಜೊತೆಗೆ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡು ಮುಂದಿನ ಪೀಳಿಗೆಗೆ ಮಾದರಿಯಾಗಬೇಕು ಎಂದು ಶುಭ ಹಾರೈಸಿದರು. ವಾಣಿ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಜಿ.ಸೋಮೇ ಗೌಡ ಸಭಾ ಅಧ್ಯಕ್ಷತೆ ವಹಿಸಿದ್ದರು.ನಾಳ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ವಸಂತ ಮಜಲು,ಕಳಿಯ ಪಂಚಾಯತ್  ಅಧ್ಯಕ್ಷ ಶರತ್ ಕುಮಾರ್, ಪಂಚಾಯತ್  ಸದಸ್ಯ ಹಾಗೂ ಶಿಬಿರ ಅನುಷ್ಠಾನ ಸಮಿತಿ ಅಧ್ಯಕ್ಷ ಸುಧಾಕರ ಮಜಲು, ನಾಳ ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷ ಮೋಹನ ಗೌಡ,ಶಾಲಾ ಮುಖ್ಯೋಪಾಧ್ಯಾಯ ಪಿಲಿಪ್ ರೊನಾಲ್ಡ್ ಡಿಮೆಲ್ಲೊ,ವಾಣಿ ಪ.ಪೂ.ಕಾಲೇಜು ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷ ದಿನೇಶ ಗೌಡ ಕಲಾಯಿತೋಟ್ಟು, ಶಿಬಿರ ಕಾರ್ಯದರ್ಶಿ ವಿಜಯ ಕುಮಾರ್ ಕಲಾಯಿತೋಟ್ಟು, ವಾಣಿ ಶಾಲಾ ಮುಖ್ಯೋಪಾಧ್ಯಾಯ ಲಕ್ಷ್ಮಿ ನಾರಾಯಣ, ಶಿಬಿರಾಧಿಕಾರಿ ನಂದ ಕುಮಾರ್, ಘಟಕ ನಾಯಕರಾದ ನಿತೇಶ್,ಕು.ಪೂಜಾ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಗೇರುಕಟ್ಟೆ ಸಂಯುಕ್ತ ಪ.ಪೂ.ಕಾಲೇಜು ಉಪನ್ಯಾಸ ಕೆ ಕೇಶವ ಬಂಗೇರ, ಪ್ರಗತಿಪರ ಕೃಷಿಕ ಜನಾರ್ಧನ ಗೌಡ ನಿರ್ಬುಂಡ,ರಾಜೇಶ್ ಪರ್ಬುಂಡ,ಅಶೋಕ ಆಚಾರ್ಯ ಗಂಪದ ಕೋಡಿ,ಕೇಶವ ಪೂಜಾರಿ ನಾಳ, ಮಮತ ಆಳ್ವ ನಾಳ,ಬಾಲಕೃಷ್ಣ ರೈ. ನಾಳ,ಸೋಮಪ್ಪ ಗೌಡ ಕುಬಯ,ಗಣೇಶ ಗೌಡ,ವಾಣಿ ಕಾಲೇಜು ಉಪನ್ಯಾಸಕರು, ಕಾಲೇಜು ವಿಧ್ಯಾರ್ಥಿಗಳು,ನಾಳ ಶಾಲಾ ಅಭಿವೃದ್ಧಿ ಸಮಿತಿ ಸದಸ್ಯರು, ನಾಳ ಶಾಲಾ ಸಹ ಶಿಕ್ಷಕರು ವಿಧ್ಯಾಭಿಮಾನಿಗಳು ಉಪಸ್ಥಿತರಿದ್ದರು.ಶಿಬಿರಾರ್ಥಿಗಳು ಪ್ರಾರ್ಥನೆ ನೆರವೆರಿಸಿ .ವಾಣಿ ಕಾಲೇಜು ಪ್ರಾಂಶುಪಾಲ ಡಿ.ಯದುಪತಿ ಗೌಡ ಪ್ರಸ್ತಾವನೆ ಮಾಡಿ ಸ್ವಾಗತಿಸಿದರು.ಕಂಪ್ಯೂಟರ್ ಶಿಕ್ಷಕಿ ಕು.ಕಾಮಾಕ್ಷಿ ಕಾರ್ಯಕ್ರಮ ನಿರೂಪಿಸಿದರು. ಉಪಪ್ರಾಂಶುಪಾಲರಾದ ವಿಷ್ಣಪ್ರಕಾಶ್ ಧನ್ಯವಾದವಿತ್ತರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.