HomePage_Banner_
HomePage_Banner_

ಪ್ರೌಢ ಶಾಲೆಗಳ ವತಿಯಿಂದ ಸಂತ್ರಸ್ತರಿಗೆ ಮನೆ ನಿರ್ಮಾಣಕ್ಕೆ 5 ಲಕ್ಷ ದೇಣಿಗೆ

ಬೆಳ್ತಂಗಡಿ: ತಾಲೂಕಿನ ಸರಕಾರಿ ಮತ್ತು ಅನುದಾನಿತ ಪ್ರೌಢ ಶಾಲೆಗಳ ವತಿಯಿಂದ ಈ ಬಾರಿಯ ನೆರೆ ಪೀಡಿತರಾಗಿ ಸಂಪೂರ್ಣ ಮನೆ ಕಳೆದುಕೊಂಡಿರುವ 1 ಕುಟುಂಬಕ್ಕೆ ಸಂಪೂರ್ಣ ಮನೆ ನಿರ್ಮಾಣಕ್ಕಾಗಿ 5 ಲಕ್ಷ ರೂ. ಗಳ ಸಾಂತ್ವನ ನೆರವನ್ನು ಅದರ ಪದಾಧಿಕಾರಿಗಳು ಶಾಸಕ ಹರೀಶ್ ಪೂಂಜರಿಗೆ ಅ. 2 ರಂದು ಹಸ್ತಾಂತರಿಸಿದರು.
ಮಹಾತ್ಮಾ ಗಾಂಧೀಜಿಯವರ 150 ನೇ ಜನ್ಮವರ್ಷಾಚರಣೆ ಪ್ರಯುಕ್ತವಾಗಿ ಕೊಡುಗೆ ನೀಡಲು ಸಂಕಲ್ಪಿಸಿದ ಸಂಘಟಕರು ಬೆಳ್ತಂಗಡಿ ಸರಕಾರಿ ನಿರೀಕ್ಷಣಾ ಮಂದಿರದಲ್ಲಿ ಚೆಕ್ ಹಸ್ತಾಂತರಿಸಿದರು. ಪ್ರೌಢ ಶಾಲಾ ಸಹಶಿಕ್ಷಕರ ಸಂಘದ ಅಧ್ಯಕ್ಷ ರಮೇಶ್ ಮಯ್ಯ, ಕಾರ್ಯದರ್ಶಿ ಮುಹಮ್ಮದ್ ರಿಯಾಝ್, ಜೊತೆ ಕಾರ್ಯದರ್ಶಿ ಶಿವಪುತ್ರ, ಸಂ. ಕಾರ್ಯದರ್ಶಿ ಶಿವಾನಂದ ಯಾತನೂರು, ತಾ| ಅಕ್ಷರದಾಸೋಹ ಸಹಾಯಕ ನಿರ್ದೇಶಕಿ ತಾರಾಕೇಸರಿ, ಪ್ರೌಢ ಶಾಲಾ ಮುಖ್ಯ ಶಿಕ್ಷಕರ ಸಂಘದ ಕಾರ್ಯದರ್ಶಿ ರಾಮಕೃಷ್ಣ ಭಟ್ ಚೊಕ್ಕಾಡಿ ಇವರು ಭಾಗಿಯಾಗಿದ್ದರು.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.