ಪಾರಸ್ ಪೃಥ್ವಿ ಜ್ಯುವೆಲ್ಸ್‌ನಿಂದ ಸ್ವಚ್ಚತಾ ಕಾರ್ಯಕ್ರಮ

ಬೆಳ್ತಂಗಡಿ : ಪಾರಸ್ ಪೃಥ್ವಿ ಜ್ಯುವೆಲ್ಸ್ ಬೆಳ್ತಂಗಡಿ ವತಿಯಿಂದ ಅ. 2 ರ ಗಾಂಧಿಜಯಂತಿ ಅಂಗವಾಗಿ ಬೆಳ್ತಂಗಡಿ ಮತ್ತು ಉಜಿರೆಯಲ್ಲಿ ಸ್ವಚ್ಚತಾ ಕಾರ್ಯ ನಡೆಸುವ ಮೂಲಕ ಮಾದರಿಯಾದರು.
ಕಾರ್ಯಕ್ರಮದಲ್ಲಿ ಉಜಿರೆ ಎಸ್‌ಡಿಎಂ ಪ. ಪೂ ಕಾಲೇಜು ಪ್ರಾಂಶುಪಾಲ ದಿನೇಶ್ ಚೌಟ, ಉಪಪ್ರಾಂಶುಪಾಲ ಪ್ರಮೋದ್ ಕುಮಾರ್,ಸ್ವಚ್ಚತಾ ಸೇನಾನಿ ಘಟಕದ ಸಂಚಾಲಕಿ ದಿವ್ಯಾ ಕುಮಾರಿ, ಉಪಸಂಚಾಲಕಿ ಪ್ರಭಾವತಿ, ಪ್ರಾಧ್ಯಾಪಕ ಕೇಶವ ಪೈ, ಉಜಿರೆ ಶ್ರೀ ಜನಾರ್ದನ ದೇವಸ್ಥಾನದ ಮೊಕ್ತೇಸರ ಶರತ್‌ಕೃಷ್ಣ ಪಡುವೆಟ್ನಾಯ, ಲಯನ್ಸ್ ಕ್ಲಬ್ ಸ್ಥಾಪಕ ಸದಸ್ಯ ಪಿ.ಆರ್ ನಾಯ್ಕ್ ಬೆಳ್ತಂಗಡಿ ಇವರುಗಳು ಕೈಜೋಡಿಸಿ ಯಶಸ್ವಿಗೊಳಿಸಿದರು.
ಪ್ರಮುಖವಾಗಿ ಸ್ವಚ್ಚತಾ ಕಾರ್ಯದಲ್ಲಿ ಉಜಿರೆ ಎಸ್ ಡಿ ಎಂ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳು ಮುತುವರ್ಜಿ ವಹಿಸಿ ಭಾಗಿಯಾಗಿದ್ದರು. ಪೃಥ್ವಿ ಜ್ಯುವೆಲ್ಸ್ ಸಿಬ್ಬಂದಿಗಳು, ಸಂಘ ಸಂಸ್ಥೆಗಳ ಪ್ರತನಿಧಿಗಳು ಕೈ ಜೋಡಿಸಿ ಗಾಂಧಿ ಜಯಂತಿ ದಿನದ ನಿಜವಾದ ಸಂದೇಶ ಸಾರಿದರು.
ಕಾರ್ಯಕ್ರಮದಲ್ಲಿ ಪಾರಸ್ ಪೃಥ್ವಿ ಜ್ಯುವೆಲ್ಸ್ ಬೆಳ್ತಂಗಡಿ ಶಾಖೆ ವ್ಯವಸ್ಥಾಪಕ ಉಮಾನಾಥ್ ಪ್ರಭು, ವಿವಿಧ ವಿಭಾಗಳ ಸಿಬ್ಬಂದಿಗಳಾದ ದಿನೇಶ್ ಆಚಾರ್ಯ, ಕೃಷ್ಣ, ಜಯಂತ, ಸತೀಶ್, ಪ್ರಸಾದ್, ಗುರುಪ್ರಸಾದ್, ಸುನೀತಾ, ಪ್ರಮೀಳಾ, ಪುನೀತಾ, ಶಿಲ್ಪಾ, ರಕ್ಷಾ ಇವರುಗಳು ಸಹಕಾರ ನೀಡಿದರು.ಮಾರ್ಕೆಟಿಂಗ್ ಎಕ್ಸ್‌ಗ್ಯೂಟಿವ್ ಮುಹಮ್ಮದ್ ನಿಸಾರ್ ಗುರುವಾಯನಕೆರೆ ಕಾರ್ಯಕ್ರಮ ಸಂಯೋಜಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.