ಕೊಕ್ಕಡ ಎಂಡೋ ಸಂತ್ರಸ್ತರ ಪೋಷಕರ ಸಭೆ

Advt_NewsUnder_1
Advt_NewsUnder_1
Advt_NewsUnder_1

 

ಕೊಕ್ಕಡ: ಇಲ್ಲಿಯ ಕೊಕ್ಕಡ ಕೃಷಿ ಪತ್ತಿನ ಸಹಕಾರಿ ಸಂಘದ ಕಟ್ಟಡದಲ್ಲಿ ಎಂಡೋ ಸಂತ್ರಸ್ತರ ಪೋಷಕರ ಸಭೆ ಅ.2 ರಂದು ನಡೆಯಿತು.


ಕೊಕ್ಕಡ ಎಂಡೋ ಸಂತ್ರಸ್ತರ ಪೋಷಕರು ಎಂಡೋ ಪಾಲನಾ ಕೇಂದ್ರವನ್ನು ಸರಕಾರ ನಡೆಸಬೇಕೆಂದು ಶಾಸಕರಿಗೆ ಮನವಿ ಸಲ್ಲಿಸಿದರು. ಗ್ರಾಮಕರಣಿಕರು ಸಂತ್ರಸ್ಥರ ಮನೆಮನೆಗೆ ಬಂದು ಸಿಯೋನ್ ಸಂಸ್ಥೆಯ ಪರವಾಗಿ ಲಾಬಿ ನಡೆಸುತ್ತಿದ್ದಾರೆ. ಎಂದು ಶಾಸಕರ ಎದುರು ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕರು ಶನಿವಾರದೊಳಗೆ ಕೇಂದ್ರವನ್ನು ಸರಕಾರವೇ ನಿರ್ವಹಣೆ ಮಾಡುವಂತೆ ವ್ಯವಸ್ಥೆ ಮಾಡುವುದಾಗಿ ಭರವಸೆ ನೀಡಿದರು. ಶನಿವಾರದೊಳಗೆ ವ್ಯವಸ್ಥೆ ಆಗದಿದ್ದಲ್ಲಿ ಬುಧವಾರ ಪಾಲನಾ ಕೇಂದ್ರಕ್ಕೆ ಬೀಗ ಹಾಕುತ್ತೇವೆ. ನಾವು ಜೈಲಿಗೆ ಹೋಗಲು ಸಿದ್ಧ ಎಂದು ಈ ಸಂದರ್ಭ ಪೋಷಕರು ಶಾಸಕರಿಗೆ ತಿಳಿಸಿದರು.
ವೇದಿಕೆಯಲ್ಲಿ ಹೋರಾಟ ಸಮಿತಿಯ ಅಧ್ಯಕ್ಷ ಶ್ರೀಧರ್ ಗೌಡ ಕೆಂಗುಡೇಲು, ಕುಶಾಲಪ್ಪ ಗೌಡ ಪೂವಾಜೆ, ನಾರಾಯಣ ಗೌಡ, ಅಲ್ಬರ್ಟ್ ಮೆನೆಜಸ್, ತುಕ್ರಪ್ಪ ಶೆಟ್ಟಿ ನೂಜೆ, ರೇವತಿ ತಾಮ್ಹನ್ಕರ್ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.