HomePage_Banner_
HomePage_Banner_
HomePage_Banner_

ಸೂರ್ಯನ ಸುತ್ತ ಉಂಗುರಾಕೃತಿ….!

Advt_NewsUnder_1

ಬೆಳ್ತಂಗಡಿ: ಅ.2ರಂದು ಮಧ್ಯಾಹ್ನ ಆಕಾಶದಲ್ಲಿ ಸೂರ್ಯನ ಸುತ್ತ ಉಂಗುರದಂಥ ಆಕೃತಿಯೊಂದು ಮೂಡಿ ವಿಸ್ಮಯ ಮೂಡಿಸಿತು.


ಈ ಅಪರೂಪದ ವಿದ್ಯಮಾನವನ್ನು ನೋಡಿದ ಜನರು ಪುಳಕಿತ ಭಾವ ಅನುಭವಿಸಿದರು. ಮಧ್ಯಾಹ್ನ 11 ಗಂಟೆಯ ಸುಮಾರಿಗೆ ಆರಂಭವಾದ ವಿದ್ಯಮಾನ ಸುಮಾರು 20 ನಿಮಿಷಗಳ ಕಾಲ ಜನರ ವೀಕ್ಷಣೆಗೆ ಸಿಕ್ಕಿತು. ಈ ಘಟನೆಯನ್ನು ಹಲವರು ಕ್ಯಾಮೆರಾದಲ್ಲಿ ಸೆರೆ ಹಿಡಿದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡಿದ್ದಾರೆ. ಸೂರ್ಯನ ಸುತ್ತಲೂ ಆವರಿಸಿದ ಮೋಡದಲ್ಲಿ ಹುದುಗಿರುವ ಮಂಜುಗಡ್ಡೆ ಕಣಗಳ ಮೇಲೆ ಸೂರ್ಯನ ಬೆಳಕು ಹರಿದ ಪರಿಣಾಮ ಆಕರ್ಷಕ ವೃತ್ತ ಗೋಚರಗೊಂಡಿತು. ಕಾಮನಬಿಲ್ಲು ಮಾದರಿಯಲ್ಲಿ ನಡೆದ ವಿದ್ಯಾಮಾನ ಇದಾಗಿದ್ದು, ಬಣ್ಣಗಳಲ್ಲಿ ವ್ಯತ್ಯಾಸ ಕಂಡು ಬಂದಿದೆ. ವಿಭಿನ್ನ ಸ್ಥಳಗಳಲ್ಲಿ ವಿಭಿನ್ನ ಸಮಯದಲ್ಲಿ ಇದು ಹಲವೆಡೆಗಳನ್ನು ಗೋಚರವಾಗುತ್ತದೆ. ಇದು ತೀರಾ ಅಪರೂಪವೇನಲ್ಲ ಎನ್ನುತ್ತಾರೆ ವಿಜ್ಞಾನಿಗಳು..

Advt_NewsUnder_2
Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.