HomePage_Banner_
HomePage_Banner_
HomePage_Banner_
HomePage_Banner_
HomePage_Banner_
HomePage_Banner_

ಫೆ. 7-16: ಕಾಜೂರು ಉರೂಸ್ ಮುಬಾಕರ್‌ಗೆ ದಿನಾಂಕ ಪ್ರಕಟ


ಬೆಳ್ತಂಗಡಿ: ಸುಮಾರು ಹತ್ತು ವರ್ಷಗಳಿಂದ ಕರ್ನಾಟಕ ಉಚ್ಛನ್ಯಾಯಲಯದ ಮೆಟ್ಟಿಲೇರಿದ್ದ ಕಾಜೂರು ಮತ್ತು ಕಿಲ್ಲೂರು ಎರಡು ಜಮಾಅತ್‌ನ ವಿವಾದಕ್ಕೆ ಧಾರ್ಮಿಕ ನೇತಾರರಾದ ಸಯ್ಯಿದ್ ಕುಂಬೋಳ್ ತಂಙಳ್ ನೇತೃತ್ವದಲ್ಲಿ ಸೌಹಾರ್ದಯುತವಾಗಿ ಮತ್ತು ಶಾಶ್ವತವಾಗಿ ಉಚ್ಛನ್ಯಾಯಾಲಯದಲ್ಲೇ ರಾಜಿ ಮಾಡಿಪರಿಹಾರ ಮಾಡಿಕೊಂಡಿದ್ದು ಆ ಹಿನ್ನೆಲೆಯಲ್ಲಿ ಸುಮಾರು 800 ವರ್ಷಗಳ ಇತಿಹಾಸ ಹೊಂದಿರುವ ನಾಡಿನ ಸರ್ವಧರ್ಮೀಯರ ಸಮನ್ವಯ ಕೇಂದ್ರ ಕಾಜೂರು ದರ್ಗಾಶರೀಫ್‌ನಲ್ಲಿ 2020 ನೇ ಫೆ. 7 ರಿಂದ 16 ರವರೆಗೆ ಉರೂಸ್ ಮುಬಾರಕ್ ನಡೆಸಲು ದಿನಾಂಕ ಪ್ರಕಟಿಸಲಾಗಿದೆ ಎಂದು ಕಾಜೂರು ದರ್ಗಾಶರೀಫ್ ಉರೂಸ್ ಸಮಿತಿ ಅಧ್ಯಕ್ಷ ಕೆ.ಯು ಇಬ್ರಾಹಿಂ ಮತ್ತು ಉರೂಸ್ ಸಮಿತಿ ಕಾರ್ಯದರ್ಶಿ ಎಮ್.ಎ ಕಾಸಿಂ ಮಲ್ಲಿಗೆಮನೆ ಪತ್ರಿಕಾಗೋಷ್ಟಿಯಲ್ಲಿ ವಿವರ ನೀಡಿದರು.

ದ.ಕ ಜಿಲ್ಲಾ ಸುನ್ನೀ ಸಂಯುಕ್ತ ಜಮಾಅತ್ ಖಾಝಿ ಸಯ್ಯದ್ ಕೂರತ್ ತಂಙಳ್ ನೇತೃತ್ವದಲ್ಲಿ ನಡೆಯಲಿರುವ ಈ ಉರೂಸ್ ಕಾರ್ಯಕ್ರಮದಲ್ಲಿ ಪ್ರತಿದಿನ ರಾತ್ರಿ ಕರ್ನಾಟಕ ಹಾಗೂ ಕೇರಳ ರಾಜ್ಯದ ಪ್ರಖ್ಯಾತ ಧಾರ್ಮಿಕ ವಿದ್ವಾಂಸರಿಂದ ಧಾರ್ಮಿಕ ಪ್ರವಚನ ನಡೆಯಲಿದ್ದು, ಉರೂಸ್‌ನ 7ನೇ ದಿವಸ ಧಾರ್ಮಿಕ ದಿಕ್ರ್‌ಹಲ್ಕಾ, ಕೊನೆಯ ದಿನ ಸಂಜೆ ಸರ್ವಧರ್ಮಿಯರ ಸೌಹಾರ್ದ ಸಂಗಮ ಆಯೋಜಿಸಲಾಗಿದ್ದು ಇದರಲ್ಲಿ ರಾಜಕೀಯ, ಸಾಮಾಜಿಕ, ಧಾರ್ಮಿಕ ಮುಖಂಡರುಗಳು ಭಾಗವಹಿಸಲಿದ್ದಾರೆ. ಅಂದೇ ರಾತ್ರಿ ಉರೂಸ್ ಸಮಾರೋಪ ನಡೆಯಲಿದ್ದು ಅಖಿಲ ಭಾರತ ಸುನ್ನೀ ವಿದ್ವಾಂಸ ಒಕ್ಕೂಟದ ಮಹಾ ಪ್ರಧಾನ ಕಾರ್ಯದರ್ಶಿ, ಇಂಡಿಯನ್ ಗ್ರ್ಯಾಂಡ್ ಮುಫ್ತಿ ಸುಲ್ತಾನುಲ್ ಉಲಮಾ ಎ.ಪಿ ಉಸ್ತಾದ್ ಆಗಮಿಸಲಿದ್ದಾರೆ. ಸಯ್ಯಿದ್ ಕುಂಬೋಳ್ ತಂಙಳ್ ಅಧ್ಯಕ್ಷತೆ ವಹಿಸಲಿದ್ದಾರೆ ಎಂದರು.
ಜಂಟಿ ಪತ್ರಿಕಾಗೋಷ್ಠಿಯಲ್ಲಿ ಉರೂಸ್ ಸಮಿತಿ ಉಪಾಧ್ಯಕ್ಷ ಕೆ. ಮಹಮ್ಮದ್, ಪ್ರ. ಕಾರ್ಯದರ್ಶಿ ಅಬೂಬಕ್ಕರ್ ಸಿದ್ದೀಕ್ ಜೆ.ಎಚ್, ಕಾರ್ಯದರ್ಶಿ ಎಂ.ಎ. ಕಾಸಿಂ ಮಲ್ಲಿಗೆ ಮನೆ, ಕೋಶಾಧಿಕಾರಿ ಮಹಮ್ಮದ್ ಕಮಾಲ್, ಸದಸ್ಯರಾದ ಅಬೂಬಕ್ಕರ್ ಮಲ್ಲಿಗೆ ಮನೆ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.