ನಾಳ: ನವರಾತ್ರಿ ವಿಶೇಷ ಪೂಜೆ-ಪಕ್ಷ ಭಜನೆ,ಯಕ್ಷಗಾನ ತಾಳಮದ್ದಳೆ

ಗೇರುಕಟ್ಟೆ: ಇಲ್ಲಿಯ ನಾಳ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ನವರಾತ್ರಿ ವಿಶೇಷ ಪೂಜೆ, ಪಕ್ಷ ಭಜನಾ ಕಾರ್ಯಕ್ರಮ ಸೆ.29 ರಿಂದ ಪ್ರಾರಂಭವಾಗಿ ಅ.15 ರವರೆಗೆ ದೇವಸ್ಥಾನದ ಪ್ರಧಾನ ಅರ್ಚಕ ವೇ.ಮೂ.ರಾಘವೇಂದ್ರ ಅಸ್ರಣ್ಣರ ಪೌರೋಹಿತ್ಯದಲ್ಲಿ  ವಿಧಿವತ್ತಾಗಿ ನಡೆಯಲಿದ್ದು, ಸೆ.29 ರಂದು ರಾತ್ರಿ ಚಾರ್ಮಾಡಿ ಕುಂಭಶ್ರೀ ಭಜನಾ ಮಂಡಳಿಯವರಿಂದ ಭಜನಾ ಕಾರ್ಯಕ್ರಮ ಹಾಗೂ ಶ್ರೀ ದುರ್ಗಾಂಬಾ ಮಹಿಳಾ ಯಕ್ಷಗಾನ ಮಂಡಳಿ ತಂಡಬೈಲ್ ಸುರತ್ಕಲ್ ಇವರಿಂದ ಕದಂಬ ಕೌಶಿಕೆಯಕ್ಷಗಾನ ತಾಳಮದ್ದಳೆ ನಡೆಯಿತು.


ಸೆ.30 ರಂದು ರಾತ್ರಿ ನಾಳ ಹೊಸಮನೆ ಬಿ.ವಿ.ಗುಂಡೂರಾವ್ ಇವರಿಂದ ಭಜನಾ ಸೇವೆ, ಅಂಡಿಂಜೆ ಶ್ರೀ ವಿನಾಯಕ ಶ್ರೀ ರಾಮ ಭಜನಾ ಕಾರ್ಯಕ್ರಮ, ಶ್ರೀ ಹಟ್ಟಿಯಂಗಡಿ ಮೇಳದವರಿಂದ ಚಿತ್ರಾಕ್ಷಿ ಪರಿಣಯ ಯಕ್ಷಗಾನ ಬಯಲಾಟ ನಡೆಯಿತು. ಈ ಸಂದರ್ಭದಲ್ಲಿ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ವಸಂತ ಮಜಲು ಹಾಗೂ ಸಮಿತಿ ಪದಾಧಿಕಾರಿಗಳು ಯಕ್ಷಗಾನ ಮಂಡಳಿ ಕಲಾವಿದರನ್ನು ಮತ್ತು ಭಜನಾ, ಯಕ್ಷಗಾನ ಸೇವಾಕರ್ತರಾದ ಕುಂಟಿನಿ ಕೆ.ಎಸ್.ಹರಿಪ್ರಸಾದ್ ದಂಪತಿಯನ್ನು ದೇವಸ್ಥಾನದ ವತಿಯಿಂದ ಗೌರವಿಸಲಾಯಿತು.

 

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.