ಉಜಿರೆಯಲ್ಲಿ ಹೊಗೆ ತಪಾಸಣೆ ಕೇಂದ್ರ ಹಾಗೂ ನ್ಯಾಷನಲ್ ಇನ್ಶ್ಯೂರೆನ್ಸ್ ಪೋರ್ಟಲ್ ಕಚೇರಿ ಉದ್ಘಾಟನೆ

Advt_NewsUnder_1
Advt_NewsUnder_1
Advt_NewsUnder_1

ಉಜಿರೆ: ಇಲ್ಲಿನ ಮುಖ್ಯರಸ್ತೆಯ ಅನಂತ್ ಮೋಟಾರ್‍ಸ್‌ನ ಅತ್ರಿ ವಾಣಿಜ್ಯ ಮಳಿಗೆಯಲ್ಲಿ ನೂತನವಾಗಿ ಆರಂಭವಾದ ಹೊಗೆ ತಪಾಸಣಾ ಕೇಂದ್ರ ಮತ್ತು ನ್ಯಾಷನಲ್ ಇನ್ಸ್ಯೂರೆನ್ಸ್ ಪೋರ್ಟಲ್ ಕಚೇರಿ ಅ. 1 ರಂದು ಉದ್ಘಾಟನೆಗೊಂಡಿತು.

ಸಾಮಾಜಿಕ ಅರಣ್ಯ ವಿಭಾಗದ ವಲಯ ಅರಣ್ಯಾಧಿಕಾರಿ ಗಣೇಶ ತಂತ್ರಿ ದೀಪಬೆಳಗಿ ಉದ್ಘಾಟಿಸಿದರು. ನ್ಯಾಷನಲ್ ಇನ್ಶ್ಯೂರೆನ್ಸ್ ಪೋರ್ಟಲ್ ಕಚೇರಿಯನ್ನು ಇನ್ಸ್ಯೂರೆನ್ಸ್ ಕಂಪೆನಿಯ ಬಂಟ್ವಾಳ ಅಭಿವೃದ್ಧಿ ಅಧಿಕಾರಿ ಹರಿದಾಸ್ ಎಸ್.ಎಂ ನೆರವೇರಿಸಿದರು. ಈ ಸಂದರ್ಭ ಕರ್ಣಾಟಕ ಬ್ಯಾಂಕ್ ಉಜಿರೆ ಶಾಖೆ ಮೆನೇಜರ್ ಅರವಿಂದ್, ಹಿರಿಯ ಉದ್ಯಮಿ ಸದಾನಂದ ಕಾಮತ್ ನಿಡಿಗಲ್, ಪತ್ರಕರ್ತರ ಸಂಘದ ಕಾರ್ಯದರ್ಶಿ ಅಶ್ರಫ್ ಆಲಿಕುಂಞಿ, ಲಕ್ಷ್ಮೀನಾರಾಯಣ ಸೋಮಯಾಗಿ, ಅವರ ಪತ್ನಿ ರೋಹಿಣಿ ಎಲ್ ಸೋಮಯಾಗಿ, ಕುಟುಂಬದ ಹಿರಿಯರಾದ ಸುಶೀಲಮ್ಮ ಅವರು ಉಪಸ್ಥಿತರಿದ್ದರು.


ಹೊಗೆ ತಪಾಸಣಾ ಕೇಂದ್ರದ ಮುಖ್ಯಸ್ಥ ವಿಕ್ರಾಂತ್ ಸೋಮಯಾಗಿ ಮತ್ತು ಇನ್ಸ್ಯೂರೆನ್ಸ್ ಪೋರ್ಟಲ್ ಕಚೇರಿ ಮುಖ್ಯಸ್ಥೆ ಸರಿತಾ ವಿಕ್ರಾಂತ್ ಸೋಮಯಾಗಿ ಆಹ್ವಾನಿತರನ್ನು ಬರಮಾಡಿಕೊಂಡು ಗೌರವಿಸಿದರು.
ಅನಂತ್ ಗ್ರೂಪ್ ಆಫ್ ಕಂಪೆನಿಯ ಮೇನೇಜಿಂಗ್ ಡೈರೆಕ್ಟರ್ ವೀಣಾ ಅನಂತ್‌ರಾಮ್ ಸೋಮಯಾಗಿ ವಂದನಾರ್ಪಣೆಗೈದು ಎಲ್ಲರ ಸಹಕಾರ ಕೋರಿದರು.
ಅನಂತ್ ಗ್ರೂಪ್‌ಆಫ್ ಕಂಪೆನಿಯ ಸಹಸಂಸ್ಥೆಗಳಾದ ವಿ.ಎಸ್.ಸಿ.ಎಸ್ ಶಾಮಿಯಾನ ಮತ್ತು ಈವೆಂಟ್ ಮೆನೇಜ್‌ಮೆಂಟ್, ಅನಂತ್ ಮೋಟಾರ್‍ಸ್, ಅನಂತ್ ಬೆಡ್‌ಮಾರ್ಟ್, ಅನಂತ್ ಹೆಲ್ಮೆಟ್ ಶೋರೂಮ್, ಅನಂತ್ ಆಯಿಲ್ ಸೆಂಟರ್‌ನ ಸಮೂಹದ ಸಿಬ್ಬಂದಿಗಳು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.