ಉಜಿರೆ: ದೇವಾಂಗ ಸಮಾಜ ವಲಯದಿಂದ ಸದಸ್ಯತನ ನೊಂದಾವಣಿ ಪತ್ರ ವಿತರಣೆ

ಉಜಿರೆ: ದೇವಾಂಗ ಸಮಾಜ ಉಜಿರೆ ವಲಯದ ಸದಸ್ಯತನ ನೊಂದಾವಣಿ ಪತ್ರ ವಿತರಣಾ ಕಾರ್ಯಕ್ರಮವನ್ನು ಇತ್ತೀಚೆಗೆ ಶ್ರೀ ಸಿದ್ದಿವಿನಾಯಕ ಭಜನಾ ಮಂದಿರ ವಿನಾಯಕನಗರದಲ್ಲಿ ನಡೆಯಿತು.
ದೇವಾಂಗ ಸಮಾಜ ಉಜಿರೆ ವಲಯದ ಅಧ್ಯಕ್ಷ ಪರಮೇಶ್ವರ್ ಸದಸ್ಯ ನೊಂದಾವಣಿ ಪತ್ರ ವಿತರಣೆ ಮಾಡುತ್ತಾ, ಪ್ರತಿಯೊಬ್ಬ ಸದಸ್ಯರು ಸಮಾಜದ ಎಲ್ಲಾ ಕಾರ್ಯಕ್ರಮಕ್ಕೆ ಸಹಕರಿಸಿದರೆ ಅಭಿವೃದ್ಧಿ ಸುಲಭ ಸಾಧ್ಯ ಎಂದರು. ವಲಯ ಕಾರ್ಯದರ್ಶಿ ರವಿ ನೆಯ್ಯಾಲು ಘಟಕವಾರು ಸದಸ್ಯತನದ ಇದುವರೆಗಿನ ಸಾಧನೆಯನ್ನು ತಿಳಿಸಿದರು. ವೇದಿಕೆಯಲ್ಲಿ ಉಪಾಧ್ಯಕ್ಷ ಕ್ರಷ್ಣಪ್ಪ. ಬಿ ಕೆಮ್ಮಾರ, ರಾಜ್ ಗೋಪಾಲ್ ಮುಂಡಾಜೆ, ರಾಜಪ್ಪ ನೇಕಾರ ವಿನಾಯಕ ನಗರ, ಲೋಕಯ್ಯ ನೇಕಾರ ವಿನಾಯಕ ನಗರ, ವಲಯ ಕೋಶಾಧಿಕಾರಿ ವಸಂತ ಕಾಶಿಬೆಟ್ಟು, ಉಪಸ್ಥಿತರಿದ್ದರು. ಭಗೀರಥರ ಸ್ವಾಗತಿಸಿದರು. ರವಿ ಕಾರ್ಯಕ್ರಮ ರೂಪಿಸಿ, ಸಂಘಟನೆ ಕಾರ್ಯದರ್ಶಿ ರೋಹಿತ್ ಕಾಶಿಬೆಟ್ಟು ವಂದಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.