ಶ್ರೀ ಗುರುದೇವ ವಿವಿಧೋದ್ದೇಶ ಸಹಕಾರ ಸಂಘ: ಬ್ರಹ್ಮಾವರದಲ್ಲಿ 11ನೇ ಶಾಖೆ ಉದ್ಘಾಟನೆ

ಬ್ರಹ್ಮಾವರ : ಸಹಕಾರಿ ಸಂಘದಲ್ಲಿ ಇಂದು ಹಲವು ಸವಾಲುಗಳಿವೆ. ಎಲ್ಲ ಸವಾಲುಗಳ ನಡುವೆಯೂ 11ನೇ ಶಾಖೆಯನ್ನು ತೆರೆದಿರುವುದು ನಿಜಕ್ಕೂ ಶ್ರಮದಾಯಕ ಮತ್ತು ಸಾರ್ಥಕವಾದ ಕೆಲಸ ಎಂದು ಮೀನುಗಾರಿಕೆ ಮತ್ತು ಬಂದರು ಹಾಗೂ ಮುಜರಾಯಿ ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ಬೆಳ್ತಂಗಡಿಯ ಶ್ರೀ ಗುರುದೇವ ವಿವಿಧೋದ್ದೇಶ ಸಹಕಾರ ಸಂಘದ ಈ ಸಂಸ್ಥೆಯ 11ನೇ ನೂತನ ಶಾಖೆಯನ್ನು ಬ್ರಹ್ಮಾವರದ ಶ್ರೀಲಕ್ಷ್ಮೀ ಆರ್ಕೆಡ್‌ನಲ್ಲಿ ಉದ್ಘಾಟಿಸಿ ಅವರು ಮಾತನಾಡಿದರು.
ಶಾಖೆಯ ಭದ್ರತಾ ಕೋಶವನ್ನು ಉದ್ಘಾಟಿಸಿದ ದ.ಕ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್, ಮಂಗಳೂರು ನಿರ್ದೇಶಕ ರಾಜು ಪೂಜಾರಿ ಮಾತನಾಡಿ, ಈ ಸಂಘ ಉತ್ತಮ ಸೇವೆಯ ಮೂಲಕ ಜನಸಾಮಾನ್ಯರಿಗೆ ಸ್ಪಂದಿಸುವ ಸಂಸ್ಥೆಯಾಗಿದೆ. ಬಾಗಲಕೋಟೆ ರಾಜ್ಯಮಟ್ಟದ ಸಹಕಾರಿ ಸಪ್ತಾಹ ಕಾರ್ಯಕ್ರಮದಲ್ಲಿ ರಾಜ್ಯ ಮಟ್ಟದ ಉತ್ತಮ ಸಹಕಾರಿ ಸಂಘಗಳ ಗುರುತಿಸಿಕೊಳ್ಳಲಿ ಎಂದು ಹಾರೈಸಿದರು. ಶ್ರೀ ಗುರುದೇವ ವಿವಿಧೋದ್ದೇಶ ಸ.ಸಂ.ದ ಅಧ್ಯಕ್ಷ ಎನ್, ಪದ್ಮನಾಭ ಮಾಣಿಂಜ ಅಧ್ಯಕ್ಷತೆ ವಹಿಸಿದ್ದರು. ಚಾಂತಾರು ಗ್ರಾ.ಪಂ ಅಧ್ಯಕ್ಷೆ ಸರಸ್ವತಿ, ಶ್ರೀನಾರಾಯಣಗುರು ಸೇವಾಸಮಿತಿ ಬ್ರಹ್ಮಾವರ ಅಧ್ಯಕ್ಷ ಬಿ.ಎನ್. ಶಂಕರ್ ಪೂಜಾರಿ, ಬಿಲ್ಲವ ಯುವ ವೇದಿಕೆ ಗೌರವಾಧ್ಯಕ್ಷ ಅಚ್ಯುತ್ ಪೂಜಾರಿ ಕಲ್ಮಾಡಿ, ಬ್ರಹ್ಮಾವರ ಮೂರ್ತೆದಾರರ ಸೇವಾ ಸಹಕಾರಿ ಸಂಘದ ಅಧ್ಯಕ್ಷೆ ಶಂಕರ ಪೂಜಾರಿ ಕುಕ್ಕುಂಡೆ ಉದ್ಯಮಿ ರಾಜಶೆಟ್ಟಿ ಬಿರ್ತಿ, ಯುವವಾಹಿನಿ ಯಡ್ತಾಡಿ  ಘಟಕದ ಅಧ್ಯಕ್ಷೆ ಗೀತಾ ಪೂಜಾರಿ, ಉದ್ಯಮಿ ಹಾಜಿ ಕೆ.ಪಿ ಇಬ್ರಾಹಿಂ ಮಟಪಾಡಿ ಇದ್ದರು. ಎಂ.ಮೋನಪ್ಪ ಪೂಜಾರಿ ಕಂಡೆತ್ಯಾರು ಪ್ರಾಸ್ತಾವಿಕವಾಗಿ ಮಾತನಾಡಿದರು. ನಿರ್ದೇಶಕ ಭಗೀರಥ ಜಿ. ಸ್ವಾಗತಿಸಿದರು. ಚಂದ್ರಶೇಖರ್ ವಂದಿಸಿದರು. ಅಶ್ವತ್ಥ್ ಕುಮಾರ್ ನಿರೂಪಿಸಿದರು.

ವಿದ್ಯಾರ್ಥಿ ವೇತನ, ನೆರವು ಹಸ್ತಾಂತರ
ಬ್ರಹ್ಮಾವರ ಹೋಲಿ ಫ್ಯಾಮಿಲಿ ಚರ್ಚ್‌ನ ಧರ್ಮ ಗುರು ರೆ.ಫಾ ವಿಕ್ಟರ್ ಪೆರ್ನಾಂಡಿಸ್, ಮಾಜಿ ಶಾಸಕ.ಕೆ ವಸಂತ ಬಂಗೇರ, ಉಡುಪಿ ಶ್ರೀ ಮಹಾಲಕ್ಷ್ಮೀ ಕೋ ಅಪರೇಟಿವ್ ಬ್ಯಾಂಕ್‌ನ ಅಧ್ಯಕ್ಷ ಯಶಪಾಲ್ ಸುವರ್ಣ ಶುಭ ಹಾರೈಸಿದರು. ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ಹಾಗೂ ಆಶಕ್ತರಿಗೆ ಧನ ಸಹಾಯ ನೀಡಲಾಯಿತು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.